ಹಿರೇಮನ್ನಾಪೂರ ಏಳನೇ ಅಂಗನವಾಡಿ ಕೇಂದ್ರ ಸರಕಾರಿ ಶಾಲಾ ಕಟ್ಟಡಕ್ಕೆ ಶಿಫ್ಟ್
Team Udayavani, Nov 30, 2022, 6:53 PM IST
ದೋಟಿಹಾಳ: ಹಿರೇಮನ್ನಾಪೂರ ಗ್ರಾಮದಲ್ಲಿ ಏಳು ಅಂಗನವಾಡಿ ಕೇಂದ್ರಗಳು ದಶಕಗಳಿಂದ ಮೂಲಸೌಲರ್ಯದಿಂದ ವಂಚಿತವಾಗಿ, ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದವು.
ಇಲ್ಲಿಯ 7ನೇ ಅಂಗನವಾಡಿ ಕೇಂದ್ರ ಒಂದು ಚಿಕ್ಕ ಕೊಠಡಿಯಲ್ಲಿ ಇದು. ಇಲ್ಲಿಯ ಮಕ್ಕಳಿಗೆ ಅಡಿಗೆ ಮಾಡಲು ಕಟ್ಟಿಗೆಯ ಸಣ್ಣ ಕಪಾಟಿನಲ್ಲಿ ದಿನನಿತ್ಯ ಮಕ್ಕಳಿಗೆ ಅಡಿಗೆ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದರು. ಇದರ ಬಗ್ಗೆ ಕೇಂದ್ರ ಕಾರ್ಯಕರ್ತೆಯನ್ನು ವಿಚಾರಿಸಿದಾಗ. ಇನ್ನೂ ಮಾಡುವುದು ಸರ್.. ಬಾಡಿಗೆ ಮನೆಗು ಸಿಗುತ್ತಿಲ್ಲ. ಸ್ವಂತ ಕಟ್ಟಡವು ಇಲ್ಲ.. ಅನಿವಾರ್ಯವಾಗಿ ಇಂಥ ಪರಿಸ್ಥಿತಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಈ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೇ ಕಳೆದ 10 ವರ್ಷಗಳಿಂದ ಬಾಡಿಗೆ ಮನೆಗಲ್ಲಿ ನಡೆಯುತ್ತಿವೆ. ಇದರ ಬಗ್ಗೆ ನ:14ರಂದು ಉದಯವಾಣಿ ವೆಬ್‌ನಲ್ಲಿ ಮತ್ತು ಉದಯವಾಣಿ ಪತ್ರಿಕೆಯಲ್ಲಿ “ಸೌಲಭ್ಯ ನಿರೀಕ್ಷೆಯಲ್ಲಿ ಅಂಗನವಾಡಿ ಕೇಂದ್ರಗಳು, ಕಟ್ಟಿಗೆ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ತಯಾರಿ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಮೇಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಹಳೆ ಕಟ್ಟಡಗಳನ್ನು ಪರಿಶೀಲಿಸಿ ಅದರಲ್ಲಿ ಒಂದು ಕೊಠಡಿಯನ್ನು ಸ್ವಚ್ಛ ಮಾಡಿ ಈ ಕೊಠಡಿಯಲ್ಲಿ ಸದ್ಯ ತಾತ್ಕಾಲಿಕವಾಗಿ ಕಟ್ಟಿಗೆ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ಮಾಡುತ್ತಿದ. 7ನೇ ಅಂಗನವಾಡಿ ಕೇಂದ್ರವನ್ನು ಇಲ್ಲಿಗೆ ಶಿಫ್ಟ್ ಮಾಡಿದಾರೆ.
ಮಂಗಳವಾರ ಸರಕಾರಿ ಶಾಲಾ ಕೊಠಡಿಯನ್ನು ಸ್ವಚ್ಛತೆ ಮಾಡಿ ಸರಸ್ವತಿ ಪೂಜೆ ಮಾಡಿ ಇಲ್ಲಿಗೆ 7ನೇ ಅಂಗನವಾಡಿ ಕೇಂದ್ರದವರು ಆಗಮಿಸಿದರು. ಈ ವೇಳೆ ಮಾತನಾಡಿದ ಸಿಡಿಪಿಒ ವಿರೂಪಾಕ್ಷಯ್ಯ ಅವರು ಈ ಗ್ರಾಮದಲ್ಲಿ ಸರಕಾರಿ ನಿವೇಶನದ ಕೊರತೆಯಿಂದ ನಾಲ್ಕು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸದ್ಯ ಹಳೆಯ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಈ ಕೇಂದ್ರ ನಡೆಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷರು ದೇವಪ್ಪ ಸುಬೇದಾರ, ಗ್ರಾಪಂ ಸದಸ್ಯ ಪರಸಪ್ಪ ಚಳ್ಳೂರ, ಮಾಜಿ ಗ್ರಾಪಂ ಹನಮಂತ ಅಳ್ಳಳ್ಳಿ, ಪಿಡಿಒ ಶಿವಪುತ್ರಪ್ಪ ಬರದೇಲಿ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳು, ಹಿರೇಮನ್ನಾಪೂರ ವಲಯದ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಮಕ್ಕಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.