ಕಿಷ್ಕಿಂಧಾ ಅಂಜನಾದ್ರಿ, ಮೋರ್ಯರ ಬೆಟ್ಟ ಸ್ಥಳಕ್ಕೆ ತೆರಳಲು ಮಾರ್ಗಸೂಚಿ ಫಲಕ ಅಳವಡಿಸಲು ಆಗ್ರಹ
Team Udayavani, Jul 26, 2023, 3:20 PM IST
ಗಂಗಾವತಿ: ತಾಲೂಕಿನ ಐತಿಹಾಸಿಕ ಸ್ಥಳಗಳಾದ ಕಿಷ್ಕಿಂಧಾ ಅಂಜನಾದ್ರಿ ಪಂಪ ಸರೋವರ ಮೋರ್ಯರ ಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಹೋಗಲು ಮಾರ್ಗಸೂಚಿಫಲಕಗಳನ್ನು ಕನ್ನಡ, ಇಂಗ್ಲಿಷ್ ,ಹಿಂದಿಯಲ್ಲಿ ಅಳವಡಿಸುವಂತೆ ಚಾರಣ ಬಳಗದ ಸಂಚಾಲಕರಾದ ಡಾ.ಶಿವಕುಮಾರ್ ಮಾಲೀಪಾಟೀಲ್ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.
ರಾಯಚೂರು ಕಡೆಯಿಂದ ಬರುವವರು ಕೊಪ್ಪಳ ,ಗದಗ, ಹುಬ್ಬಳ್ಳಿ ಹೋಗುವ ಮಾರ್ಗ- ಆನೆಗೊಂದಿ , ಅಂಜನಾದ್ರಿ ,ಹೊಸಪೇಟೆಗೆ ಹೋಗುವ ಮಾರ್ಗ-ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ಬರೆಸಬೇಕು.
ಕಂಪ್ಲಿ ಹೋಗುವ ಮಾರ್ಗ -ಸಿಂದನೂರ್ ,ರಾಯಚೂರು ಮಾರ್ಗ -ಜುಲಾಯಿ ನಗರ ವೃತ್ತದಲ್ಲಿ ಬರೆಸಬೇಕು.
ಕೊಪ್ಪಳ ಕಡೆಯಿಂದ ಬರುವವರು ಕನಕಗಿರಿ , ರಾಯಚೂರು ,ಗಂಗಾವತಿ ಬಸ್ ನಿಲ್ದಾಣ ಹೋಗುವ ಮಾರ್ಗ ,
ಸಿ ಬಿ ಎಸ್ ವೃತ್ತದಲ್ಲಿ ಬರೆಸಬೇಕು.
ಆನೆಗೊಂದಿ ಕಡೆಯಿಂದ ಬರುವ ಪ್ರವಾಸಿಗರು , ಕಂಪ್ಲಿ ,ಕಾರಟಗಿ,ಸಿಂಧನೂರು,ಬೈಪಾಸ್ ರಸ್ತೆ ಮಾರ್ಗ,
ಗಾಂಧಿ ವೃತ್ತಕ್ಕೆ , ಕೋರ್ಟ್ ಗೆ ಹೋಗುವ ಮಾರ್ಗ ಬಸ್ ನಿಲ್ದಾಣ ,ನೀಲಕಂಠೇಶ್ವರ ವೃತ್ತದಲ್ಲಿ ಬರೆಸಬೇಕು.
ಗಂಗಾವತಿಗೆ ಬರುವ ಪ್ರವಾಸಿಗರು ,ವಾಹನ ಸವಾರರು ,ವಾಹನ ನಿಲ್ಲಿಸಿ ಕೇಳುತ್ತಾ ಸಾಗಬೇಕು. ಮಧ್ಯರಾತ್ರಿ ಬರುವ,ಹೋಗುವ ಪ್ರವಾಸಿಗರಿಗೆ ತುಂಬಾ ತೊಂದರೆ ಆಗುತ್ತದೆ.ಆದಷ್ಟು ಬೇಗ ಸರಕಾರ ,ನಗರಸಭೆ ಕ್ರಮ ತೆಗೆದುಕೊಳ್ಳಬೇಕು. ಕನ್ನಡ ,ಇಂಗ್ಲಿಷ್ ಭಾಷೆಯಲ್ಲಿ ಬರೆಸುವಂತೆ ದಂತ ವೈದ್ಯ ಡಾ.ಶಿವಕುಮಾರ್ ಮಾಲೀಪಾಟೀಲ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.