ಉತ್ತಮ ಸಾರಿಗೆಯಿಂದ ಕೃಷಿ ಪ್ರಗತಿ: ಆಚಾರ್
ಬೆಂಗಳೂರು-ರಾಮನಗರ ಜಿಲ್ಲೆಗೆ ಬಸ್ ಸೌಲಭ್ಯ
Team Udayavani, Apr 4, 2022, 5:10 PM IST
ಯಲಬುರ್ಗಾ: ಕೃಷಿ ಉತ್ಪನ್ನಗಳಿಗೆ ಮೂಲಸೌಲಭ್ಯ ಹಾಗೂ ಬೆಲೆ ಸಿಗಬೇಕಾದರೇ ಸಾರಿಗೆ ವ್ಯವಸ್ಥೆ ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಕಡೆ ಸಾರಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದಿಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆದಿರುವ ರೇಷ್ಮೆ ಬೆಳೆ ಮಾರುಕಟ್ಟೆ ತಲುಪುವುದಕ್ಕೆ ಅನೂಕುಲವಾಗುವ ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗೆ ನೂತನ ಬಸ್ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರಕಾರ ಹಾಗೂ ಸಾರಿಗೆ ಸಚಿವರು ರಾಜ್ಯದ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಕೋಟಿಗೂ ಹೆಚ್ಚು ಜನ ನಿತ್ಯ ಬಸ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣ, ನಗರ ಪ್ರದೇಶಗಳಿಗೆ ಜನರು ಪ್ರಯಾಣಿಸಲು ಬಸ್ ಗಳನ್ನು ಬಿಟ್ಟಿದ್ದು, ಲಾಭ, ನಷ್ಟ ನೋಡುತ್ತಿಲ್ಲ. ಒಟ್ಟಿನಲ್ಲಿ ಜನರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನಲ್ಲಿಯೂ ಸಾರಿಗೆ ಸೌಕರ್ಯ ತುಂಬಾ ಉತ್ತಮವಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಿಗೂ ಬಸ್ ಸೌಕರ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳ ಶಾಲಾ-ಕಾಲೇಜು ಸಮಯಕ್ಕೆ ಅನುಸರವಾಗಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಲಾಗಿದೆ.
ತಾಲೂಕಿನಲ್ಲಿ ಇತ್ತೀಚೆಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯುವುದಕ್ಕೆ ಮುಂದಾಗಿದ್ದು, ಸ್ಥಳೀಯವಾಗಿ ರೇಷ್ಮೆ ಮಾರುಕಟ್ಟೆ ಲಭ್ಯವಿಲ್ಲ ಹಾಗೂ ಸೂಕ್ತ ಬೆಲೆ ಇಲ್ಲದ ಕಾರಣ ರೈತರು ಸಮಸ್ಯೆ ಎದುರಿಸುವಂತಾಗಿತ್ತು. ರಾಮನಗರದಲ್ಲಿ ರೇಷ್ಮೆಗೆ ಸೂಕ್ತ ಬೆಲೆ ಇರುವ ಕಾರಣ ಸಾಕಷ್ಟು ರೈತರು ಮಾರುಕಟ್ಟೆಗೆ ರಾಮನಗರವನ್ನೇ ಅವಲಂಬಿಸಿದ್ದರು. ಈ ಎಲ್ಲ ಕಾರಣದಿಂದ ಬಸ್ ಸೌಲಭ್ಯ ಕಲ್ಪಿಸಿಕೊಡುವುದು ಅವಶ್ಯವಾಗಿತ್ತು. ಹಾಗೆಯೇ ಯಲಬುರ್ಗಾದಿಂದ ಜಾವಗಲ್‌ವರೆಗೂ ಬಸ್ ಸಂಚಾರ ಆರಂಭಿಸಲಾಯಿತು. ರೈತರು ಬಸ್ ವ್ಯವಸ್ಥೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಅಶೋಕ ಅರಕೇರಿ, ಈರಪ್ಪ ಬಣಕಾರ, ಸಿದ್ದರಾಮೇಶ ಬೆಲೇರಿ,ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅಮರಪ್ಪ ಕಲಬುರ್ಗಿ, ಸಿ.ಎಚ್. ಪೊಲೀಸಪಾಟೀಲ್, ಪ್ರಭುರಾಜ ಕಲಬುರ್ಗಿ, ಸುನೀಲ ಕುಲಕರ್ಣಿ, ರಿಯಾಜ್ ಖಾಜಿ, ಇಕ್ಬಾಲ್ ಸಾಬ್ ವಣಗೇರಿ, ಗೌಸುಸಾಬ್ ಕನಕಗಿರಿ, ಎಂ.ಎಫ್. ನದಾಫ್, ಮುನಾಫ್, ಡಿಪೋ ಮ್ಯಾನೇಜರ್ ರಮೇಶ ಚಿಣಗಿ, ಚಂದ್ರು ಮರದಡ್ಡಿ, ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.