8 ತಿಂಗಳಲ್ಲಿ 130 ಬಾಲ್ಯವಿವಾಹ ಬೆಳಕಿಗೆ!


Team Udayavani, Dec 28, 2019, 2:22 PM IST

kopala-tdy-1

ಕೊಪ್ಪಳ: ಶೈಕ್ಷಣಿಕವಾಗಿ ಹಿಂದುಳಿದಂತ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇಂದಿಗೂ ಸದ್ದು ಮಾಡುತ್ತಿದೆ. ಕಳೆದ 8 ತಿಂಗಳಲ್ಲಿ 130 ಬಾಲ್ಯವಿವಾಹ ನಡೆಯುವ ಬಗ್ಗೆ ದೂರು ಬಂದಿದ್ದು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 128 ಬಾಲ್ಯ ವಿವಾಹ ತಡೆದಿದೆ. ಇಷ್ಟಾದರೂ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಇಲ್ಲ !

ಹೌದು. ಕಲ್ಯಾಣ ಕರ್ನಾಟಕ (ಹೈದ್ರಾಬಾದ್‌ ಕರ್ನಾಟಕ)ದಲ್ಲಿ ಕೊಪ್ಪಳ ಜಿಲ್ಲೆಯ ಜನತೆಯಲ್ಲಿ ಶಿಕ್ಷಣದ ಬಗೆಗಿನ ಜಾಗೃತಿ, ಕಾನೂನಿನ ತಿಳಿವಳಿಕೆ ಕಡಿಮೆಯಿದೆ. ಪಾಲಕರಲ್ಲಿ ಮಕ್ಕಳನ್ನು ಬೇಗ ಮದುವೆ ಮಾಡಿಕೊಡಬೇಕು. ಮನೆಗೆ ಭಾರ ಎನ್ನುವ ಭಾವನೆಯಿಂದಲೇ ಹಿರಿಯರ ಮಾತಿನ ಒಪ್ಪಂದದಂತೆ ಎಳೆಯ ಕಂದಮ್ಮಗಳಿಗೆ ಸಂಸಾರಿಕ ಅರ್ಥವೇ ತಿಳಿಯದ ವಯಸ್ಸಿನಲ್ಲಿ ವಿವಾಹ ಮಾಡುವ ಕಾರ್ಯ ನಡೆಯುತ್ತಿವೆ.

ಸರ್ಕಾರ ಬಾಲ್ಯವಿವಾಹ ತಡೆಗೆ ಹಲವಾರು ಕಾಯ್ದೆಗಳನ್ನು ರೂಪಿಸಿದೆ. ಕಠಿಣ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ನಿರಂತರ ಪ್ರಚಾರ ಮೂಡಿಸುತ್ತಿದೆ.ಇಷ್ಟಾದರೂ ಕಾಯ್ದೆ, ಕಾನೂನಿನ ಬಗ್ಗೆ ಹೆಚ್ಚು ಗಮನ ನೀಡದ ಜನತೆ ತಮ್ಮ ಕಾಯಕದಲ್ಲೇ ನಿರತರಾಗುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಕಳೆದ 8 ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬರೊಬ್ಬರಿ 130 ಬಾಲ್ಯವಿವಾಹದ ದೂರು ಬಂದಿದ್ದು, ಇವುಗಳಲ್ಲಿ 116 ಬಾಲ್ಯವಿವಾಹ ತಡೆಯಲಾಗಿದೆ. ಇದರಲ್ಲೇ 128 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಬಾಲ್ಯವಿವಾಹಗಳನ್ನುನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿ ವರ್ಗ ಹೇಳುತ್ತಿದ್ದರೂ, ಸದ್ದಿಲ್ಲದೇ 130 ಬಾಲ್ಯ ವಿವಾಹದ ಪ್ರಕರಣ ಕೇಳಿ ಬಂದಿವೆ.

ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ 561 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 495 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಪಾಲಕರ, ಮಗುವಿನ ಸಮಸ್ಯೆ ಬಗ್ಗೆಯೂ ಸುದೀರ್ಘ‌ ಚರ್ಚೆ ಮಾಡಲಾಗಿದೆ. ಇವುಗಳಲ್ಲಿ 66 ಮಕ್ಕಳ ಪಾಲಕರಿಗೆ ತಿಳಿವಳಿಕೆ ಹೇಳಿ ವಿವಾಹ ತಡೆಹಿಡಿಯಲಾಗಿದೆ. ಇದರಲ್ಲೇ 14 ಮಕ್ಕಳನ್ನು ವಸತಿ ನಿಲಯಕ್ಕೆ ಸೇರ್ಪಡೆ ಮಾಡಿ ಅವರಿಗೆ ಶಿಕ್ಷಣ ಕೊಡಿಸುವ ಕಾಯಕವೂ ನಡೆದಿದೆ. ಬಾಲ್ಯವಿವಾಹ ಮಾಡಿದ ಪಾಲಕರ ಮೇಲೆ 34 ಪ್ರಕರಣ ದಾಖಲಿಸಲಾಗಿದೆ. ಇಷ್ಟೆಲ್ಲ ಘಟನೆ ನಡೆದರೂ ಜಿಲ್ಲೆಯಲ್ಲಿನ ಜನತೆಯಲ್ಲಿ ಕಾನೂನಿನ ಜಾಗೃತಿ ಮೂಡುತ್ತಿಲ್ಲ.

