ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ
ಬಾಕಿ ಗೌರವಧನ ಕೂಡಲೇ ಬಿಡುಗಡೆ ಮಾಡಿ ಡೀಸಿ ಕಚೇರಿ ಮುಂದೆ ಅಂಗನವಾಡಿ ನೌಕರರ ಪ್ರತಿಭಟನೆ
Team Udayavani, Jul 11, 2019, 4:03 PM IST
ಕೋಲಾರ ಡಿಸಿ ಕಚೇರಿ ಮುಂದೆ ಬುಧವಾರ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಂಗನವಾಡಿ ನೌಕರರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕೋಲಾರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭ, ಕೇಂದ್ರದ ಹಾಗೂ ಐದು ತಿಂಗಳಿನಿಂದ ಬಾಕಿ ಇರುವ ಗೌರವಧನ ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿತು.
ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು 1975ರಲ್ಲಿ ಆರಂಭವಾದ ಐಸಿಡಿಎಸ್ ಯೋಜನೆಯು ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಪ್ರಾಯಪೂರ್ವ ಬಾಲಕಿಯರ ಸರ್ವತೋಮುಖ ಬೆಳವಣಿಗೆಗೆ ಬಹಳ ಪ್ರಮುಖ ಪಾತ್ರ ವಹಿಸಿದೆ.
ಈ ಯೋಜನೆಯಿಂದ ರಾಜ್ಯದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಯೋಜನೆಯನ್ನು ಸಬಲೀಕರಿಸುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ದಾಖ ಲಾತಿ ಹೆಚ್ಚಿಸಲು ಅಂಗನವಾಡಿ ಕೇಂದ್ರ ಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಸೌಲಭ್ಯವಿಲ್ಲದಿದ್ದರೂ ಕಾರ್ಯ ನಿರ್ವಹಣೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ 3-4 ತಿಂಗಳ ಗೌರವಧನ ಬಂದಿಲ್ಲ, ಕೋಳಿ ಮೊಟ್ಟೆ, ತರಕಾರಿ ಹಣ 4-5 ತಿಂಗಳಿಂದ ಬಂದಿಲ್ಲ, ಸರಿಯಾಗಿ ಗ್ಯಾಸ್ ವಿತರಣೆಯಿಲ್ಲ, ಅಂಗನವಾಡಿ ನೌಕರರು ಕಾಯಿಲೆ ಬಿದ್ದಾಗ ಮತ್ತು ಮರಣ ಹೊಂದಿದಾಗ ಬರುವ ಹಣ ಬರುತ್ತಿಲ್ಲ. ಮಾತ್ರವಲ್ಲದೆ ನಿವೃತ್ತಿಯಾದ ನೌಕರರಿಗೆ ಏನೊಂದೂ ಸೌಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿಯೂ ಅಂಗನ ವಾಡಿ ನೌಕರರು ದುಡಿಯುತ್ತಿದ್ದಾರೆ ಎಂದರು.
ಏನನ್ನು ಸಕಾಲಕ್ಕೆ ಪೂರೈಸದೇ ಅಂಗನವಾಡಿ ನೌಕರರ ಮೇಲೆ ಶಿಸ್ತು ಕ್ರಮ ಮಾತ್ರ ಜರುಗುತ್ತಲೇ ಇದೆ ಎಂದು ಅಂಗನವಾಡಿ ನೌಕರರು ಆಕ್ರೋಷ ವ್ಯಕ್ತಪಡಿಸಿದರು.
ಪಿಂಚಣಿ ನೀಡಿ: ನಿವೃತ್ತ ಕಾರ್ಯಕರ್ತೆ ಸಹಾಯಕಿಗೆ ಇಡುಗಂಡು ತಕ್ಷಣ ಬಿಡುಗಡೆ ಆಗಬೇಕು, ಇಲಾ ಖೆಯ ಲೋಪದೋಷಗಳಿಂದ ಪಾನ್‌ಕಾರ್ಡ್ ನೀಡದವರಿಗೆ – ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು, ಕಾರ್ಯಕರ್ತೆ- ಸಹಾಯಕಿ ಯರಿಗೆ ಪ್ರಾನ್ ಕಾರ್ಡ್ ನೀಡದವರಿಗೆ ತಕ್ಷಣ ನೀಡಬೇಕು, 2016 ಏಪ್ರಿಲ್ನಿಂದ ಆಯ್ಕೆ ಆದ ಕಾರ್ಯಕರ್ತೆ ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ 3000 ರೂ. ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮದುವೆ ಯಾಗದ ಹೆಣ್ಣು ಮಕ್ಕಳಿಗೆ ಎಂಬ ಷರತ್ತನ್ನು ತೆಗೆದು ಕುಟುಂಬ ದವರಿಗೆ ಎಂದು ತಿದ್ದುಪಡಿಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ನಾಗರತ್ನ, ಮುಖಂಡ ರಾದ ಜಿ.ಈಶ್ವರಮ್ಮ, ಕಲ್ಪನಾ, ಮಂಜುಳಾ, ಲಕ್ಷ್ಮೀ ದೇವಮ್ಮ, ಎಂ.ಲಕ್ಷ್ಮ್ಮಮ್ಮ, ಸುಜಾತ, ಪಿ.ಸಿ.ಜಯಮ್ಮ, ಆಂಜಿಲಮ್ಮ, ನೇತ್ರಾವತಿ, ಶೈಲಾ, ಅಮುದಾ, ರತ್ನಾ, ಇಂದ್ರಾಣಿಯಮ್ಮ, ಸುಶೀಲಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.