ವಿಜಯನಗರ ಕಾಲುವೆಯಲ್ಲಿ ಬಿರುಕು : ಅಪಾರ ಪ್ರಮಾಣದ ನೀರು ನದಿಪಾಲು

ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ನಾಟಿಗೆ ನೀರಿನ ಕೊರತೆ ಸಂಭವ

Team Udayavani, Jul 12, 2022, 10:05 PM IST

ವಿಜಯನಗರ ಕಾಲುವೆಯಲ್ಲಿ ಬಿರುಕು : ಅಪಾರ ಪ್ರಮಾಣದ ನೀರು ನದಿಪಾಲು

ಗಂಗಾವತಿ : ತಾಲ್ಲೂಕಿನ ಸಣಾಪುರ ಹತ್ತಿರ ವಿಜಯನಗರ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದರಿಂದ ಸೋಮವಾರ ಕಾಲುವೆಗೆ ನೀರು ಬಿಟ್ಟಿದ್ದು ಬಿರುಕಿನ ಪರಿಣಾಮ ಅಪಾರ ಪ್ರಮಾಣದ ನೀರು ತುಂಗಭದ್ರ ನದಿಯ ಪಾಲಾಗುತ್ತಿದೆ. ಮುಂಗಾರು ಭತ್ತ ನಾಟಿ ಮಾಡಲು ರೈತರು ಸಿದ್ಧತೆ ನಡೆಸುತ್ತಿರುವಾಗಲೇ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದರಿಂದ ಒಂದು ತಿಂಗಳು ಕಾಲ ನಾಟಿ ಕಾರ್ಯ ಮುಂದೆ ಹೋಗುವ ಸಂಭವ ಇರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.

ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿದ್ದು ದುರಸ್ತಿ ಮಾಡುವ ಸಂದರ್ಭದಲ್ಲಿ ಕಾಲುವೆಯಲ್ಲಿ ಅಲ್ಲಲ್ಲಿ ಮಣ್ಣು ಹಾಗೂ ಕಲ್ಲುಗಳ ಸಂಗ್ರಹದಿಂದಾಗಿ ನೀರು ಮುಂದೆ ಹೋಗಲಾಗದೆ ಸಾಣಾಪುರ ಹತ್ತಿರ ನದಿ ಪಕ್ಕದ ಕಾಲುವೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದರಿಂದ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ತುಂಗಭದ್ರಾ ನದಿ ಪಾಲಾಗುತ್ತಿದೆ ಈ ಮಧ್ಯೆ ತುಂಗಭದ್ರ ನದಿಗೆ ಮಂಗಳವಾರ ಸಂಜೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಟ್ಟಿರುವುದರಿಂದ ಕಾಲುವೆಯಲ್ಲಿ ಅತಿ ಉದ್ದವಾದ ರಂಧ್ರ ಬೀಳುವ ಸಂಭವ ಹೆಚ್ಚಿದೆ.  ಕಾಲುವೆಗೆ ನೀರು ಹರಿಸುವ ಮುನ್ನ ಕಾಲುವೆಯಲ್ಲಿ ಮಣ್ಣು ಕಲ್ಲುಗಳನ್ನು ತೆಗೆದು ನೀರು ಬಿಟ್ಟಿದ್ದರೆ ಕಾಲುವೆಯಲ್ಲಿ ಬೋಂಗಾ ಬೀಳುತ್ತಿರಲಿಲ್ಲ .

ಸಾಣಾಪುರ, ವಿರುಪಾಪುರಗಡ್ಡೆ ಹನುಮನಹಳ್ಳಿ ,ಚಿಕ್ಕರಾಂಪುರ’ ಆನೆಗೊಂದಿ ಕೊರಮ್ಮನ ಕ್ಯಾಂಪ್, ರಾಂಪೂರ್, ಬಸವನದುರ್ಗ ,ಗೂಗಿಬಂಡಿ, ಮತ್ತು ಸಂಗಾಪುರ ಸೇರಿದಂತೆ ಈ ಭಾಗದ ಸುಮಾರು 25 ಸಾವಿರ ಎಕರೆಗೂ ಹೆಚ್ಚು ಭೂಮಿಗೆ ವಿಜಯನಗರ ಕಾಲುವೆಯಿಂದ ನೀರಾವರಿ ಮಾಡಲಾಗುತ್ತಿದೆ.

