ರೈತನ ಆಕಸ್ಮಿಕ ಸಾವು, ಬೆಳೆ ಬೆಂಕಿಗಾಹುತಿ ಪರಿಹಾರ ದ್ವಿಗುಣ
Team Udayavani, Dec 26, 2018, 7:25 AM IST
ಕೊಪ್ಪಳ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ರೈತ ಆಕಸ್ಮಿಕ ಹಾಗೂ ಹಾವು ಕಡಿದು ಮೃತಪಟ್ಟರೆ ಆತನ ಕುಟುಂಬಕ್ಕೆ ಇನ್ಮುಂದೆ 2 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ರೈತ ಬೆಳೆದ ಬೆಳೆ ಬೆಂಕಿಗೆ ಆಕಸ್ಮಿಕವಾಗಿ ಆಹುತಿಯಾದರೆ 20 ಸಾವಿರ ರೂ.ನೀಡಲು ನಿರ್ಧರಿಸಿದೆ.
ರೈತ ಸಮೂಹ ದಿನದ 24 ಗಂಟೆಯೂ ಜಮೀನಿನಲ್ಲಿಯೇ ಕಾಲ ಕಳೆಯುತ್ತದೆ. ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಈ ಮೊದಲು ಸರ್ಕಾರದ ಮಟ್ಟದಲ್ಲಿ ಅವರಿಗೆ ಅಲ್ಪ ಮೊತ್ತ ಕೊಟ್ಟು ಕೈತೊಳೆದುಕೊಳ್ಳಲಾಗುತ್ತಿತ್ತು. ಇದರಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ವರ್ಗ ನೂರೆಂಟು ನೋವು ಅನುಭವಿಸಿ ಬದುಕು ಸಾಗಿಸುತ್ತಿತ್ತು. ಆದರೆ ಇದನ್ನೆಲ್ಲ ಅರಿತ ರಾಜ್ಯ ಸರ್ಕಾರ ರೈತನ ಕುಟುಂಬಕ್ಕೆ ಅಲ್ಪ ಪ್ರಮಾಣದಲ್ಲಿ ಭದ್ರತೆ ಕೊಡಲು ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ಯಾವುದೇ ಭಾಗದಲ್ಲಿ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟರೆ, ತೆಂಗು ಹಾಗೂ ಅಡಕೆ ಮರದಿಂದ ಬಿದ್ದು ಅಸುನೀಗಿದರೆ ಅಥವಾ ಆಕಸ್ಮಿಕ ಅವಘಡ ಸಂಭವಿಸಿ ಮೃತಪಟ್ಟರೆ ಸರ್ಕಾರ ಈ ಮೊದಲು 1 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಆದರೆ ಪ್ರಸಕ್ತ ಸಾಲಿನಿಂದ ಪರಿಹಾರದ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ಬೆಳೆಯನ್ನು ಹೊಲದಲ್ಲಿ ಗೂಡು
ಹಾಕಿಕೊಂಡಿದ್ದರೆ ಅಥವಾ ಕಾಳು ಸಮೇತ ಗೂಡು ಬೆಂಕಿಗೆ ಆಕಸ್ಮಿಕವಾಗಿ ಸುಟ್ಟು ಹಾನಿಯಾದರೆ ರೈತನ ಜೀವನೋಪಾಯಕ್ಕೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡುವ ವ್ಯವಸ್ಥೆ ಮಾಡಿತ್ತು. ಅದನ್ನೂ 20 ಸಾವಿರ ರೂ.ಗೆ ಹೆಚ್ಚಳ ಮಾಡಿದೆ.
ಪರಿಹಾರ ಮೊತ್ತ ಕಡಿಮೆಯಾಯ್ತು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೋದ್ಯಮ ಸೇರಿ ಇತರೆ ವಲಯಕ್ಕೆ ಅನ್ಯ ಅನುದಾನದ ಹೊಳೆಯನ್ನೇ ಹರಿಸುತ್ತವೆ. ಆದರೆ ಕೃಷಿ ವಲಯಕ್ಕೆ ಹೆಚ್ಚಿನ ಕಾಳಜಿ ಕೊಡಲ್ಲ. ಪರಿಹಾರ ಮೊತ್ತವನ್ನು ಅಲ್ಪ
ಪ್ರಮಾಣದಲ್ಲಿ ಕೊಟ್ಟು ಕೈ ತೊಳೆದುಕೊಳ್ಳುತ್ತಿವೆ ಎನ್ನುವ ಆರೋಪ ಸಾಮಾನ್ಯವಾಗಿದೆ. ರೈತನ ಬೆಳೆ ಹಾನಿ ಅನುಸಾರ ಪರಿಹಾರ ಕೊಟ್ಟರೆ ಆತನ ಕುಟುಂಬಕ್ಕೂ ನೆರವಾಗಲಿದೆ. ಕೇವಲ 20 ಸಾವಿರ ರೂ. ಪರಿಹಾರ ಕೊಟ್ಟರೆ ಯಾವುದಕ್ಕೂ ಸಾಲದು. ಇನ್ನು ರೈತ ಕೃಷಿ ಚಟುವಟಿಕೆ ವೇಳೆ ಮೃತಪಟ್ಟರೆ 2 ಲಕ್ಷ ಆತನ ಕುಟುಂಬದ ಜೀವನ ಭದ್ರತೆಗೆ ಸಾಕಾಗುವುದಿಲ್ಲ ಎನ್ನುವ ಮಾತುಗಳು ಕೇಳಿ
ಬಂದಿವೆ.
ಕೃಷಿ ಚಟುವಟಿಕೆಯಲ್ಲಿ ರೈತ ತೊಡಗಿದ್ದ ವೇಳೆ ಆಕಸ್ಮಿಕವಾಗಿ ಮೃತಪಟ್ಟರೆ ಸರ್ಕಾರ 1 ಲಕ್ಷ ರೂ. ಪರಿಹಾರ ಕೊಡುತ್ತಿತ್ತು. ಆದರೆ ಪ್ರಸಕ್ತ ವರ್ಷ 2 ಲಕ್ಷ ರೂ.ಗೆ ಪರಿಹಾರ ಮೊತ್ತ ಹೆಚ್ಚಿಸಿದೆ. ಇನ್ನು ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾದರೆ ಅದರ ಪರಿಹಾರವನ್ನೂ ದ್ವಿಗುಣಗೊಳಿಸಿ ಆದೇಶ ಮಾಡಿದೆ.
ಶಬಾನಾ ಶೇಖ್ ಜಂಟಿ ಕೃಷಿ ನಿರ್ದೇಶಕಿ, ಕೊಪ್ಪಳ
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.