ರಾಜ್ಯವನ್ನು ರೋಗಮುಕ್ತ , ಯೋಗಯುಕ್ತಮಾಡಿ


Team Udayavani, Dec 2, 2019, 6:30 PM IST

2-December-31

ಕೂಡ್ಲಿಗಿ: ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಕ್ಯಾನ್ಸರ್‌ಗೂ ಔಷಧ ಗಿಡಗಳನ್ನು ಬೆಳೆಸಲಾಗಿದ್ದು ಕ್ಯಾನ್ಸರ್‌ಪೀಡಿತರಿಗೆ ರೋಗಮುಕ್ತಮಾಡಲು ಪೀಠ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ರೋಗಮುಕ್ತ, ಯೋಗಯುಕ್ತ ರಾಜ್ಯವನ್ನು ಮಾಡಲು ಪಣತೊಡಲಾಗಿದೆ ಎಂದು ರಾಜ್ಯ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮಿ ತಿಳಿಸಿದರು.

ಅವರು ತಾಲೂಕಿನ ಬಣವಿಕಲ್ಲು ಗ್ರಾಮದ ಪಂಚಮಸಾಲಿ ಗ್ರಾಮಘಟಕದಿಂದ ಆಯೋಜಿಸಿದ್ದ ಪಂಚಮಸಾಲಿ ಸಮಾಜದ 25ನೇ ವರ್ಷಾಚರಣೆಯ ಬೆಳ್ಳಿ ಬೆಡಗು ಕಾರ್ಯಕ್ರಮ ಹಾಗೂ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ 196ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯಂತೆ ಮುಂದಿನ ದಿನಗಳಲ್ಲಿ ಬೆಳವಾಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮಾಜಿಯನ್ನು ಸ್ಮರಿಸುವ ಕಾರ್ಯ ಮಾಡಬೇಕಿದೆ. ಇವರು ಸಹ ಪಂಚಮಸಾಲಿ ಸಮಾಜದಿಂದ ಹುಟ್ಟಿ ಇಡೀ ದೇಶಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಪಂಚಮಸಾಲಿ ಸಮಾಜದವರು ತಮ್ಮ ಜೊತೆಗೆ ವಾಸ ಮಾಡುವ ಇತರೆ ಸಮಾಜದವರನ್ನು ಗೌರವಿಸುವ ಮೂಲಕ ಸೌಹಾರ್ತೆಯಿಂದ ಜೀವನ ಮಾಡಿದಾಗ ಮಾತ್ರ ಸಮಾಜಕ್ಕೆ ಕೀರ್ತಿ ಬರಲು ಸಾಧ್ಯ ಎಂದರು.

ಜನವರಿ 14, 15ರಂದು ಹರಜಾತ್ರೆ: ಪ್ರತಿವರ್ಷ ಜನವರಿ 14 ಮತ್ತು 15ರಂದು ಹರಜಾತ್ರೆಯನ್ನು ಹರಿಹರದ ಪಂಚಮಸಾಲಿ ಪೀಠದಲ್ಲಿ ಆಯೋಜಿಸಲಾಗಿದ್ದು ಪೀಠದಲ್ಲಿ ಪ್ರಸಾದದ ವ್ಯವಸ್ಥೆ ನಿರಂತರವಾಗಿರುತ್ತದೆ. ಪಂಚಮಸಾಲಿ ಸಮಾಜದವರು ಪ್ರತಿವರ್ಷ ಹರ ಜಾತ್ರೆಗೆ ಆಗಮಿಸುವ ಮೂಲಕ ಸಮಾಜಸೇವೆಗೆ ಮುಂದಾಗಬೇಕಿದೆ ಎಂದರು. ಹರಿಹರ ಪೀಠದಲ್ಲಿ ಆರೋಗ್ಯ ದಾಸೋಹ, ಅನ್ನ ದಾಸೋಹ ಹಾಗೂ ಧ್ಯಾನ ದಾಸೋಹವನ್ನು ನಿರಂತರವಾಗಿ ನಡೆದುಕೊಂಡು ಹೋಗುವ ಯೋಜನೆ ಇದ್ದು ಇದಕ್ಕೆ ಭಕ್ತರು ಸಹಕರಿಸಬೇಕಿದೆ ಎಂದರು.

