ಗಂಗಾವತಿ: ಬೆಳ್ಳಂ ಬೆಳಿಗ್ಗೆ ಮತ್ತೆ ಗಂಗಾವತಿ ಬೆಟ್ಟಗಳಲ್ಲಿ ಪ್ರತ್ಯಕ್ಷವಾದ 2 ಚಿರತೆಗಳು
Team Udayavani, Oct 13, 2021, 12:45 PM IST
ಗಂಗಾವತಿ: ಬುಧವಾರ ಬೆಳ್ಳಂಬೆಳಿಗ್ಗೆ ಗಂಗಾವತಿ ಸಮೀಪದ ಗುಡ್ಡಗಳಲ್ಲಿ 2 ಚಿರತೆಗಳು ಪ್ರತ್ಯಕ್ಷವಾಗಿವೆ ಇದನ್ನು ಕಂಡ ವಾಯುವಿಹಾರಕ್ಕೆ ತೆರಳಿದ್ದ ಜನರು ಭಯಭೀತಗೊಂಡಿದ್ದಾರೆ .
ಗಂಗಾವತಿ ನಗರದ ಇಂಜಿನಿಯರಿಂಗ್ ಕಾಲೇಜು ಐಟಿಐ ಕಾಲೇಜ್ ರಸ್ತೆಯ ಹೊಂದಿಕೊಂಡಂತೆ ಇರುವ ಬೆಟ್ಟದಲ್ಲಿ 2 ಚಿರತೆಗಳು ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ವಾಯುವಿಹಾರ ತೆರಳಿದ್ದ ಜನರಿಗೆ ಕಂಡುಬಂದಿವೆ .
ತಾಲ್ಲೂಕಿನ ಆನೆಗೊಂದಿ ಸಂಗಾಪುರ ಹಿರೇಬೆಣಕಲ್ ಆಗೋಲಿ ಸೇರಿದಂತೆ 7 ಗುಡ್ಡ ಪ್ರದೇಶದಲ್ಲಿ ಚಿರತೆ ,ಕರಡಿ, ಮೊಲ ಹೀಗೆ ವನ್ಯಜೀವಿಗಳು ಹೆಚ್ಚಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಮತ್ತು ನಗರಕ್ಕೆ ವಲಸೆ ಬರುತ್ತಿವೆ ಇದರಿಂದ ಜನರು ಭಯಭೀತರಾಗಿದ್ದಾರೆ .ಕಳೆದ ವರ್ಷ ಆನೆಗೊಂದಿ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ದಾಳಿಯಿಂದ 3 ಜನರು ಪ್ರಾಣ ಕಳೆದುಕೊಂಡಿದ್ದು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಬೆಟ್ಟ ಪ್ರದೇಶದಲ್ಲಿ ಬೋನು ಇಟ್ಟು ಚಿರತೆ ಮತ್ತು ಕರಡಿಗಳನ್ನು ಸೆರೆಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸಿಕೊಟ್ಟಿದ್ದರು .
6 ತಿಂಗಳಿಂದ ಎಲ್ಲಿಯೂ ಕಾಣದ ಚಿರತೆ ಮತ್ತು ಕರಡಿಗಳು ಬುಧುವಾರ ಬೆಳಿಗ್ಗೆ ವಿಪ್ರ ಸಾಯಿ ನಗರ ಪ್ರದೇಶದಲ್ಲಿರುವ ಇಂಜಿನಿಯರಿಂಗ್ ಮತ್ತು ಐಟಿಐ ಕಾಲೇಜ್ ಪ್ರದೇಶದ ಬೆಟ್ಟದ 2 ಚಿರತೆಗಳು ಪ್ರತ್ಯಕ್ಷವಾಗಿ ವಾಯುವಿಹಾರಕ್ಕೆ ತೆರಳಿದ್ದ ಜನರಿಗೆ ಕಂಡುಬಂದಿವೆ . ಅಲ್ಲಿದ್ದ ಜನರು ತಮ್ಮ ಮೊಬೈಲ್ ಗಳ ಮೂಲಕ ಫೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ .ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ತಾಲ್ಲೂಕು ಆಡಳಿತ ಕ್ರಮ ಕೈಗೊಂಡು ಚಿರತೆಗಳು ಕಂಡುಬಂದಿರುವ ಪ್ರದೇಶದಲ್ಲಿ ಬೋನುಗಳನ್ನು ಇರಿಸಿ ಅವುಗಳನ್ನು ಸೆರೆ ಹಿಡಿದು ದೂರದ ಬೆಟ್ಟಗಳಲ್ಲಿ ಬಿಡಬೇಕಾಗಿದೆ .
ಚಿರತೆಗಳ ಹಾವಳಿಯಿಂದ ತಾಲ್ಲೂಕಿನ ಅಂಜನಾದ್ರಿ, ಪಂಪಾಸರೋವರ , ಆದಿಶಕ್ತಿ ದೇಗುಲಗಳಿಗೆ ಸುಮಾರು 2 ತಿಂಗಳ ಕಾಲ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಶರನ್ನವರಾತ್ರಿ ಸಂದರ್ಭದಲ್ಲಿ ಜನರು ಆನೆಗುಂದಿ ಭಾಗ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭ ಇರುವುದರಿಂದ ಜಾರನ ಚಿರತೆ ಮತ್ತು ಕರಡಿ ಗಳಿಂದ ಕಾಪಾಡಬೇಕಾದ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಆದ್ದರಿಂದ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಗಲು ರಾತ್ರಿ ಗಸ್ತು ನಡೆಸುವ ಮೂಲಕ ಪ್ರಾಣಿಗಳಿಂದ ಜನ ಜಾನುವಾರುಗಳನ್ನು ಕಾಪಾಡಬೇಕಿದ್ದು ಕೂಡಲೇ ಬೋನುಗಳನ್ನು ಇರಿಸುವಂತೆ ಜನರು ಮನವಿ ಮಾಡಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.