Anjanadri: ಬೈಕ್ ಕಾಲುವೆಗೆ ಬಿದ್ದು ಓರ್ವ ಸಾವು, ಮತ್ತೊರ್ವನ ಕಾಲು ಮುರಿತ
ಸಾಣಾಪೂರ-ವಿರೂಪಾಪೂರಗಡ್ಡಿ ಮಧ್ಯೆ ವಿಜಯನಗರ ಕಾಲುವೆ ಅವೈಜ್ಞಾನಿಕ ನಿರ್ಮಾಣ
Team Udayavani, Dec 7, 2024, 10:03 AM IST
ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದ ಒರಿಸ್ಸಾ ಮೂಲದ ಇಬ್ಬರು ಹನುಮ ಭಕ್ತರ ಬೈಕ್ ವಿಜಯನಗರ ಕಾಲುವೆಗೆ ಬಿದ್ದು ಓರ್ವ ಮೃತಪಟ್ಟು ಮತ್ತೋರ್ವನ ಕಾಲು ಮುರಿದಿರುವ ಘಟನೆ ತಾಲೂಕಿನ ಸಾಣಾಪುರ ಮತ್ತು ವಿರುಪಾಪುರ ಗಡ್ಡಿ ರಾಜ್ಯ ಹೆದ್ದಾರಿ 130ರಲ್ಲಿ ಡಿ.7ರ ಶನಿವಾರ ನಡೆದಿದೆ.
ಕೊಪ್ಪಳದ ಮೆತಗಲ್ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಿಲ್ಲೂ ಲಾಲ್ ಟೆಂಡ (30) ಮೃತಪಟ್ಟಿದ್ದು, ಕಿರಣ್ ನಾಯಕ್(40) ಕಾಲು ಮುರಿದುಕೊಂಡ ವ್ಯಕ್ತಿ.
ಇವರಿಬ್ಬರೂ ಬೆಳಗಿನ ಜಾವ ಕೊಪ್ಪಳ ದಿಂದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ಶ್ರೀ ಆಂಜನೇಯ ಸ್ವಾಮಿ ದರ್ಶನಕ್ಕೆ ಆಗಮಿಸುವ ಸಂದರ್ಭದಲ್ಲಿ ತಿರುವು ರಸ್ತೆಯಲ್ಲಿರುವ ಸಾಣಾಪೂರ ಮತ್ತು ವಿರೂಪಾಪೂರಗಡ್ಡಿ ಮಾರ್ಗ ಮಧ್ಯೆ ವಿಜಯನಗರ ಕಾಲುವೆಗೆ ಬಿದ್ದ ಪರಿಣಾಮ ಲಿಲ್ಲೂ ಲಾಲ್ ಟೆಂಡ ಅವರು ಸ್ಥಳದಲ್ಲಿ ಮೃತಪಟ್ಟಿದ್ದು, ಕಿರಣ್ ನಾಯಕ್ ಅವರ ಬಲಗಾಲು ಮುರಿತಕ್ಕೊಳಗಾಗಿದೆ.
ಕಾಲುವೆಗೆ ಬಿದ್ದ ಇಬ್ಬರ ಪೈಕಿ ಲಿಲ್ಲೂ ಅವರು ವಿಜಯನಗರ ಕಾಲುವೆ ನೀರಿನಲ್ಲಿ ಮುಳುಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಿರಣ್ ನಾಯಕ ಅವರನ್ನು ಸ್ಥಳೀಯರು ರಕ್ಷಿಸಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಜಯನಗರ ಕಾಲುವೆ ಅವೈಜ್ಞಾನಿಕ ನಿರ್ಮಾಣ: ಸಾಣಾಪೂರ ಮತ್ತು ವಿರೂಪಾಪುರ ಗಡ್ಡಿ ಮಧ್ಯೆ ವಿಜಯನಗರ ಕಾಲುವೆ ಶಾಶ್ವತ ರಿಪೇರಿ ಕಾಮಗಾರಿ ಮಾಡಿದ್ದು ಕಾಲುವೆಗೆ ವಾಹನಗಳು, ಸವಾರರು ಬೀಳದಂತೆ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಇದರಿಂದ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.
ಹುಲಗಿ-ಗಂಗಾವತಿ ರಸ್ತೆಯನ್ನು 20 ವರ್ಷಗಳ ಹಿಂದೆಯೇ ರಾಜ್ಯ ಹೆದ್ದಾರಿ ಎಂದು ಘೋಷಣೆ ಮಾಡಿದ್ದರೂ ಅನುದಾನ ಮತ್ತು ನಿರ್ವಹಣೆ ಕೊರತೆ ಇದೆ. ಪುರಾತನ ವಿಜಯನಗರ ಕಾಲುವೆ ಮತ್ತು ಸಂರಕ್ಷಿತ ಬೆಟ್ಟ ಪ್ರದೇಶವಾಗಿರುವುದರಿಂದ ಕಾಲುವೆಗೆ ವಾಹನಗಳು ಬೀಳದಂತೆ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಜೊತೆಗೆ ರಸ್ತೆ ತುಂಬಾ ಗುಂಡಿಗಳು ಬಿದ್ದಿದ್ದು, ನಿತ್ಯವೂ ಹುಲಗಿ, ಅಂಜನಾದ್ರಿ, ಆನೆಗೊಂದಿ, ಪಂಪ ಸರೋವರ ಪ್ರವಾಸಿ ತಾಣಗಳಿಗೆ ಆಗಮಿಸುವ ಸಾವಿರಾರು ಪ್ರವಾಸಿಗರ ವಾಹನಗಳು ಇಲ್ಲಿ ನಿತ್ಯವೂ ಅಪಘಾತಕೀಡಾಗುವುದು ಸಾಮಾನ್ಯವಾಗಿದೆ.
ನೀರಾವರಿ ಇಲಾಖೆ ಲೋಕೋಪಯೋಗಿ ಇಲಾಖೆ ಪ್ರವಾಸೋದ್ಯಮ ಇಲಾಖೆಯವರು ಹುಲಗಿ- ಗಂಗಾವತಿ ಮಾರ್ಗ ಅಭಿವೃದ್ಧಿಪಡಿಸಬೇಕು. ಸಂಚಾರಿ ಅಪಘಾತ ಮುನ್ನೆಚ್ಚರಿಕೆ ಬೋರ್ಡ್ ಗಳನ್ನು ಹಾಕಬೇಕು. ರಸ್ತೆ ಕಾಮಗಾರಿ ಕೈಗೊಂಡು ಅಲ್ಲಲ್ಲಿ ರೋಡ್ ಬ್ರೇಕರ್ ಗಳನ್ನು ಹಾಕುವ ಮೂಲಕ ವಾಹನಗಳ ವೇಗವನ್ನು ತಡೆಯಬೇಕು. ಜೊತೆಗೆ ಕಾಲುವೆ ಉದ್ದಕ್ಕೂ ರಕ್ಷಣಾ ಗೋಡೆ ನಿರ್ಮಿಸಿ ಕಾಲುವೆಗೆ ವಾಹನಗಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.