ಮತ್ತೆ ಸುರಿದ ವರುಣ: ನಿಟ್ಟುಸಿರು ಬಿಟ್ಟ ರೈತರು
ಬಿಸಿಲಿನ ತಾಪಕ್ಕೆ ಕಮರುವ ಸ್ಥಿತಿಯಲ್ಲಿತ್ತು ಹೆಸರು ಬೆಳೆ
Team Udayavani, Jun 2, 2022, 2:31 PM IST
ಕುಷ್ಟಗಿ: ಬಿತ್ತನೆ ಮಾಡಿದ ಹೆಸರು ಬೆಳೆಗೆ ಸಕಾಲಿಕವಾಗಿ ಮಳೆಯಾಗದೇ ಆತಂಕದಲ್ಲಿದ್ದ ರೈತರಿಗೆ, ತಡರಾತ್ರಿ ಸುರಿದ ಚದುರಿದ ಮಳೆಯಿಂದ ನಿರಾತಂಕರಾಗಿದ್ದಾರೆ.
ಕಳೆದ ಮೇ 19ರಂದು ಅಸನಿ ಚಂಡಮಾರುತ ಮಳೆಯಿಂದಾಗಿ ಸಾಕಷ್ಟು ತೇವಂಶವಾಗಿತ್ತು. ನಂತರ ಬಿತ್ತನೆಗೆ ಪೂರಕ ತೇವಾಂಶ ಗಮನಿಸಿ ಬಹುತೇಕ ರೈತರು ಹೆಸರು, ಎಳ್ಳು, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಈ ನಡುವೆ ಹವಮಾನ ತಜ್ಞರು, ಕೃಷಿ ಇಲಾಖೆಯ ಮೂಲಕ ಮುಂಗಾರು ಮಳೆ ಪ್ರವೇಶಕ್ಕೆ ಕಾಲವಾಕಾಶವಿದೆ. ಇದು ಮುಂಗಾರು ಪೂರ್ವದ ಮಳೆಯಾಗಿದ್ದು, ರೈತರು ಬಿತ್ತನೆಗೆ ಅವಸರ ಮಾಡಬೇಡಿ. ಬಿತ್ತನೆ ಮಾಡಿದರೆ ನಂತರದ ತಾಪಮಾನಕ್ಕೆ ಅಗಿ ಸಾಯುವ ಸಾಧ್ಯತೆಗಳ ಸಲಹೆ ನೀಡಿದ್ದರು.
ಹವಾಮಾನ ಇಲಾಖೆಯ ಮಾಹಿತಿಯಂತೆ ಬಿತ್ತನೆ ನಂತರ ಮಳೆ ಆಗದೇ ಅಂದಾಜು 15 ದಿನದ ಮೊಳಕೆಯೊಡೆದ ಹೆಸರು ಬೆಳೆಗೆ ಮಳೆ ತೀರ ಅಗತ್ಯ ಆಗಿತ್ತು. ಈ ಸಂದರ್ಭದಲ್ಲಿ ಕೆಲವೆಡೆ ಮಳೆ ಕೊರತೆ ಎದುರಿಸುವ ಪರಿಸ್ಥಿತಿಯಲ್ಲಿ ಹಲವೆಡೆ ಹೆಸರು ಬೆಳೆ ಬಿಸಿಲಿನ ತಾಪಕ್ಕೆ ಕಮರುವ ಸ್ಥಿತಿಯಲ್ಲಿತ್ತು.
ರೈತರ ನಿರೀಕ್ಷೆಯಂತೆ ಮೇ 31 ತಡರಾತ್ರಿ ತಾಲೂಕಿನಾದ್ಯಂತ ಚದುರಿದ ಮಳೆಯಾಗಿದೆ. ಹವಾಮಾನ ಇಲಾಖೆ ಜೂನ್ 5ಕ್ಕೆ ಮುಂಗಾರು ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಹವಾಮಾನ ಇಲಾಖೆ ನಂತರ ಮತ್ತೂಂದು ಪ್ರಕಟಣೆಯಲ್ಲಿ ರಾಜ್ಯಕ್ಕೆ ನಾಲ್ಕು ದಿನ ಮೊದಲೇ ಮುಂಗಾರು ಪ್ರವೇಶದ ಪ್ರಕಟಣೆ ನೀಡಿದ್ದರು. ವೈದ್ಯರು ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎನ್ನುವಂತೆ ತಾಲೂಕಿನಲ್ಲಿ ಅಲ್ಪಸ್ವಲ್ಪ ಮಳೆಯಾಗಿರುವುದು ಬೆಳೆ ಚೇತರಿಕೆ ಸಾಧ್ಯವಾಗಿದೆ.
ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಾತನಾಡಿ, ತಾಲೂಕಿನ 6 ಮಳೆ ಮಾಪನಾ ಕೇಂದ್ರ ವ್ಯಾಪ್ತಿಯ ಕುಷ್ಟಗಿ 4.4 ಮಿ.ಮೀ. ಹನುಮಸಾಗರ 16.2 ಮಿ.ಮೀ., ದೋಟಿಹಾಳ 19.3 ಮಿ.ಮೀ., ಕಿಲ್ಲಾರಹಟ್ಟಿಯಲ್ಲಿ 28.2 ಮೀ ನಷ್ಟು ಹಾಗೂ ತಾವರಗೇರಾ 12 ಮಿ.ಮೀ ನಷ್ಟು ಮಳೆಯಾಗಿದೆ. ಈ ಮಳೆಯಿಂದ ಹಿಂದಿನ ಮಳೆ ಹಾಗೂ ಈಗಿನ ಮಳೆ ಹಸಿ ಕಲೆತು ಹೆಸರು, ಎಳ್ಳು, ಸೂರ್ಯಕಾಂತಿ ಹೆಸರಿಗೆ ಪೂರಕವಾಗಿದೆ ಎಂದರು.
ಅಡವಿಯಲ್ಲಿ ಗುರ್ಜಿ ಪೂಜೆ: ಬಿತ್ತನೆ ಬಳಿಕ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ಕಳೆದ ಮೇ 29ರಂದು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ಆಚರಿಸಿದ್ದರು. ಇದಾದ ಮೂರನೇ ದಿನ ಮೇ 31 ತಡರಾತ್ರಿ ಚದುರಿದಂತೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಗುರ್ಜಿಯ ಫಲಶ್ರುತಿ ಸಂಭ್ರಮದಲ್ಲಿ ಸದರಿ ಆಚರಣೆಗೆ ದೇವಸ್ಥಾನ ಆವರಣದಲ್ಲಿ ಅನ್ನ ಸಂತರ್ಪಣೆ ಮೂಲಕ ತೆರೆ ಗುರ್ಜಿ ಪೂಜೆಗೆ ತೆರೆ ಎಳೆದರು. ತಾಲೂಕಿನ ಅಡವಿ ಗ್ರಾಮದ ರೈತ ಮಲ್ಲಿಕಾರ್ಜುನ ದೋಟಿಹಾಳ ಪ್ರತಿಕ್ರಿಯಿಸಿ ನಮ್ಮೂರಲ್ಲಿ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ ಕಳೆದ ಎರಡ್ಮೂರು ದಿನಗಳಲ್ಲಿ ಮಳೆ ಆಗದೇ ಇದ್ದರೆ ಹೆಸರು ಬೆಳೆ ಕೈ ಕೊಡುವ ಸಾಧ್ಯತೆಗಳಿದ್ದವು. ನಮ್ಮೂರಲ್ಲಿ ಮಳೆರಾಯನಿಗಾಗಿ ಗ್ರಾಮಸ್ಥರು ಗುರ್ಜಿ ಅಚರಣೆ ಮಾಡಿದ್ದವು. ರೈತರ ಪ್ರಾರ್ಥನೆಗೆ ಸಾಧಾರಣ ಮಳೆಯಾಗಿದೆ. ಹೀಗಾಗಿ ರೈತರು ಖುಷಿಯಾಗಿ ಜೂನ್ 1ರಂದು ಗುರ್ಜಿಯ ಸಂಪನ್ನ ಕಾರ್ಯಕ್ರಮದ ಮೊದಲೇ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.