ಸಮಸ್ಯೆಗಳ ಆಗರ ಇಟಗಿ ಬಾಲಕಿಯರ ವಸತಿ ನಿಲಯ
Team Udayavani, Jul 5, 2019, 9:11 AM IST
ಕುಕನೂರು: ತಾಲೂಕಿನ ಇಟಗಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ ಹಲವು ಸಮಸ್ಯೆಗಳಿಂದ ವಂಚಿತವಾಗಿದೆ. ಈ ವಸತಿ ನಿಲಯಕ್ಕೆ ಆಧುನಿಕ, ಸುಸಜ್ಜಿತ, ವಿಶಾಲ ಕಟ್ಟಡಗಳಿದ್ದರೂ ಸ್ಥಳಕ್ಕೆ ತಲುಪಲು ಸೂಕ್ತ ರಸ್ತೆಯೇ ಇಲ್ಲ.
ತಮ್ಮ ಮಕ್ಕಳು ವಸತಿ ಶಾಲೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರ ಪಾಲಕರು ಸಂತಸಪಡುತ್ತಿದ್ದರೆ, ಇನ್ನೊಂದೆಡೆ ಹಾಸ್ಟೆಲ್ನಲ್ಲಿರುವ ವ್ಯವಸ್ಥೆ ಅವರನ್ನು ಆತಂಕಕ್ಕೀಡು ಮಾಡಿದೆ. ಈ ವಸತಿ ನಿಲಯದಲ್ಲಿ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಆದರೆ ಇವರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ಪಾಲಕರು ಆತಂಕವನ್ನು ಹೆಚ್ಚಿಸಿದೆ.
ಶೌಚಕ್ಕಾಗಿ ಕೀ.ಮಿ. ನಡಿಗೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ವಚ್ಛತ್ತೆಗಾಗಿ ಬಯಲು ಮುಕ್ತ ಶೌಚಾಲಯ ಹಾಗೂ ಇನ್ನಿತರೆ ಸಬ್ಸಿಡಿ ಹಣ ನೀಡಿ ಸಾರ್ವಜನಿಕರು ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಆದರೆ ಈ ಸರಕಾರಿ ವಸತಿ ನಿಲಯದ ವಿದ್ಯಾರ್ಥಿನಿಯರು ಚೆಂಬು ಹಿಡಿದು ಸುತ್ತಮುತ್ತ ನೋಡಿ ಶೌಚಕ್ಕಾಗಿ ಬಯಲಿನ ಕಡೆ ಹೋಗುವುದು ಅನಿವಾರ್ಯವಾಗಿದೆ. ಹಾಸ್ಟೆಲ್ನಲ್ಲಿ ಶೌಚಾಯಗಳಿದ್ದರೂ ಸೂಕ್ತ ನೀರಿನ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಯರು ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ.
ಸಮಸ್ಯೆ ಸರಮಾಲೆ: ಶಾಲೆಗೆ ಹೋದ ಮಕ್ಕಳು ಮರಳಿ ಬರುವುದರೊಳಗೆ ಮಳೆ ಬಂದರೆ ವಸತಿ ನಿಲಯಕ್ಕೆ ಕೆಸರುಮಯ ರಸ್ತೆಯಲ್ಲೇ ಸಾಗಬೇಕು. ಅವಸರದಲ್ಲಿ ಹೊರಟಾಗ ಜಾರಿ ಬೀಳುವ ಸಾಧ್ಯತೆ ಇದೆ. ಹೀಗೆ ಕೆಸರಿನಲ್ಲಿ ಬಿದ್ದು ಬಟ್ಟೆ ಕೊಳೆಯಾದರೆ ಮರುದಿನ ಶಾಲೆಗೆ ರಜೆ ಹಾಕಬೇಕಾಗುತ್ತದೆ. ವಸತಿ ಶಾಲೆ ಈ ವರ್ಷದ ಪ್ರಾರಂಭದಲ್ಲೇ ನೀರಿನ ಸಮಸ್ಯೆ ಎದುರಿಸುತ್ತಿದೆ. ವಾರ್ಡನ್ ಶಿವಶಂಕರ ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ತಿಳಿದಾಗೊಮ್ಮೆ ವಸತಿ ನಿಲಯಕ್ಕೆ ಬಂದು ಸಿಬ್ಬಂದಿಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸದೇ ಹೊರಟು ಬಿಡುತ್ತಾರೆ. ಹಾಸ್ಟೆಲ್ ಸುತ್ತಮುತ್ತ ಹಾಗೂ ವಸತಿ ನಿಲಯದ ದಾರಿಯಲ್ಲಿ ದೀಪಗಳು ಇಲ್ಲ. ವಿದ್ಯಾರ್ಥಿಗಳ ದುಸ್ಥಿತಿ ನೋಡಿ ಸ್ಥಳೀಯರು ತಮ್ಮ ಮನೆ ಮುಂದಿನ ದೀಪದ ಬೆಳಕು ರಸ್ತೆಗೂ ವ್ಯಾಪಿಸುವಂತೆ ಮಾಡಿದ್ದಾರೆ. ಅಲ್ಲದೇ ಸೂಕ್ತ ಭದ್ರತಾ ಸಿಬ್ಬಂದಿ ಅಗತ್ಯವೂ ಇದೆ. ಹಾಸ್ಟೆಲ್ ಗ್ರಾಮದ ಹೊರವಲಯದಲ್ಲಿದ್ದು, ಇದಕ್ಕೆ ಕಾಂಪೌಂಡ್ ಕೂಡ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.