ಕೋಡಿ ಒಡೆದ ಅಮರಾಪುರ ಕೆರೆ; ಅಪಾರ ಪ್ರಮಾಣದ ನೀರು ಹಳ್ಳದ ಪಾಲು
Team Udayavani, Oct 14, 2022, 10:47 PM IST
ಕುಷ್ಟಗಿ: ಕಳೆದ ಮೂರು ದಿನಗಳಿಂದ ನಿರಂತರ ಮಳೆಗೆ ತಾಲೂಕಿನ ಅಮರಾಪುರ ಗ್ರಾಮದ ಕೆರೆ ಒಡೆದಿದೆ. ಈ ಪ್ರದೇಶದಲ್ಲಿ ಜಾಸ್ತಿ ಮಳೆಯೇ ಕೆರೆ ಕಟ್ಟೆ ನೆನೆದು ಒಡೆಯಲು ಕಾರಣವಾಗಿದ್ದು, ಕೆರೆ ಕಟ್ಟೆಯ ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಪಾಲಾಗಿದೆ.
ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಈ ಮಳೆಗೆ ಹಳ್ಳದ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಜಮೆಯಾಗಿದ್ದು, ಕೆರೆ ಕೋಡಿ ಹಾಗೂ ಒಡ್ಡಿನ ಮೇಲೆ ಹರಿದ ಪರಿಣಾಮ ಕೆರೆಕಟ್ಟೆ ಒಡೆದು, ಸಂಗ್ರಹವಾದ ಅಪಾರ ಪ್ರಮಾಣದ ನೀರು ಹಳ್ಳ ಸೇರಿದೆ.
2009-10ನೇ ಸಾಲಿನಲ್ಲಿ ಹಿಂದೆ ಸಣ್ಣ ನೀರಾವರಿ ಇಲಾಖೆಯೂ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 13 ಎಕರೆ ಪ್ರದೇಶದಲ್ಲಿ ಈ ಕೆರೆ 80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಕೆರೆ ನಿರ್ಮಿಸಿದಾಗಿನಿಂದ ಇಷ್ಟೊಂದು ಪ್ರಮಾಣದಲ್ಲಿ ನೀರು ಜಮೆಯಾಗಿ ಕೆರೆ ಕಟ್ಟೆ ಒಡೆಯುವ ಮಟ್ಟಿಗೆ ನೀರು ಬಂದಿರುವುದು ಇದೇ ಮೊದಲು. ಯಾವೂದೇ ಬೆಳೆ ಹಾನಿ ಸಂಭವಿಸಿಲ್ಲ ಎನ್ನುವುದೇ ಸಮಾಧಾನಕರ ಅಂಶವಾಗಿದೆ.
ಅನುಮಾನ?
ಈ ಹಿಂದೆ ಸದರಿ ಕೆರೆಯಲ್ಲಿ ನಿಂತಿರುವ ನೀರಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆಯದೇ ಖಾಸಗಿ ಮೀನು ಸಾಕಾಣಿಕೆಗೆ ಮೀನು ಮರಿಗಳನ್ನು ಬಿಟ್ಟಿದ್ದರು. ಮೀನುಗಳ ಕೆರೆಯ ಒಳಗಟ್ಟೆಯ ಮೂಲಕ ಹೊರಗೆ ಹೋಗಬಾರದು ಎನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಒಳ್ಳಗಟ್ಟಿ ಬಂದ್ ಮಾಡಿದ್ದರಿಂದಲೇ ಕೆರೆ ಒಡೆಯಲು ಕಾರಣ ಅನುಮಾನ ಸಾರ್ವಜನಿಕವಾಗಿ ದಟ್ಟವಾಗಿದೆ. ಆದರೆ ಸಣ್ಣ ನೀರಾವರಿ ಅಧಿಕಾರಿಗಳು ಈ ಅನುಮಾನ ಅಲ್ಲಗಳೆದಿದ್ದು, ಜಾಸ್ತಿ ಮಳೆಯಿಂದ ಕೆರೆ ಒಡೆದಿರುವ ಸಮಾಜಾಯಿಷಿಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಅಮರಾಪೂರ ಕೆರೆಯ ನೀರು, ಹಳ್ಳದ ಪಾಲಾಗಿರುವುದರಿಂದ ಅಂತರ್ಜಲ ಕುಸಿಯುವ ಆತಂಕ ರೈತರದ್ದಾಗಿದೆ.
ಒಡೆದ ಕೆರೆಯ ಪ್ರದೇಶಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಸಣ್ಣ ನೀರಾವರಿ ಇಲಾಖೆಯ ಇಇ ನಾಗನಾಗೌಡ, ಎಇಇ ಸೂಗಪ್ಪ, ಜೆಇ ರಾಜಶೇಖರ ಕಟ್ಟಿಮನಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.