ಬಣವಿಕಲ್ಲು ಗ್ರಾಮಘಟಕದ ಕಾರ್ಯಕ್ರಮ ಕಳೆದ ಬಾರಿಯ ತಾಲೂಕು ಮಟ್ಟದ ಸಮಾವೇಶವನ್ನು ಮೀರಿಸುಂತೆ ಸಮಾಜದ ಬಂಧುಗಳು ಸೇರಿರುವುದು ಸಂತಸ ತಂದಿದೆ ಎಂದರು.

ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಕೆ. ಸತೀಶ್‌ ಉಪನ್ಯಾಸ ನೀಡಿ, ವಿಶ್ವದ ಯಾವ ದೇಶಕ್ಕೂ ಇಲ್ಲದ ಇತಿಹಾಸ ನಮ್ಮ ದೇಶಕ್ಕಿದ್ದು 3ಸಾವಿರ ವರ್ಷಗಳ ಇತಿಹಾಸ ಭಾರತಕ್ಕಿದೆ ಕಿತ್ತೂರು ಚನ್ನಮ್ಮ ತನ್ನ ಸಂಸ್ಥಾನ ಉಳಿಸಿಕೊಳ್ಳುವುದರ ಜೊತೆಗೆ ಭಾರತ ದೇಶದ ಸ್ವಾತಂತ್ರ್ಯಕ್ಕೆ ಕಾರಣವಾಗಿದ್ದು ಇವಳ ಸಮಾಜಸೇವೆ, ಶೌರ್ಯ,ದೇಶಪ್ರೇಮ ಇಂದಿನ ಮಹಿಳೆಯರಿಗೆ ಆದರ್ಶವಾಗಿದೆ ಎಂದರು.

ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ. ನಾಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕೂಡ್ಲಿಗಿಯ ತಾಲೂಕು ಪಂಚಮಸಾಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಎಚ್‌. ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.
ಕುಮಾರಸ್ವಾಮಿ, ರಾಜ್ಯ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಹನಸಿ ಸಿದ್ದೇಶ, ಕೂಡ್ಲಿಗಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಟಿ.ಜಿ. ಮಲ್ಲಿಕಾರ್ಜುನಗೌಡ, ಜಿ.ಪಂ. ಸದಸ್ಯರಾದ ಎಚ್‌.ರೇವಣ್ಣ, ಆಶಾ ತಿಪ್ಪೇಸ್ವಾಮಿ, ತಾಪಂ ಸದಸ್ಯರಾದ ಜಿ.ಸಿದ್ದಮ್ಮ ಅಜ್ಜನಗೌಡ, ರತ್ನಮ್ಮ ಲಿಂಗನಗೌಡ, ಕೆ.ಜಿ.ಗುರುಸಿದ್ದನಗೌಡ, ಎಚ್‌.ಬಿ. ಶರಣನಗೌಡ ಸೇರಿದಂತೆ ಪಂಚಮಸಾಲಿ ಸಮಾಜದ ಬಣವಿಕಲ್ಲು ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರದ ಮೆರವಣಿಗೆ ಹಾಗೂ ಬೈಕ್‌ ರ್ಯಾಲಿ ನಡೆಯಿತು. ಪ್ರಶಾಂತಗೌಡ ಸ್ವಾಗತಿಸಿದರು. ಸಿದ್ದಾರಾಧ್ಯ ನಿರೂಪಿಸಿದರು. ಬಣವಿಕಲ್ಲು ಯರ್ರಿಸ್ವಾಮಿ ವಂದಿಸಿದರು.

ಟಾಪ್ ನ್ಯೂಸ್

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.