ಗಮನ ಸೆಳೆಯುತ್ತಿದೆ ಭಾರೀ ಗಾತ್ರದ ಪೇರಲ
ನಾಟಿ ಮಾಡಿದ ಎರಡನೇ ವರ್ಷಕ್ಕೆ ಫಸಲು
Team Udayavani, Nov 29, 2020, 3:38 PM IST
ಕುಷ್ಟಗಿ: ತಾಲೂಕಿನ ಕಂದಕೂರು ವ್ಯಾಪ್ತಿಯ ಕೊನಸಾಗರ ಗ್ರಾಮದಲ್ಲಿ ರೈತರೊಬ್ಬರು ತೈವಾನ್ ಪಿಂಕ್ ತಳಿ ಪೇರಲ ಬೆಳೆದಿದ್ದು, ದೊಡ್ಡ ಗಾತ್ರದ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸಿದ್ದು, ಸ್ವಾದೀಷ್ಟದಲ್ಲೂ ಸೈ ಎನಿಸಿಕೊಂಡಿದೆ. ಕುಷ್ಟಗಿ-ಹೊಸಪೇಟೆ ಸುವರ್ಣ ಚತುಷ್ಪಥ ಹೆದ್ದಾರಿ ಕುರಬನಾಳ ಕ್ರಾಸ್ ಸಮೀಪದಲ್ಲಿ ಕೊನಸಾಗರದ ರೈತ ನಾಗರಾಜ್ ರಡ್ಡಿ ಅವರು ತಮ್ಮ 5 ಎಕರೆ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಮೂರು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.
ನಾಟಿ ಮಾಡಿದ ಮಾರನೇ ವರ್ಷವೇ ಇಳುವರಿ ನೀಡುತ್ತಿದ್ದು, ಗಿಡಗಳು ಚಿಕ್ಕವು ಎನ್ನುವ ಕಾರಣದಿಂದ ಸ್ಥಳೀಯವಾಗಿ ಮಾರಾಟ ಮಾಡಿದ್ದರು. ಪ್ರಸಕ್ತ ವರ್ಷದಲ್ಲಿ ಭರ್ಜರಿ ಇಳುವರಿ ಬಂದಿದ್ದು, ಉತ್ಕೃಷ್ಟ ಗುಣಮಟ್ಟದ ಹಣ್ಣುಗಳು ಬೆಳೆದಿವೆ. ಪ್ರತಿ ಪೇರಲ 350ರಿಂದ 600 ಗ್ರಾಂ ಕಡಿಮೆ ಇಲ್ಲ. ಎರಡು ಹಣ್ಣು ಸೇರಿದರೆ ಒಂದು ಕೆ.ಜಿ. ತೂಗುತ್ತಿದ್ದು, ಗಿಡದಲ್ಲಿ ದೊಡ್ಡ ಗಾತ್ರದ ಹಣ್ಣುಗಳು ತೂಗಾಡುತ್ತಿದೆ.
ಇದನ್ನೂ ಓದಿ:ನಿವಾರ್ ಚಳಿ-ಮಳೆಗೆ ಜನಜೀವನ ತತ್ತರ
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ತೋಟದ ಪೇರಲ ಗಮನಿಸುವ ಪ್ರಯಾಣಿಕರು ವಾಹನ ನಿಲ್ಲಿಸಿ ತಮಗೆ ಬೇಕಿರುವಷ್ಟು ಹಣ್ಣುಗಳನ್ನು ಖರೀ ದಿಸುತ್ತಿದ್ದಾರೆ. ತೋಟಕ್ಕೆ ಬಂದ ಗ್ರಾಹಕರಿಗೆ 30 ರೂ.ಗೆ ಕೆಜಿಯಂತೆ ಮಾರಾಟ ಮಾಡಲಾಗುತ್ತಿದ್ದು,ತಾಜಾ ಹಣ್ಣುಗಳನ್ನು ಮನೆಗೆ ಒಯ್ಯುವುದು ಪ್ರಯಾಣಿಕರಿಗೆ ಖುಷಿ ಎನಿಸಿದೆ. ಕೆಲವರು ತಮ್ಮ ಆಪ್ತರಿಗೆ ಈ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಹಣ್ಣು ಮಾರುವ ವ್ಯಾಪಾರಿಗಳು ಇದ್ದಲ್ಲಿಗೆ ಬಂದು ಖರೀ ದಿಸಿ ಮಾರುತ್ತಿದ್ದು, ನಿತ್ಯ 5ರಿಂದ 10 ಕ್ವಿಂಟಲ್‌ಗೂ ಅಧಿ ಕ ಹಣ್ಣು ಮಾರಾಟವಾಗುತ್ತಿದೆ.
ಇತ್ತೀಚಿನ ದಿನಮಾನಗಳಲ್ಲಿ ಪೇರಲ (ಸೀಬೆ) ಬೇಡಿಕೆ ಹೆಚ್ಚಿದ್ದು ಅದರಲ್ಲಿ ಮಧುಮೇಹ ರೋಗಿಗಳಿಗೆ ಇಷ್ಟವಾದ ಹಣ್ಣಾಗಿದ್ದು, ಇದರಲ್ಲಿ ಸಿ ವಿಟಾಮಿನ್ ಜಾಸ್ತಿ ಇದೆ. ಎಲ್ಲ ಕಾಯಿಲೆಗೂ ರಾಮಬಾಣ ಎನ್ನುವುದು ಪ್ರಚಲಿತದಲ್ಲಿದೆ. ದೇಹಕ್ಕೆ ಅಗತ್ಯವಿರುವಷ್ಟು ಪೌಷ್ಟಿಕಾಂಶ ನೀಡುತ್ತಿದ್ದು, ಡಯಟಿಂಗ್ ಹಾಗೂ ಕೊಬ್ಬಿನಾಂಶ ಪ್ರಮಾಣ ಕುಂಠಿತಗೊಳಿಸುತ್ತದೆ.
ಈ ಹಣ್ಣಿನಲ್ಲಿ ಪೈಬರ್ ಸಮೃದ್ಧವಾಗಿರುವುದರಿಂದ ಹೃದಯವನ್ನು ಉತ್ತಮಗೊಳಿಸಬಲ್ಲದು. ಇದರಲ್ಲಿ ಪೊಟ್ಯಾಷಿಯಂ ಇರುವ ಹಿನ್ನೆಲೆಯಲ್ಲಿ ರಕ್ತದ ಒತ್ತಡ ನಿಯಂತ್ರಿಸಬಲ್ಲದು, ಕೆಟ್ಟ ಕೊಲೆಸ್ಟಾಲ್ ಅಂಶವನ್ನು ಕಡಿಮೆಗೊಳಿಸಲಿದೆ. ಇದರಲ್ಲಿರುವ ಪಾಲಿಸ್ಯಾಕರೈಡ್ ಎಂಬ ಕಾಬ್ರೋಹೈಡ್ರೆಟ್ ಉತ್ಕರ್ಷಣ ನಿರೋಧಕವಾಗಿ ಕೆಲಸ ನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.