ಬರದಿಂದ 127 ಕೋಟಿ ಬೆಳೆಹಾನಿ
Team Udayavani, Dec 9, 2019, 3:24 PM IST
ಕೊಪ್ಪಳ: ಜಿಲ್ಲೆಯ ಕೆಲವು ಹೋಬಳಿಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಅಬ್ಬರಿಸಿದ್ದರೆ, ಗಂಗಾವತಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಆಗಿಯೇ ಇಲ್ಲ. ಹೀಗಾಗಿ ಸರ್ಕಾರವೇ ಗಂಗಾವತಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಕೃಷಿ ಇಲಾಖೆ ಸಹ ಸರ್ಕಾರಕ್ಕೆ 127 ಕೋಟಿ ರೂ. ಮುಂಗಾರು ಬೆಳೆ ಹಾನಿ ವರದಿ ಸಲ್ಲಿಸಿದೆ.
ಜಿಲ್ಲೆಯು ಒಂದಿಲ್ಲ ಒಂದು ವರ್ಷ ಬರ ಎದುರಿಸುತ್ತಲೇ ಇದೆ. ತುಂಗಭದ್ರಾ ಡ್ಯಾಂ ಜಿಲ್ಲೆಯಲ್ಲಿಯೇ ಇದ್ದರೂ ಬರದ ಹಣೆಪಟ್ಟಿ ಮಾತ್ರ ಜಿಲ್ಲೆಯಿಂದ ದೂರವಾಗುತ್ತಿಲ್ಲ. ಕಳೆದ 18 ವರ್ಷದಲ್ಲಿ 12 ವರ್ಷ ಬರಕ್ಕೆ ತುತ್ತಾಗಿರುವ ಇಲ್ಲಿನ ಜನರು ಉದ್ಯೋಗ ಅರಸಿ ಗುಳೆ ಹೋಗುವಂತ ಸ್ಥಿತಿ ಇಂದಿಗೂ ಇದೆ. ಈ ವರ್ಷ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನರು ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ ಉಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಭತ್ತದ ನಾಡಿನ ಜನರಿಗೆ ಮಾತ್ರ ಮಳೆಯ ಕೊರತೆ ಎದುರಾಗಿ ಬರದ ಬೆಂಕಿ ಜನರನ್ನು ಬೆಂಬಿಡದೇ ಕಾಡಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ ಮೂರು ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಯು ಮೊಳಕೆಯಲ್ಲಿಯೇ ಕಮರಿ ರೈತರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿನ ರೈತರನ್ನು ಮಾತ್ರ ಬರ ಎನ್ನುವ ಪೆಡಂಭೂತ ಬೆಂಬಿಡದೇ ಕಾಡುತ್ತಿದೆ. ಒಂದೊಮ್ಮೆ ಅತಿಯಾಗಿ ಮಳೆಯಿಂದ ಬೆಳೆ ಹಾನಿಗೀಡಾದರೆ, ಮತ್ತೂಮ್ಮೆ ಮಳೆ ಹನಿಯೂ ಭೂಮಿಗೆ ಬೀಳದೆ ಬೆಳೆ ಹಾನಿಯಾಗಿ ರೈತ ಸಂಕಷ್ಟ ಎದುರಿಸುವಂತ ಸ್ಥಿತಿಯಿರುತ್ತೆ. ಸರ್ಕಾರಗಳು ಜಿಲ್ಲೆಯಲ್ಲಿನ ಸ್ಥಿತಿಯನ್ನು ಅವಲೋಕಿಸಿ ಸಕಾಲಕ್ಕೆ ಬರ ಪರಿಹಾರ ನೀರಿ ರೈತರನ್ನು ನೋವಿನ ದವಡೆಯಿಂದ ಪಾರು ಮಾಡಬೇಕಿದೆ.
127 ಕೋಟಿ ರೂ. ಬೆಳೆ ಹಾನಿ: ಗಂಗಾವತಿ ತಾಲೂಕಿನಲ್ಲಿ 24,088 ಹೆಕ್ಟೇರ್ ಬಿತ್ತನೆ ಪ್ರದೇಶವಿತ್ತು. ಈ ಪೈಕಿ 22,905 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿತ್ತು. ಇದರಲ್ಲಿ 19,902 ಹೆಕ್ಟೇರ್ ಪ್ರದೇಶದಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಪ್ರದೇಶವು ಬೆಳೆಹಾನಿಯಾಗಿದೆ. ಇದರಲ್ಲಿ 13,902 ಸಣ್ಣ ರೈತರುಹಾಗೂ 5438 ದೊಡ್ಡ ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಸಣ್ಣ ಹಾಗೂ ದೊಡ್ಡ ರೈತರ ಬೆಳೆ ಹಾನಿ ಸೇರಿ ಒಟ್ಟಾರೆ 127 ಕೋಟಿ ರೂ. ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಕೊಡಬೇಕು ಎನ್ನುವ ಲೆಕ್ಕಾಚಾರ ಹಾಕಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ಮಾಡಿದೆ.
ನಾಲ್ಕು ಹೋಬಳಿಯಲ್ಲಿ ಮಳೆ ಇಲ್ಲ : ಭತ್ತದ ನಾಡಿನಲ್ಲಿ ಬರ ಬಂದಿದೆಯೇ ಎಂದು ಜನರಲ್ಲಿ ಆಶ್ಚರ್ಯಕರ ಪ್ರಶ್ನೆ ಮೂಡಬಹುದು. ಇದು ಅಚ್ಚರಿಯಾದರೂ ಸತ್ಯದ ಸಂಗತಿ. ಹುಲಿಹೈದರ್, ಕನಕಗಿರಿ, ವೆಂಕಟಗಿರಿ ಹಾಗೂ ನವಲಿ ಹೋಬಳಿಯಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡಿದ್ದರೆ, ಅಚ್ಚುಕಪಟ್ಟು ಪ್ರದೇಶದಲ್ಲಿನ ಮರಳಿ, ಸಿದ್ದಾಪೂರ, ಗಂಗಾವತಿ ಹೋಬಳಿಯಲ್ಲಿ ನೀರಾವರಿ ಪ್ರದೇಶವಿದೆ. ಹೀಗಾಗಿ ನಾಲ್ಕು ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಸರ್ಕಾರವೇ ಗಂಗಾವತಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.
ಗಂಗಾವತಿ ಬರಪೀಡಿತ: ಸರ್ಕಾರ ಗಂಗಾವತಿ ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕೃಷಿ ಇಲಾಖೆ ಗಂಗಾವತಿ ತಾಲೂಕು, ಕನಕಗಿರಿ ಹಾಗೂ ಕಾರಟಗಿ ತಾಲೂಕಿನಲ್ಲಿನ ಬೆಳೆ ಹಾನಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇಲ್ಲಿ ಹೊಸ ಎರಡು ತಾಲೂಕುಗಳು ಇದರಲ್ಲಿ ಸೇರ್ಪಡೆಯಾಗಿವೆ. ಅಂದರೆ, ಕಂದಾಯ ವ್ಯಾಪ್ತಿಯ ಮಾತ್ರ ಹೊಸ ತಾಲೂಕು ವಿಂಗಡಣೆ ಮಾಡಲಾಗಿದೆ. ಕೃಷಿ ವ್ಯಾಪ್ತಿಯು ಮಾತ್ರ ಇನ್ನೂ ಮೂರು ತಾಲೂಕುಗಳನ್ನೂ ಒಳಗೊಂಡಿದೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.