ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರಕ್ಕೆ ಮೆಚ್ಚುಗೆ
Team Udayavani, Mar 16, 2021, 6:03 PM IST
ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯ ಇಸೇಲ್ ಮಾದರಿ ತೋಟಗಾರಿಕೆ ಕ್ಷೇತ್ರಕ್ಕೆ ಬೆಂಗಳೂರು ತೋಟಗಾರಿಕೆ ಇಲಾಖೆ ನಿರ್ದೇಶನಾಲಯದ ನಿರ್ದೇಶಕಿ ಬಿ. ಪೌಜೀಯ ತರುನಂ ಭೇಟಿ ನೀಡಿ ಪರಿಶೀಲಿಸಿದರು.
ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಎರೆಜಲ ಹಾಗೂ ಎರೆಗೊಬ್ಬರ ಮಾದರಿ ಘಟಕ, ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ, ಸಂರಕ್ಷಿತ ದಾಳಿಂಬೆ, ಟೊಮ್ಯಾಟೋ ಸೇರಿದಂತೆ ಇತರೇ ಬೆಳೆಗಳಾದ ಡ್ರ್ಯಾಗನ್ ಫ್ರುಟ್, ಮಧುವನ ಜೇನು ಘಟಕ, ಮೀನುಗಾರಿಕೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಡಶೇಸಿ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ತರಕಾರಿ ಹಾಗೂ ಹಣ್ಣುಗಳ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇನ್ಮುಂದೆ ಪುಷ್ಪ ಕೃಷಿಗೂ ಆದ್ಯತೆ ವಹಿಸಬೇಕು ಇದಕ್ಕೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಮಧುವನದ ಜೇನು ಘಟಕದಲ್ಲಿರುವ ಮಿಶ್ರೀ ಜೇನಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಎರೆಜಲ ಹಾಗೂ ಎರೆಗೊಬ್ಬರ ಘಟಕ ಪರಿಶೀಲಿಸಿದ ನಿರ್ದೇಶಕಿ ಬಿ. ಪೌಜೀಯ ತರುನಂ ಅವರು, ಈ ಘಟಕದ ರಾಜ್ಯದಲ್ಲಿ ಮಾದರಿ ಸರ್ಕಾರಿ ಘಟಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಭೇಟಿಯ ಜ್ಞಾಪಕಾರ್ಥವಾಗಿ ತೆಂಗಿನ ಸಸಿ ನಾಟಿ ಮಾಡಿದರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ, ಸಹಾಯಕ ಅಧಿಕಾರಿ ಆಂಜನೇಯ ದಾಸರ್, ಕಳಕನಗೌಡ ಪಾಟೀಲ ಮತ್ತೀತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.