ಸೌಲಭ್ಯ ನಿರೀಕ್ಷೆಯಲ್ಲಿ ಅಂಗನವಾಡಿ ಕೇಂದ್ರಗಳು
ದಶಕಗಳಿಂದ ಬಾಡಿಗೆ ಮನೆಗಳಲ್ಲಿ ಅಂಗನವಾಡಿ ಕೇಂದ್ರ ; ಕಟ್ಟಿಗೆ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ತಯಾರಿ
Team Udayavani, Nov 14, 2022, 11:29 AM IST
ದೋಟಿಹಾಳ: ಒಂದು ಸಣ್ಣ ಕೊಠಡಿಯಲ್ಲಿ ಒಂದೆಡೆ ವಿದ್ಯಾರ್ಥಿಗಳು, ಮತ್ತೂಂದೆಡೆ ಪೌಷ್ಟಿಕ ಆಹಾರದ ಚೀಲಗಳು. ಅತ್ತ ಕುಡಿಯುವ ನೀರಿನ ಬಿಂದಿಗೆಗಳು, ಇತ್ತ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮಾಹಿತಿಯ ಚಾರ್ಟ್ ಗಳು… ಇದು ಹಿರೇಮನ್ನಾಪುರ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಕಂಡು ಬರುವ ದೃಶ್ಯ.. ಹಿರೇಮನ್ನಾಪುರ ಗ್ರಾಮದ ಅಂಗನವಾಡಿ ಕೇಂದ್ರಗಳು ದಶಕಗಳಿಂದ ಮೂಲಸೌಕರ್ಯ ವಂಚಿತವಾಗಿವೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಅನೇಕ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೇ, ಬಾಡಿಗೆ ಮನೆಗಳಲ್ಲಿ ನಡೆಯುತ್ತಿರುವುದು ದುರಂತವಾಗಿದೆ. ಗ್ರಾಮದಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳ ಪೈಕಿ 4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಈ ಕೇಂದ್ರಗಳು ಸುಮಾರು 15 ವರ್ಷಗಳಿಂದ ಇಕ್ಕಟ್ಟಿನ ಪ್ರದೇಶ ಹಾಗೂ ಜಾಗಗಳಲ್ಲಿ ನಡೆಯುತ್ತಿವೆ. ಈ ಗ್ರಾಮದ 2, 3, 4 ಮತ್ತು 7ನೇ ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಇದರಲ್ಲಿ 2, 3, 4ನೇ ಕೇಂದ್ರಗಳು ಆರಂಭವಾಗಿ ಸುಮಾರು 17ವರ್ಷಗಳು ಕಳೆದರು ಇನ್ನೂ ಇವುಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಕೇಂದ್ರಗಳು ನಾಟಕದ ಕಂಪನಿಯಂತೆ 2-3 ವರ್ಷಕ್ಕೊಮ್ಮೆ ಮನೆಗಳನ್ನು ಬದಲಾವಣೆ ಮಾಡುತ್ತ ಕೇಂದ್ರವನ್ನು ಕಾರ್ಯಕರ್ತೆಯರು ನಡೆಸುತ್ತಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಕಲ್ಪಿಸುವಂತೆ ಕಳೆದ 10 ವರ್ಷಗಳಿಂದ ಗ್ರಾಪಂಗೆ ಮನವಿ ಮಾಡಲಾಗುತ್ತಿದೆ. ಆದರೆ ನಿವೇಶನ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬಾಡಿಗೆ ಮನೆಗಳಲ್ಲಿ ಕೇಂದ್ರ ನಡೆಸುತ್ತಿದ್ದೇವೆ. 2-3 ವರ್ಷಕ್ಕೊಮ್ಮೆ ಮನೆಗಳನ್ನು ಬದಲಾವಣೆ ಮಾಡಿದ್ದೇವೆ ಎಂದು ಕೇಂದ್ರ ಕಾರ್ಯಕರ್ತೆಯರು ತಿಳಿಸಿದರು.
ಇಲ್ಲಿಯ 7ನೇ ಅಂಗನವಾಡಿ ಕೇಂದ್ರ ಚಿಕ್ಕ ಕೊಠಡಿಯಲ್ಲಿದೆ. ಇಲ್ಲಿಯ ಮಕ್ಕಳಿಗೆ ಕಟ್ಟಿಗೆಯ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ತಯಾರಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಕಾರ್ಯಕರ್ತೆಯನ್ನು ವಿಚಾರಿಸಿದಾಗ. ಏನ್ ಮಾಡುವುದು, ಬಾಡಿಗೆ ಮನೆ ಸಿಗುತ್ತಿಲ್ಲ ಸ್ವಂತ ಕಟ್ಟಡವೂ ಇಲ್ಲ. ಅನಿವಾರ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ನಡೆಸುತ್ತಿದ್ದೇವೆ ಎಂದು ತಮ್ಮ ನೋವು ತೋಡಿಕೊಂಡರು.
ಇಲ್ಲಿಯ ನಾಲ್ಕು ಕೇಂದ್ರಗಳು ಹಳೆಯ ಮನೆಗಳಲ್ಲಿ ನಡೆಯುತ್ತಿವೆ. ಈ ಮನೆಗೆ ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಇಕ್ಕಟ್ಟಾದ ಸ್ಥಳದಲ್ಲಿ ಕೇಂದ್ರ ನಡೆಯುತ್ತಿದೆ. ಕೊಠಡಿಯ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಅಗತ್ಯ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಮೇಲ್ಛಾವಣಿ ದುರಸ್ತಿಯಲ್ಲಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಸುರಿಯುತ್ತದೆ. ಇಂತಹ ಸ್ಥಿತಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಮಾಡಲು ಸ್ಥಳಾವಕಾಶವಿಲ್ಲದೇ, ಗರ್ಭಿಣಿಯರಿಗೆ ನೀಡುವ ಊಟವನ್ನು ಅವರ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ.
ಹಿರೇಮನ್ನಾಪುರ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳು ಸುಮಾರು 10-15 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ನಡೆಯುತ್ತಿವೆ. ಅಲ್ಲಿಯ ಗ್ರಾಪಂಗೆ ನಿವೇಶನ ನೀಡಲು ಮನವಿ ಮಾಡಿದರು ಇದುವರೆಗೂ ಯಾವುದೂ ಪ್ರಯೋಜನವಾಗಿಲ್ಲ. –ನಾಗಮ್ಮ, ಅಂಗನವಾಡಿ ಮೇಲ್ವಿಚಾರಕಿ
ತಾಲೂಕಿನಲ್ಲಿ ಸುಮಾರು 13 ಕೇಂದ್ರಗಳು ಬಾಡಿಗೆ ಮನೆಗಳಲ್ಲಿವೆ. ಹಿರೇಮನ್ನಾಪುರ ಗ್ರಾಮದ 4 ಕೇಂದ್ರಗಳು 10-15 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಸದ್ಯ ರಾಜ್ಯ ಪಂಚಾಯತ್ ರಾಜ್ ಆಯುಕ್ತಾಲಯ ಬೆಂಗಳೂರು ಅವರು ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಸಮೀಪದ ಶಾಲೆಗಳಲ್ಲಿ ಕೊಠಡಿ ಒದಗಿಸಲು ತಿಳಿಸಿದ್ದಾರೆ. -ವಿರೂಪಾಕ್ಷಯ್ಯ, ಸಿಡಿಪಿಒ ಕುಷ್ಟಗಿ
ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.