ಯುವಜನ ಆಯೋಗಕ್ಕಾಗಿ ರಾಜ್ಯದಲ್ಲಿ ಯುವಾಂದೋಲನ
Team Udayavani, Jan 26, 2019, 9:17 AM IST
ಕೋಲಾರ: ಯುವ ಜನರ ಗೊಂದಲ ಸಮಸ್ಯೆ ನಿವಾರಣೆಗೆ ರಾಜ್ಯದಲ್ಲಿ ಕೇರಳ ರಾಜ್ಯದ ಮಾದರಿ ಯುವ ಆಯೋಗ ಅತ್ಯಗತ್ಯವಾಗಿದ್ದು, ಸರಕಾರ ಯುವ ಆಯೋಗವನ್ನು ಆರಂಭಿಸಲು ಒತ್ತಾಯಿಸಿ ರಾಜ್ಯಾದ್ಯಂತ ಯುವಾಂದೋಲನ ನಡೆಸಲಾಗುತ್ತಿದೆ ಎಂದು ಸಂವಾದ ಯುವ ಸಂಪನ್ಮೂಲ ಕೇಂದ್ರದ ಮಧುಸೂದನ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಆಯೋಗದ ರೀತಿ ಯುವಜನರಿಗೆ ಬೆಂಬಲವಾಗಿ ಹಾಗೂ ಅವರ ಹಕ್ಕುಗಳ ಜತೆ ಮತ್ತಷ್ಟು ಹಕ್ಕುಗಳನ್ನು ಜಾರಿಮಾಡಿ ಅವುಗಳು ಸಾಕಾರಗೊಳ್ಳಲು ಯುವಜನ ಆಯೋಗ ಬೇಕೆಂದು ಯುವ ಮುನ್ನಡೆ ಹಾಗೂ ಕೆಲವು ಸಮಾನ ಮನಸ್ಕ ಸಂಘಟನೆಗಳು ಯುವಜನ ಆಯೋಗದ ಹಕ್ಕೊತ್ತಾಯಕ್ಕಾಗಿ ಯುವಾಂದೋಲನವನ್ನು ರಾಜ್ಯಾದ್ಯಂತ ಹಲವು ತಿಂಗಳು ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.9ರಿಂದ ಆಂದೋಲನ: ಕಾರ್ಯಕರ್ತರು, ಯುವಜನ ಆಯೋಗದ ಹಕ್ಕೊತ್ತಾಯವನ್ನು ಸರ್ಕಾ ರದ ಗಮನಕ್ಕೆ ತರುವ ನಿಟ್ಟಿನಲ್ಲಿ ಯುವಾಂದೋಲನದ ಸಲುವಾಗಿ ಯುವ ಸಮಯವನ್ನು ಆಚರಿಸುವ ಮುಖೇನ ಹಕ್ಕೊತ್ತಾಯವನ್ನು ಪಡೆಯಲು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಫೆ.9 ರಂದು ವಿವಿಧ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮುಂತಾದ ಜನಸಂದಣಿ ಜಾಗಗಳಲ್ಲಿ ಹಾಡು, ಘೋಷಣೆ, ನಾಟಕ, ಕರಪತ್ರ, ಭಿತ್ತಿಪತ್ರ ಮತ್ತು ಭಾಷಣಗಳ ಮೂಲಕ ನಡೆಯುತ್ತದೆ. ಇದರ ಜತೆಗೆ ಸಾಮಾಜಿಕ ಜಾಲತಾಣ ಮೂಲಕ ಅಷ್ಟೇ ಅಲ್ಲದೆ ಜಿಲ್ಲೆಯ ಪ್ರಜ್ಞಾ ವಂತರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಅಲ್ಲಲ್ಲಿ ಈ ಕುರಿತು ಸಭೆಗಳು, ಕಾರ್ಯಾಗಾರ, ಜಾಥಾ ಮುಂತಾದ ಆಯಮಗಳಲ್ಲಿ ಯುವಾಂದೋಲನಕ್ಕೆ ದನಿಗೂಡಿಸುತ್ತಾರೆ ಎಂದು ತಿಳಿಸಿದರು.
ಫೆ.18ಕ್ಕೆ ಸಿಎಂಗೆ ಮನವಿ: ಫೆ.18 ರಂದು ಬೆಂಗಳೂರಿನಲ್ಲಿ ನಡೆಯುವ ಯುವಜನ ಹಕ್ಕಿನ ಮೇಳದಲ್ಲಿ ರಾಜ್ಯದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಸರ್ವರಿಗೂ ಸಮಪಾಲು-ಸಮಬಾಳು: ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜಿ.ಜೆ.ನಾಗರಾಜ್ ಮಾತ ನಾಡಿ, ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಉತ್ತಮ ವಾದ ಹಕ್ಕುಗಳನ್ನು ನೀಡಿದೆ. ಜಗತ್ತಿನ ಅತಿದೊಡ್ಡ ಮಹತ್ವಪೂರ್ಣವಾದ ಸಂವಿಧಾನ ಎಂದರೆ ಭಾರತ ಸಂವಿಧಾನ. ಈ ಸಂವಿಧಾನ ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಹಲವು ಹಕ್ಕುಗಳು, ಅಂಶಗಳು ಒಳಗೊಂಡಿದ್ದರು ಅವು ಸಕಾರಗೂಳ್ಳುವಲ್ಲಿ, ಸೋತಿರುವುದು ಸತ್ಯ. ಅಂತಹ ಸಾಲಿನಲ್ಲಿ ಯುವಜನರ ಸಮಸ್ಯೆಗಳಿಗೆ ಸವಾಲುಗಳಿಗೆ ಕನಸುಗಳಿಗೆ ನೆಲೆಯಾಗಿ ಬೆಂಬಲವಾಗಿ ಯುವಜನ ಹಕ್ಕುಗಳು ಇದ್ದರೂ ಅವು ಸಕಾರಗೊಳ್ಳುತ್ತಿಲ್ಲ ಎಂಬುದಕ್ಕೆ ಈ ಯುವಜನ ಆಯೋಗದ ಕೂಗಿನ ಯುವಾಂದೋಲನವೇ ಸಾಕ್ಷಿ ಎಂದು ವಿಷಾದ ವ್ಯಕ್ತಪಡಿಸಿದರು.
ಯುವಜನ ಆಯೋಗ ಬಂದರೆ ಯುವಜನರ ವಿಕಸನಗೊಂಡು ದೇಶದ ಅಭಿವೃದ್ಧಿಗೆ ಸಹಾಯ ವಾಗುತ್ತದೆ. ಯುವರಾಷ್ಟ್ರ ಎಂಬ ಭಾರತಕ್ಕೆ ವಿಶ್ವಾದ್ಯಂತ ಇನ್ನೂ ಹೆಚ್ಚಿನ ಮನ್ನಣೆ ಸಿಗುತ್ತದೆ. ಅದರಿಂದ ಹಕ್ಕುಗಳನ್ನು ಅನುಷ್ಠಾನಗೊಳ್ಳಲು ಮಧ್ಯಸ್ಥಿಕೆಯಾಗಿ ಕೆಲಸ ಮಾಡುವ ಸರ್ಕಾರದ ವ್ಯವಸ್ಥೆಯು ನಿರ್ಮಾಣವಾಗಬೇಕು. ಕೇರಳ ರಾಜ್ಯದಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಯುವಜನ ಆಯೋಗ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಯುವ ಮುನ್ನಡೆ ಕಾರ್ಯಕರ್ತರಾದ ಅರವಿಂದ್, ಸುನಿತಾ, ಶಾಂತಕುಮಾರ್, ಮಣಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.