ಕೊಪ್ಪಳದಲ್ಲಿ ಮತ್ತೆ ಹೊಸ ಇತಿಹಾಸ ಆರಂಭ : ಸಚಿವ ಶಿವರಾಜ ತಂಗಡಗಿ
ಜನರ ಆಶೀರ್ವಾದ ನಾವು ಸ್ವೀಕರಿಸಬೇಕು.
Team Udayavani, Jun 5, 2024, 4:03 PM IST
■ ಉದಯವಾಣಿ ಸಮಾಚಾರ
ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಹು ವರ್ಷಗಳ ನಂತರ ಕಾಂಗ್ರೆಸ್ ಭಾವುಟ ಹಾರಾಡಿಸಿದ್ದೇವೆ. ನಮ್ಮ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಶಾಸಕರು, ಪಕ್ಷದ ಮುಖಂಡರು, ಜಿಪಂ ಕ್ಷೇತ್ರದ ನಾಯಕರು ಎಂಟೂ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ಅಲ್ಲದೇ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ , ರಾಹುಲ್ ಗಾಂಧಿ , ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಎಲ್ಲ ನಾಯಕರ ಪರಿಶ್ರಮದಿಂದ ನಮ್ಮ ಅಭ್ಯರ್ಥಿ ಗೆಲುವು ಕಂಡಿದ್ದಾರೆ.
ರೆಡ್ಡಿಗೆ ಜನರೇ ಮತಹಾಕಿ ಕಪಾಳಕ್ಕೆ ಹೊಡೆದಿದ್ದಾರೆ: ಈ ಹಿಂದೆ ಜನಾರ್ದನ ರೆಡ್ಡಿ ಅವರು ಜೂ.04ಕ್ಕೆ ಬಿಜೆಪಿಗೆ ಮತ ನೀಡಿ
ತಂಗಡಗಿ ಕಪಾಳಕ್ಕೆ ಹೊಡೆಯುವಂತೆ ಹೇಳಿದ್ದರು. ಆದರೆ ಜೂ.04 ರಂದು ಅದೇ ಮತದಾರರು ಕಾಂಗ್ರೆಸ್‌ಗೆ ಅ ಕ ಮತ ನೀಡುವ ಮೂಲಕ ಜನಾರ್ದನ ರೆಡ್ಡಿ ಕಪಾಳಕ್ಕೆ ಹೊಡೆಯುವ ಮೂಲಕ ತೀರ್ಪು ನೀಡಿದ್ದಾರೆ. ಚುನಾವಣಾ ಸಮೀಕ್ಷೆಗಳು ಸುಳ್ಳಾಗಲಿವೆ ಎಂದಿದ್ದೆವು. ಆ ಸಮೀಕ್ಷೆಗಳು ಮೋದಿಯ ಸಮೀಕ್ಷೆಗಳು.
ಹಿಂದೆ ಸಮೀಕ್ಷೆಗಳು ಸುಳ್ಳಾಗಿವೆ. ಈಗಲೂ ಬದಲಾಯಿತು. ಲೋಕಸಭಾ ಚುನಾವಣೆಯಲ್ಲಿ ಆ ಸಮೀಕ್ಷೆಗಳ ಲೆಕ್ಕಾಚಾರ ಜನರಿಗೆ ಗೊತ್ತಾಗಿದೆ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಅದರಂತೆ ಐದು ಕ್ಷೇತ್ರ ನಾವು ಗೆಲುವು ಕಂಡಿದ್ದೇವೆ. ಜನರ ಆಶೀರ್ವಾದ ನಾವು ಸ್ವೀಕರಿಸಬೇಕು. ಮೈಸೂರು
ಭಾಗದಲ್ಲಿ ಜನರ ತೀರ್ಪು ಒಪ್ಪಬೇಕಿದೆ. ಇಂದಿನ ಫಲಿತಾಂಶ ನೋಡಿದರೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ದೇಶದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಇಂಡಿಯಾ ಸರ್ಕಾರ ಆಗಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಸಹೋದರನ ಗೆಲುವಿಗೆ ಎಲ್ಲರ ಶ್ರಮವಿದೆ : ಹಿಟ್ನಾಳ ಕೊಪ್ಪಳ : ಲೋಕಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ನಾಯಕರ, ಮುಖಂಡರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗಟ್ಟಿಯಾಗಿದೆ ಎಂದು ಜನತೆ
ತೋರಿಸಿಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಮೂಲಕ ಲೋಕಸಭೆಗೆ ಅವರನ್ನು ಕಳುಹಿಸುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ನಾನು ಅಭಿನಂದನೆ ಸಲ್ಲಿಸುವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಕೊಪ್ಪಳ ಹೆಚ್ಚು ಲೀಡ್ ಆಗುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಕಡಿಮೆಯಾಗಿದೆ. ನಮಗೆ ಆರು ಕ್ಷೇತ್ರದಲ್ಲಿ ಲೀಡ್ ಕೊಡುವ ಮೂಲಕ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಹಿಟ್ನಾಳ ಕುಟುಂಬದ ಮೇಲೆ ಜನರು ವಿಶ್ವಾಸವನ್ನಿಟ್ಟು ಜನರ ಸೇವೆ ಸಲ್ಲಿಸುವ ಅವಕಾಶ ಕೊಟ್ಟಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಒಗ್ಗಟ್ಟಿನ ಶ್ರಮದಿಂದ ಗೆಲುವು : ಬಯ್ನಾಪೂರ
ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ, ಸಚಿವರ, ಶಾಸಕರ ಹಾಗೂ ಪಕ್ಷದ ಮುಖಂಡರಿಗೆ ಮೊದಲು ಅಭಿನಂದನೆ ಸಲ್ಲಿಸುವೆ. ಪ್ರಧಾನಿ ಮೋದಿ ಅವರು 400 ಸ್ಥಾನ ಪಡೆವೆವು ಎಂದಿದ್ದರು. ಆದರೆ ಅದೆಲ್ಲವೂ ಬದಲಾಗಿದೆ. ಜನತೆ ಬುದ್ದಿವಂತರಿದ್ದು, ಒಳ್ಳೆಯ ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ನಾಪೂರ ಅವರು ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ನಾವು 15 ಸ್ಥಾನ ಗೆಲ್ಲಲಿದ್ದೇವೆ ಎನ್ನುವ ವಿಶ್ವಾಸ ಇತ್ತು. ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ 3-7 ಎಂದು ಹೇಳಿದ್ದವು. ಆದರೆ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಬಂದಿವೆ. ಸಿಎಂ, ಡಿಸಿಎಂ ಶ್ರಮದಿಂದ ಖರ್ಗೆ ಅವರ ಆಶೀರ್ವಾದ ಹಾಗೂ ಸೋನಿಯಾ ಗಾಂಧಿ , ರಾಹುಲ್ ಗಾಂಧಿ ಅವರ ಪರಿಶ್ರಮದಿಂದ ನಾವು ದೇಶದಲ್ಲಿ ಮತ್ತೂಮ್ಮೆ ಪುಟಿದೇಳುವ ಕೆಲಸ ಮಾಡಿದ್ದೇವೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರ ಪಡೆಯುವುದರಲ್ಲಿ ಸಂದೇಹವೇ ಇಲ್ಲ.
ಸ್ಥಳೀಯವಾಗಿ ನಾವು 8 ಕ್ಷೇತ್ರದ ಹಿರಿಯರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಎಲ್ಲ ಭಿನ್ನಾಭಿಪ್ರಾಯ ಸರಿಪಡಿಸಿ ಒಟ್ಟಾಗಿ ಶ್ರಮಿಸುವ ಕೆಲಸ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.