Koppala: 450 ಹಾಸಿಗೆ ಆಸ್ಪತ್ರೆಗೆ ಹೆಚ್ಚುವರಿ ನೆರವು
Team Udayavani, Sep 5, 2023, 5:50 PM IST
ಕೊಪ್ಪಳ: ನಗರದಲ್ಲಿ ಆರಂಭಿಸಿದ 450 ಹಾಸಿಗೆಯುಳ್ಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಬಹುದಿನಗಳಿಂದ ನನೆಗುದಿಗೆ
ಬಿದ್ದಿದೆ. ಹಿಂದೆ ನಮ್ಮದೇ ಸರ್ಕಾರ ಇದ್ದಾಗ 2017ರಲ್ಲಿ ಮಂಜೂರು ಮಾಡಿ ನಾವೇ ಅಡಿಗಲ್ಲು ಹಾಕಿದ್ದೆವು. ಹಿಂದಿನ ಬಿಜೆಪಿ
ಸರ್ಕಾರ ಇದಕ್ಕೆ ಏನೂ ಮಾಡಲಿಲ್ಲ. ಇದರ ಸ್ಥಿತಿಗತಿ ನೋಡಿ ಶೀಘ್ರದಲ್ಲಿಯೇ ಆರಂಭಿಸಲು ಹೆಚ್ಚುವರಿ ಅನುದಾನ ಸಂಪುಟದಲ್ಲಿ ಒಪ್ಪಿಗೆ ಪಡೆದು ಬಿಡುಗಡೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 450 ಹಾಸಿಗೆಯ ಆಸ್ಪತ್ರೆಯಲ್ಲಿ ಶೇ. 90ರಷ್ಟು ಕಾಮಗಾರಿ ಮುಗಿದಿದೆ. ಇದಕ್ಕೆ ಹೆಚ್ಚುವರಿ 47 ಕೋಟಿ ರೂ. ಬೇಕಾಗಬಹುದು. ಅದಕ್ಕೆ ಅನುದಾನ ಕೊಡುವ ಪ್ರಯತ್ನ ಮಾಡಲಾಗುವುದು. ಈ ಆಸ್ಪತ್ರೆ ಆರಂಭವಾದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ. ಇಲ್ಲಿ ಸುಸಜ್ಜಿತ ವ್ಯವಸ್ಥೆ ಬರಲಿದೆ. ಒಬಿಜಿ, ರೇಡಿಯೋಲಾಜಿ, ಮೆಡಿಷನ್, ಸರ್ಜರಿ ಸೇರಿ ಇತರೆ ವಿಭಾಗ ಆರಂಭವಾಗಲಿವೆ. ಇದಕ್ಕೆ ಹೆಚ್ಚುವರಿ ಅನುದಾನಬೇಕಿದ್ದು, ಸಚಿವ ಸಂಪುಟಕ್ಕೆ ಶೀಘ್ರದಲ್ಲಿಯೇ ತಂದು ಸಂಪುಟ ಅನುಮತಿ ಸಿಕ್ಕ ತಕ್ಷಣ ನಾಲ್ಕೈದು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದರು.
ನ್ಯೂರಾಲಾಜಿ, ಕಾರ್ಡಿಯಾಲಾಜಿ ಸೇರಿ ಇತರೆ ಚಿಕಿತ್ಸೆಗಳು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಹಂತಕ್ಕೆ ಬರುತ್ತವೆ. ಪ್ರಸ್ತುತ
ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಿ ರೋಗಿಗಳಿಗೆ ಚಿಕಿತ್ಸೆ ಕೊಡಬೇಕಿದೆ. ಇಲ್ಲಿ ಬೇಡಿಕೆ ಅನುಸಾರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ವಿಚಾರ ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಹಿಂದಿನ ಸರ್ಕಾರದ ಅವ ಧಿಯಲ್ಲಿ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಸುಮ್ಮನೆ ಎಲ್ಲವನ್ನು ಹೇಳಿಕೊಂಡು ಹೋದರು. ಗದಗ, ಕಾರವಾರ, ಬೆಳಗಾವಿ, ಕೊಪ್ಪಳದಲ್ಲಿ ನನ್ನ ಅವ ಧಿಯಲ್ಲಿಯೇ ಆಸ್ಪತ್ರೆ ಆರಂಭಿಸಿದ್ದೆವು. ಅವುಗಳೇ ಇನ್ನೂ ಪೂರ್ಣಗೊಂಡಿಲ್ಲ. ಕಟ್ಟಡಕ್ಕೆ ಅನುದಾನ ಬೇಕಿದೆ. ನಂತರದಲ್ಲಿ ಇಲ್ಲಿನ ಸಾಮಗ್ರಿಗಳಿಗೆ ಅನುದಾನ ಅನುವು ಮಾಡಿಕೊಡಲಾಗುವುದು ಎಂದರು.
ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಉದ್ದೇಶವಿದ್ದು, ಅದೂ ನನ್ನ ಅಧೀನದಲ್ಲಿ ಬರುವುದರಿಂದ ಈ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಚಿವ ಡಾ| ಎಂ.ಸಿ. ಸುಧಾಕರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.