ಈ ವರ್ಷವೂ ಬಜೆಟ್ ನಲ್ಲಿ 40- 50 ಸಾವಿರ ಕೋಟಿ ಖೋತಾ : ಸಿಎಂ ಯಡಿಯೂರಪ್ಪ
Team Udayavani, Jan 9, 2021, 11:24 AM IST
ಕೊಪ್ಪಳ: ಕೋವಿಡ್, ಅತಿವೃಷ್ಟಿ, ಬರದಿಂದ ಈ ವರ್ಷದ ಬಜೆಟ್ ನಲ್ಲಿ 40-50 ಸಾವಿರ ಕೋಟಿ ಖೋತಾ ಆಗಲಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಅಡಿಗಲ್ಲು ಸಮಾರಂಭಪೂರ್ವದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತಿವೃಷ್ಠಿ, ಬರಗಾಲ ಹಾಗೂ ಕೋವಿಡ್ ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ಅನುದಾನ ಕೊಡುವುದು ಕಷ್ಟವಾಗಿದೆ. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಬಜೆಟ್ ಸಹಿತ ಕಡಿಮೆ ಇತ್ತು. ಈ ವರ್ಷದ ಬಜೆಟ್ ನಲ್ಲಿ 40 ರಿಂದ 50 ಸಾವಿರ ಕೋಟಿ ಖೋತಾ ಆಗಲಿದೆ. ಹಾಗಾಗಿ ಎಲ್ಲದಕ್ಕೂ ತೊಂದರೆಯಾಗಿದೆ ಎಂದರು.
ವಂಚಕ ಯುವರಾಜ್ ಜೊತೆಗೆ ಸೋಮಣ್ಣ ಸೇರಿ ಇತರೆ ಬಿಜೆಪಿ ನಾಯಕರು ಪೋಟೋದಲ್ಲಿ ಇರುವ ಕುರಿತು ನಾನೇನು ಪ್ರತಿಕ್ರಿಯೆ ಕೊಡಲಿ. ಅದು ತನಿಖೆಯಾಗುತ್ತಿದೆ. ಮುಂದಿನ ದಿನದಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ. ಯಾರ ಜೊತೆಗೋ ಪೋಟೋದಲ್ಲಿ ಇದ್ದಾಕ್ಷಣ ಅದು ಅಪರಾಧವಾಗಲ್ಲ ಎಂದರು.
ಇದನ್ನೂ ಓದಿ:ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ: ಮೊದಲ ಹಂತದಲ್ಲಿ 8,405 ಕೋವಿಡ್ ಯೋಧರಿಗೆ ಲಸಿಕೆ
ಸಚಿವ ಸಂಪುಟ ವಿಸ್ತರಣೆಯು ಮುಂದೂಡುವ ವಿಚಾರ ಅನಿವಾರ್ಯವಾಗಿದೆ. ಕೇಂದ್ರದಲ್ಲಿ ಯಾವಾಗ ಸಂಪುಟ ವಿಸ್ತರಣೆ ಮಾಡು ಎಂದು ಹೇಳುತ್ತಾರೋ ಅವಾಗ ಮಾಡುತ್ತೇವೆ ಎಂದರು.
ವಿದ್ಯಾರ್ಥಿಗಳ ಸ್ಕಾಲರ್ ಶಿಫ್ ಕಡಿತ ಮಾಡಿಲ್ಲ. ಅದೆಲ್ಲವನ್ನೂ ನಾವು ಕೊಡುತ್ತಿದ್ದೇವೆ ಎಂದರಲ್ಲದೆ ದೇಶದಲ್ಲಿನ ದೊಡ್ಡ ಪ್ರಮಾಣದ ಟಾಯ್ಸ್ ಕ್ಲಸ್ಟರ್ ಗೆ ಅಡಿಗಲ್ಲು ನೆರವೇರಿಸಲಿದ್ದೇನೆ. ಈ ಕ್ಲಸ್ಟರ್ ದೇಶದ ಗಮನ ಸೆಳೆದಿದೆ. ಮುಂದೆ ಈ ಕ್ಲಸ್ಟರ್ ಪ್ರಾರಂಭವಾದ ಬಳಿಕ ಪ್ರಧಾನಿ ಮೋದಿ ಅವರನ್ನು ಕೊಪ್ಪಳಕ್ಕೆ ಆಹ್ವಾನಿಸಿ ಉದ್ಘಾಟನೆ ಮಾಡಿಸುವ ಯೋಜನೆ ಹೊಂದಿದೆ ಎಂದರು.
ರೈತರ ಸ್ವಾಭಿಮಾನಿ ಕಾರ್ಡ್ ಹಾಗೂ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.