ಅಧಿಕಾರಿಗಳಿಗೆ ದಿಗ್ಬಂಧನ!: ಬಾಲ್ಯವಿವಾಹ ತಡೆಗೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ-1098 ಸೇರಿದಂತೆ ಯುನೆಸೆಫ್‌ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪೊಲೀಸ್‌ ಪಡೆಗೆ ವಿಶೇಷಾಧಿಕಾರ ನೀಡಲಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಕ್ಕಳ ಮದುವೆ ತಡೆಯಲು ತೆರಳಿದ ಅಧಿಕಾರಿ, ಸಿಬ್ಬಂದಿಗೆ ದಿಗ್ಬಂಧನ ಹಾಕಿ ಮದುವೆ ಮಾಡಿದ ಪ್ರಕಣಗಳು ಬೆಳಕಿಗೆ ಬಂದಿವೆ. ಇನ್ನು ಕೆಲ ರಾಜಕಾರಣಿಗಳ ಮೂಲಕ ಬಾಲ್ಯವಿವಾಹ ತಡೆಗೆ ತೆರಳಿದ ಅಧಿಕಾರಿ ವರ್ಗಕ್ಕೆ ರಾಜಕಾರಣದ ಒತ್ತಡವೂ ಕೇಳಿ ಬರುತ್ತಿವೆಯಂತೆ.

ಪ್ರಸ್ತುತ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಸಾರ ಬಾಲ್ಯ ವಿವಾಹ ಮಾಡಿದ ಅರ್ಚಕರು, ತಂದೆ-ತಾಯಿ, ಹುಡುಗನ ತಂದೆ-ತಾಯಿ, ಮದುವೆಗೆ ಬರುವ ಸಂಬಂಧಿಕರು ಸೇರಿ ವಿವಾಹ ನೆರವೇರಿಸಲು ಸಹಕಾರ ನೀಡುವ ಸಂಘಟಕರ ಮೇಲೂ ಕಾನೂನಿನಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ. ಕೆಲವರ ಮೇಲೆಯೂ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣವು ನಡೆದಿವೆ. ಇಷ್ಟಾದರೂ ಪಾಲಕರಲ್ಲಿ, ಅದರಲ್ಲೂ ಗ್ರಾಮೀಣ ಭಾಗದ ಜನತೆ ಬಾಲ್ಯವಿವಾಹ ಮಾಡುವುದನ್ನು ನಿಲ್ಲಿಸಿಲ್ಲ. ಹಿರಿಯರ ಆಣೆ-ಪ್ರಮಾಣ ಮನೆ ಸಂಬಂಧಿಯೊಳಗಿನ ಒಪ್ಪಂದ, ಹೆಣ್ಣು ಮಕ್ಕಳು ಮನೆಗೆ ಭಾರ, ಬೇಗನೆ ಮದುವೆ ಮಾಡಿದರೆ ನಮ್ಮ ಹೊಣೆ ಕಡಿಮೆಯಾಗಲಿದೆ ಎನ್ನುವ ಯೋಚನೆಯಂತ ಮೌಡ್ಯತೆಗಳೇ ಕಂದಮ್ಮಗಳನ್ನು ಕಂದಕಕ್ಕೆ ನೂಕುವ ಕಾಯಕ ನಡೆದಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಬೇಕಿದೆ. ಸದ್ಯ 8 ತಿಂಗಳಲ್ಲಿ 130 ದೂರು ಅಧಿಕೃತವಾಗಿಯೇ ಬಂದಿವೆ. ಇನ್ನೂ ಗೊತ್ತಿಲ್ಲದಂತೆ ಹಲವು ಮದುವೆಗಳು ಇಂದಿಗೂ ನಡೆಯುತ್ತಲೇ ಇವೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಬೇಕಿದೆ.

ಬಾಲ್ಯವಿವಾಹ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ಹೆಚ್ಚಿನ ನಿಗಾ ವಹಿಸಿದೆ. ಜಿಲ್ಲಾಧಿಕಾರಿ, ಸಿಇಒ ಹಾಗೂ ಎಸ್‌ಪಿ ಅವರಿಂದ ನಮಗೆ ಕಟ್ಟುನಿಟ್ಟಿನ ಸೂಚನೆಯೂ ಇದೆ. ಬಾಲ್ಯ ವಿವಾಹ ತಡೆಯಲು ತೆರಳಿದವರ ಮೇಲೆ ಕೆಲವೊಮ್ಮೆ ದೌರ್ಜನ್ಯಗಳೂ ನಡೆದಿವೆ. ಆದರೂ ಮಕ್ಕಳ ಮದುವೆ ನಿಲ್ಲಿಸುವ ಕಾರ್ಯ ನಡೆಸಿದ್ದೇವೆ. ವೀರೇಶ ನಾವದಗಿ, ಪ್ರಭಾರಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ

 

-ದತ್ತು ಕಮ್ಮಾರ

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.