ಇದನ್ನೂ ಓದಿ : ಮಳೆಯ ಆರ್ಭಟ: 24 ಗಂಟೆಯಲ್ಲಿ ಮಳೆಗೆ 10 ಬಲಿ: ಗುಜರಾತ್‌ನಲ್ಲಿ 7, ಮಹಾರಾಷ್ಟ್ರದಲ್ಲಿ 3 ಬಲಿ

ವಿಜಯನಗರ ಕಾಲದಲ್ಲಿ ಅಂದಿನ ಅರಸರು ತುಂಗಭದ್ರಾ ನದಿಗೆ ಸಾಣಾಪುರ ಹತ್ತಿರ (ದಿಡುಗ)ಕಟ್ಟೆಯನ್ನು ನಿರ್ಮಿಸಿ ಅಲ್ಲಿಂದ ನೈಸರ್ಗಿಕವಾಗಿ ವಿಜಯನಗರ ಕಾಲುವೆಯ ಮೂಲಕ ಈ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಸೇರಿದಂತೆ ಭತ್ತ ಕಡಲೆ ಬಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ.ಇದೀಗ ತುಂಗಭದ್ರಾ ಎಡದಂಡೆ ಕಾಲುವೆ ಸೇರಿದಂತೆ ಪ್ರಮುಖ ಕಾಲುವೆಗಳಿಗೆ ಜುಲೈ 10 ನೀರು ಹರಿಸಲಾಗಿದ್ದು ವಿಜಯನಗರ ಕಾಲುವೆಗಳಿಗೆ ನೀರನ್ನು ಬಿಡಲಾಗಿದೆ .ಜಲಸಂಪನ್ಮೂಲ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಕಾಲುವೆಯ ದುರಸ್ತಿ ಕಾರ್ಯ ಮತ್ತು ನಂತರ ನಿರ್ವಹಣೆ ಸರಿಯಾಗಿ ಆಗದೇ ಕಾಲುವೆಯಲ್ಲಿ ರಂಧ್ರ ಬಿದ್ದಿರುವ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ವಿಜಯನಗರ ಕಾಲುವೆಗೆ ಜುಲೈ ಆಪ್ತರಿಂದ ನೀರು ಹರಿಸುವ ಬಗ್ಗೆ ನೀರಾವರಿ ಸಲಹಾ ಸಮಿತಿ ಮುಂಚಿತವಾಗಿಯೇ ನಿಗದಿ ಮಾಡಿದ್ದರೂ ವಿಜಯನಗರ ಕಾಲುವೆ ನಿರ್ವಹಣೆ ಮಾಡುವ ಜಲಸಂಪನ್ಮೂಲ ಅಧಿಕಾರಿಗಳಾಗಲಿ ಅಥವಾ ಕಾಲುವೆಯನ್ನು ದುರಸ್ತಿ ಮಾಡಿದ ಗುತ್ತಿಗೆದಾರರಾಗಲಿ ಮುಂಚಿತವಾಗಿ ಆಗಮಿಸಿ ಕಾಲುವೆಯ ಎಸ್ಕೇಪ್ ಗಳನ್ನ ಎತ್ತುವುದಾಗಲಿ ಅಥವಾ ಕಾಲುವೆಯಲ್ಲಿದ್ದ ಮಣ್ಣು ಮತ್ತು ಕಲ್ಲುಗಳನ್ನು ಬದಿಗೆ ಸರಿಸುವ ಕಾರ್ಯ ಮಾಡಿರಲಿಲ್ಲ .ಇದರಿಂದಾಗಿ ಮಂಗಳವಾರ ಸಂಜೆ ವಿಜಯನಗರ ಕಾಲುವೆ ಸಾಣಾಪುರ ಹತ್ತಿರ ಬಿರುಕು ಕಾಣಿಸಿಕೊಂಡು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಜೊತೆಗೆ ಕಾಲುವೆಯ ತಡೆಗೋಡೆ ಕುಸಿಯುವ ಹಂತ ತಲುಪಿದೆ .

ಸ್ಥಳಕ್ಕೆ ಭೇಟಿ ನೀಡಿದ ಸಾಣಾಪುರದ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಕರೆಯ ಮೂಲಕ ವಿಜಯನಗರ ಕಾಲುವೆಯಲ್ಲಿ ರಂಧ್ರ ಬಿದ್ದಿರುವ ಕುರಿತು ಮಾಹಿತಿ ನೀಡಿದರು ಯಾವ ಅಧಿಕಾರಿಯೂ ಇತ್ತ ಕಡೆ ಸುಳಿಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ .

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

SOMANNA-2

Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

ಯಾರು, ಯಾರನ್ನು, ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.