ಡಾ. ಬಿ.ಆರ್. ಅಂಬೇಡ್ಕರ್ ಪ್ರಕರಣ ಫೋಟೋ ತೆರವು ಪ್ರಕರಣ : ಸೂಕ್ತ ಕ್ರಮಕ್ಕೆ ಮನವಿ
Team Udayavani, Feb 7, 2022, 2:36 PM IST
ಕುಷ್ಟಗಿ: ರಾಯಚೂರು ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ತೆರವು ಪ್ರಕರಣ ಹಾಗೂ ಹುಮ್ನಾಬಾದ ತಹಶೀಲ್ದಾರ ಡಾ. ಪ್ರದೀಪ್ ಕುಮಾರ ಹಿರೇಮಠ ಅವರ ಮೇಲಿನ ಹಲ್ಲೆ ಖಂಡಿಸಿ, ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ, ಬೇಡ ಜಂಗಮ ಸಮಾಜದಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಕುಷ್ಟಗಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಹುಮ್ನಾಬಾದ ತಹಶೀಲ್ದಾರ ಡಾ.ಪ್ರದೀಪ ಕುಮಾರ ಹಿರೇಮಠ ಅವರ ಮೇಲೆ ಗುಂಡಾಗಳು ಕಚೇರಿಗೆ ನುಗ್ಗಿ ಹಲ್ಲೆ ನಡೆಸಿರುವುದು ಕಾರ್ಯಾಂಗದ ಘನತೆ ಕಪ್ಪು ಚುಕ್ಕೆಯಾಗಿದೆ. ಸಂವಿಧಾನದ ಆಶಯಗಳನ್ನು ಅರಗಿಸಿಕೊಳ್ಳದ ಕೆಲವರು ಇಂತಹ ಅಮಾನವೀಯ ಕೃತ್ಯಗಳಿಗೆ ಕೈಹಾಕುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.
ಮೊದಲಿನಿಂದಲೂ ಬೇಡ ಜಂಗಮ ಸಮಾಜದವರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಿದ್ದು, ಜಾತಿ ನಿಂದನೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಹುಮನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿರುವವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ನಡೆಯುತ್ತಿರುವುದು ಸುಸಂಸ್ಕೃತ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವುದು ಭಯದ ವಾತವರಣ ಮೂಡಿಸಿದೆ. ಇಂತಹ ಘಟನೆಗಳು ಮರುಕಳಿಸಲು ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಿದರು.
ತಹಶೀಲ್ದಾರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಶೀಲ್ದಾರ ಮುರಲೀಧರ ಮೊಕ್ತೆದಾರ ಅವರಿಗೆ ಮನವಿ ಸಲ್ಲಿಸಿದರು ಬೇಡ ಜಂಗಮ ಸಮಾಜದ ಅಧ್ಯಕ್ಷ ಶಿವು ಗಂಧದಮಠ, ಎಸ್.ಎಚ್ ಹಿರೇಮಠ, ಶಂಕ್ರಯ್ಯ ಕಂಪಾಪೂರಮಠ, ದೊಡ್ಡಯ್ಯ ಗದ್ದಡಕಿ, ವಿಜಯಕುಮಾರ ಹಿರೇಮಠ,ಕಿಶೋರ ಹಿರೇಮಠ, ವೀರೇಶಯ್ಯ ಮಠಪತಿ, ವೈಜನಾಥ ಹಿರೇಮಠ, ಶರಣಯ್ಯ ಹಿರೇಮಠ, ಉಮೇಶ ಹಿರೇಮಠ, ವೀರಗಂಗಾಧರ ಹಿರೇಮಠ, ಶೇಖರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ ಮತ್ತೀತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
MUST WATCH
ಹೊಸ ಸೇರ್ಪಡೆ
Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.