ನೆರೆ ಸಂತ್ರಸ್ತರಿಗೆ ಕುಷ್ಟಗಿಯಿಂದ 5 ಲಕ್ಷ ರೊಟ್ಟಿ
•ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಸಂಘ-ಸಂಸ್ಥೆಗಳು•ತಹಶೀಲ್ದಾರ್ ನೇತೃತ್ವದಲ್ಲಿ ಸಭೆ
Team Udayavani, Aug 11, 2019, 1:05 PM IST
ಕುಷ್ಟಗಿ: ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ತುರ್ತು ಸಭೆ ನಡೆಯಿತು.
ಕುಷ್ಟಗಿ: ನೆರೆ ಪೀಡಿತ ಉಕ ಪ್ರದೇಶಕ್ಕೆ ತಕ್ಷಣದ ನೆರವಿನ ಹಿನ್ನೆಲೆಯಲ್ಲಿ 5 ಲಕ್ಷ ರೊಟ್ಟಿ, 2.5 ಕ್ವಿಂಟಲ್ ಶೇಂಗಾ, ಕಡಲೆ ಪುಡಿ ಸೇರಿದಂತೆ ಔಷಧ, ಬಟ್ಟೆ, ಅಗತ್ಯ ಸಾಮಾಗ್ರಿಗಳನ್ನು ತಾಲೂಕು ವತಿಯಿಂದ ಕಳುಹಿಸಿಕೊಡಲು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಉ-ಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವವರ ನೆರೆವಿಗೆ ಮುಂದಾಗಲು ಸಂಘ ಸಂಸ್ಥೆ ಹಾಗೂ ವರ್ತಕರ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಸಭೆಯಲ್ಲಿ ಕುಷ್ಟಗಿ ತಾಲೂಕಿನಿಂದ 5 ಲಕ್ಷ ರೊಟ್ಟಿಗಳನ್ನು ಗ್ರಾಮಸ್ಥರಿಂದ ತಯಾರಿಸಲು ಆಯಾ ಹೋಬಳಿ ನಾಡ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಈ ದಿನ ಸಂಜೆ ಆಯಾ ಗ್ರಾಮಗಳಲ್ಲಿ ಡಂಗುರ ಸಾರಲು ಗ್ರಾಮ ಸಹಾಯಕರಿಗೆ ತಿಳಿಸಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ರೊಟ್ಟಿ ಸ್ವೀಕಾರ ಕೇಂದ್ರ ರವಿವಾರದಿಂದ ಆರಂಭಿಸುತ್ತಿರುವುದಾಗಿ ತಿಳಿಸಿದರು. ರೊಟ್ಟಿ ಮಾಡಿಕೊಡಲು ಸ್ವ ಸಹಾಯ ಗುಂಪು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸ್ತ್ರೀ ಶಕ್ತಿ ಗುಂಪುಗಳಿಗೆ, ರೊಟ್ಟಿ ತಯಾರಿಸುವವರಿಗೆ ರೊಟ್ಟಿ ಮಾಡಿಕೊಡಲು ಹೇಳಿರುವುದಾಗಿ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಮಾತನಾಡಿ, ತಾಲೂಕಿನಲ್ಲಿ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 25 ವಸತಿ ನಿಲಯಗಳಿವೆ. ಇವೆರಡೂ ಸೇರಿ ಎರಡೂವರೆ ಕ್ವಿಂಟಲ್ ಶೇಂಗಾ, ಕಡಲೆ ಪುಡಿ ಮಾಡಿಸಿ ಕೊಡುವ ಜವಾಬ್ದಾರಿವಹಿಸಿಕೊಂಡರು. ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರು ರೊಟ್ಟಿ ಹಾಗೂ ಶೇಂಗಾ, ಕಡಲೆ ಪುಡಿಯನ್ನು ವಾರದವರೆಗೂ ಇಡಬಹುದು. ಹೀಗಾಗಿ ತಕ್ಷಣವೇ ಕಳುಹಿಸಿಕೊಡುವ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದು, ಸೋಮವಾರದ ವೇಳೆಗೆ ವಾಹನಲ್ಲಿ ರೊಟ್ಟಿ, ಶೇಂಗಾ, ಕಡಲೆ ಸೇರಿದಂತೆ ಸಂಗ್ರಹವಾಗಿರುವ ಬಟ್ಟೆ, ಬ್ಲಾಂಕೆಟ್, ಔಷಧಿಗಳನ್ನು ಕಳುಹಿಸಲಾಗುವುದು. ಈ ಲಾರಿಯಲ್ಲಿ ಕುಷ್ಟಗಿಯ 25 ಸ್ವಯಂ ಪ್ರೇರಿತ ಸ್ವಯಂ ಸೇವಕರನ್ನು ಕಳುಹಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಗುರುತಿನ ಚೀಟೆ ನೀಡಲು ಯೋಜಿಸಲಾಗಿದೆ ಎಂದರು.
ತಾಲೂಕಿನ ಮಠಗಳಿಗೆ ಮಾದಲಿ ತಯಾರಿಸಿ ಕೊಡಲು ಕೇಳಿಕೊಳ್ಳುವುದಾಗಿ ತಿಳಿಸಿದ ಅವರು, ಸ್ಥಳೀಯ ಔಷಧ ಅಂಗಡಿಯವರು ಅಗತ್ಯ ಔಷಧಿ, ಮಾತ್ರೆ, ಸ್ಥಳೀಯ ಕಿರಾಣಿ ವರ್ತಕರು, ಅಕ್ಕಿ, ಬೇಳೆ, ಬೆಲ್ಲ, ರವೆ, ಗೋಧಿ ಹಿಟ್ಟು ಇತರೇ ದಿನಸಿ ಸಂಗ್ರಹಿಸಿಕೊಡುವುದಾಗಿ ತಿಳಿಸಿರುವುದಾಗಿ ಹೇಳಿದರು. ಪ್ರಾಚಾರ್ಯ ಟಿ. ಬಸವರಾಜ್, ತಾಜುದ್ದೀನ್ ದಳಪತಿ, ಕರವೇ ಜಿಲ್ಲಾಧ್ಯಕ್ಷರಾದ ಬಸನಗೌಡ ಪೊಲೀಸಪಾಟೀಲ, ಅಜ್ಜಪ್ಪ ಕರಡಕಲ್, ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಮಂಜು ನಾಲಗಾರ, ನಬಿಸಾಬ್ ದೋಟಿಹಾಳ, ಭರತರಾಜ್ ತುರಕಾಣಿ, ಕಿರಣ ತುರಕಾಣಿ, ವರ್ತಕರ ಸಂಘದ ರಹೀಮಸಾಬ್ ಮುಲ್ಲಾ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.