Kushtagi: 200 ಮೀಟರ್ ಭೂಮಿ ಬಿರುಕು; ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ
Team Udayavani, Nov 19, 2023, 12:32 PM IST
ಕುಷ್ಟಗಿ: ತಾಲೂಕಿನ ಮನ್ನೇರಾಳ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ ಎಂದು ಜಿ.ಪಂ. ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕುಷ್ಟಗಿ ಹಳೆಯ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2007 ರಲ್ಲಿ 25 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ವೃದ್ದಿಗೆ ಜಿನಗು ಕೆರೆ ನಿರ್ಮಿಸಿದೆ. ಕಳದ 2009 ರ ಮಹಾ ಮಳೆಗೆ ಮೊದಲ ಬಾರಿಗೆ ಕೆರೆ ಭರ್ತಿಯಾಗಿತ್ತು.
ಈ ಸಂದರ್ಭದಲ್ಲಿ ಕೆರೆ ಅಲ್ಲಲ್ಲಿ ಬಸಿ ಕಾಣಿಸಿಕೊಂಡಿದ್ದರೂ ಸಣ್ಣ ನೀರಾವರಿ ಇಲಾಖೆ ತಲೆ ಕೆಡಿಸಿಕೊಂಡಿಲ್ಲ. ಕೆಲ ತಿಂಗಳ ಹಿಂದೆ ಕೆರೆ ತುಂಬುವ ಯೋಜನೆಯಲ್ಲಿ ಮನ್ನೇರಾಳ ಕೆರೆಗೆ ಕೃಷ್ಣಾ ನದಿ ನೀರು, ಪೈಪಲೈನ್ ಮೂಲಕ ಹರಿಸಲಾಗಿದೆ.
ಬರಗಾಲದ ಈ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿರುವುದು ಅಂತರ್ಜಲ ಸ್ಥಿರತೆಯಿಂದ ರೈತರಿಗೆ ಅನಕೂಲವೇ ಆಗಿದೆ. ಆದರೆ ಸದರಿ ಕೆರೆ ಒಡೆಯುವ ಅಪಾಯವಿದೆ. ಯಾವುದೇ ಕ್ಷಣಗಳಲ್ಲಿ ಒಡೆಯುವ ಸಾದ್ಯತೆಯ ವದಂತಿಗಳು ಉಭಯ ಗ್ರಾಮದ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ.
ಕೆಲವು ದಿನಗಳ ಹಿಂದೆ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು ಭಯ ಇನ್ನಷ್ಟು ಜಾಸ್ತಿಯಾಗಿದೆ. ಮನ್ನೇರಾಳ ಹಾಗೂ ಸೇಬಿನಕಟ್ಟಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದ್ದು ಕೆರೆ ಒಡೆದರೆ ಇನ್ನೇನು ಕಾದಿದೆ ಎನ್ನುವ ಆತಂಕದ ಮದ್ಯೆ ಜನ ಬದುಕುವಂತಾಗಿದೆ.
ಮೊದಲೇ ಈ ಕೆರೆ ನಿರ್ಮಾಣ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಕೆರೆ ಭಧ್ರವಾಗಿಲ್ಲ. ಇಂತಹ ಅಭದ್ರ ಕೆರೆಗೆ ಕೆರೆ ಸಾಮಾರ್ಥ್ಯ ಪರೀಕ್ಷಿಸಿಸದೇ ಕೃಷ್ಣಾ ನೀರು ಹರಿಸಿರುವುದು ನೀರಿನ ಒತ್ತಡಕ್ಕೆ ಕೆರೆ ಒಡೆಯುವ ಸಾದ್ಯತೆಗಳಿದ್ದು, ತುರ್ತಾಗಿ ಕೆರೆಯ ಒಡ್ಡು ಪ್ರದೇಶದಲ್ಲಿ ಒಡ್ಡಿನ ತಡೆಗೋಡೆ ನಿರ್ಮಿಸಿ, ಮನ್ನೇರಾಳ, ಸೇಬಿನಕಟ್ಟಿ ಜನ, ಜಾನುವಾರು, ಬೆಳೆ ಹಾನಿ, ಜೀವ ಹಾನಿ, ಭೂಮಿಯ ಫಲವತ್ತತೆ ಆತಂಕ ದೂರ ಮಾಡಬೇಕೆಂದು ನೇಮಣ್ಣ ಮೇಲಸಕ್ರಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.