ನರೇಗಾ ಅನುದಾನ 11 ಕೋಟಿ ಬಾಕಿ

Team Udayavani, Dec 17, 2019, 4:22 PM IST

kopala-tdy-1

ಕೊಪ್ಪಳ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಮೆ ಮಾಡಿದ ಕೂಲಿಕಾರರಿಗೆ ಸರ್ಕಾರದಿಂದ ಕಳೆದ ಎರಡು ತಿಂಗಳಿಂದ ಕೂಲಿ ಹಣವೇ ಬಂದಿಲ್ಲ. ಈ ವರೆಗೂ 11 ಕೋಟಿ ಬರುವುದು ಬಾಕಿಯಿದೆ. ಕೂಲಿಗಾಗಿ ಜನರು ಕಾಯುವಂತ ಸ್ಥಿತಿ ಎದರಾಗಿದೆ.

ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ಒಂದು ವರ್ಷ ಮಳೆಯಾದರೆ ಮತ್ತೂಂದು ವರ್ಷ ಮಳೆಯ ಅಭಾವಎದುರಾಗುತ್ತಿದೆ. ಇದರಿಂದ ಬೇಸತ್ತ ಇಲ್ಲಿನ ಜನತೆ ದುಡಿಮೆ ಅರಸಿ ದೂರದ ಊರುಗಳಿಗೆ ಗುಳೆ ಹೋಗುತ್ತಾರೆ. ಇದು ಕೊಪ್ಪಳ ಜಿಲ್ಲೆಯೊಂದರ ಕಥೆಯಲ್ಲ. ಅನ್ಯ ಜಿಲ್ಲೆ ಸ್ಥಿತಿಯೂ ಹೀಗೆ ಇವೆ. ಇದೆಲ್ಲವನ್ನು ಅರಿತು ಕೇಂದ್ರ ಸರ್ಕಾರವು ಈ ಹಿಂದೆಯೇ ರಾಷ್ಟ್ರೀಯ ಮಹಾತ್ಮ ಗಾಂದಿ  ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದೆ. ಆದರೆ ಈ ಯೋಜನೆಯಲ್ಲಿ ಸಕಾಲಕ್ಕೆ ವೇತನ ಪಾವತಿ ಮಾಡಲ್ಲ ಎನ್ನುವ ವೇದನೆ ಕಾರ್ಮಿಕರಲ್ಲಿ ಈಗಲೂ ಕಾಡುತ್ತಿದೆ.

ಗುಳೆ ಹೋಗಬೇಡಿ ಎನ್ನುವ ಜಿಪಂ: ಜಿಲ್ಲೆಯಲ್ಲಿ ಜನರಿಗೆ ಉದ್ಯೋಗ ಖಾತ್ರಿ ಕೆಲಸ ಕೊಡುತ್ತೇವೆ. ಎಲ್ಲಿಯೂ ಗುಳೆ ಹೋಗಬೇಡಿ ಎಂದು ಜಿಪಂ, ತಾಪಂ ಹಾಗೂ ಗ್ರಾಪಂಗಳು ಡಂಗೂರ ಸಾರಿಸುತ್ತಿವೆ. ಕೆಲಸ ಮಾಡಿಸಿಕೊಂಡು ಕೂಲಿಹಣ ಕೊಡಲು ಗೋಳಾಡಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಲ್ಲಿ ಎರಡು ತಿಂಗಳಿಂದ 11 ಕೋಟಿ ರೂ. ಕೂಲಿ ಹಣ ಬರುವುದು ಬಾಕಿಯಿದೆ. ಇದರಿಂದ ಜನರು ಕೂಲಿ ಕೆಲಸ ಮಾಡಲು ಹಿಂದೂ-ಮುಂದೂ ವಿಚಾರ ಮಾಡುವಂತಾಗಿದೆ.

ಪ್ರಸ್ತುತ ಜನತೆ ಸಕಾಲಕ್ಕೆ ಕೂಲಿ ಹಣ ಕೊಟ್ಟರೆ ಅವರ ಜೀವನ ನಡೆಯುತ್ತದೆ. ಸರ್ಕಾರ ಹಣ ಕೊಡದೇ ಇದ್ದರೆ ಅವರು ಹೇಗೆ ತಾನೆ ಜೀವನ ನಡೆಸಲು ಸಾಧ್ಯ. ಅನಿವಾರ್ಯವಾಗಿ ತುತ್ತಿನ ಜೀವನಕ್ಕಾಗಿ ಮತ್ತೆ ಗುಳೆ ಹೋಗುವುದು ಮಾತ್ರ ತಪ್ಪುತ್ತಿಲ್ಲ. ಕೆಲಸ ಮಾಡಿ ಎಂದು ಅಧಿಕಾರಿ ವರ್ಗ ಹೇಳುತ್ತದೆ. ಆದರೆ ದುಡಿಮೆ ಮಾಡಿಸಿಕೊಂಡು ತಿಂಗಳು ಕಳೆದರೂ ಕೂಲಿ ಹಣ ಬರದಂತಾಗಿದೆ.

ನಿಯಮದಂತೆ ನಡೆಯುತ್ತಿಲ್ಲ: ಕೂಲಿಕಾರರಿಂದ ಕೆಲಸ ಮಾಡಿಸಿಕೊಂಡು ಏಳು ದಿನದೊಳಗೆ ಕೂಲಿ ಹಣ ಬಿಡುಗಡೆ ಮಾಡಬೇಕು ಎಂದು ನಿಯಮವೇ ಹೇಳುತ್ತದೆ. ನೇರ ಜನರ ಖಾತೆಗೆ ಜಮೆ ಮಾಡಬೇಕು. ಒಂದು ವೇಳೆ ಸಕಾಲಕ್ಕೆ ಕೊಡದೇ ಇದ್ದರೆ ಅದಕ್ಕೆ ಬಡ್ಡಿ ಸಮೇತ ಪಾವತಿ ಮಾಡಬೇಕು ಎಂಬ ನಿಯಮವಿದೆ. ಎರಡು ತಿಂಗಳಿಂದ 11 ಕೋಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಯಾರು ಹೊಣೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 4,75,39,810 ಬಾಕಿಯಿದ್ದರೆ, ಕೊಪ್ಪಳ ತಾಲೂಕಿನಲ್ಲಿ 1,37,48,651, ಕುಷ್ಟಗಿ ತಾಲೂಕಿನಲ್ಲಿ 4,41,21,191, ಯಲಬುರ್ಗಾ ತಾಲೂಕಿನಲ್ಲಿ 1,23,51,860 ಸೇರಿದಂತೆ ಒಟ್ಟು 11,77,61,512 ನರೇಗಾ ಹಣ ಬಿಡುಗಡೆ ಮಾಡುವುದು ಬಾಕಿಯಿದೆ. ಇದರಿಂದ ಕೂಲಿ ಕಾರ್ಮಿಕರು ಕೆಲಸದ ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

-ದತ್ತು ಕಮ್ಮಾರ

ಟಾಪ್ ನ್ಯೂಸ್

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kushtagi-patte

Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.