ಅಪ್ಪು ಪುಟ್ಟ ಅಭಿಮಾನಿಯಿಂದ ನೇತ್ರದಾನ ಮಾಡುವ ಸಂದೇಶ ಮತ್ತು ಶಪಥ
Team Udayavani, Nov 8, 2021, 6:51 PM IST
ಗಂಗಾವತಿ: ಕನ್ನಡ ಚಿತ್ರರಂಗದ ಪವರ್*ಪುನೀತ್ ರಾಜ್ ಕುಮಾರ್ ಅಪ್ಪು ಅಪ್ಪುವನ್ನು ಪ್ರೀತಿಸದವರಿಲ್ಲ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅಪ್ಪುವಿನ ಅಭಿಮಾನಿಗಳು ಇದ್ದಾರೆ .ನಿತ್ಯವೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪುವಿನ ಸಮಾಧಿ ದರ್ಶನ ಮಾಡಲು ನಾಡಿನ ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಅವರ ಅಭಿಮಾನಿಗಳು ಬರುತ್ತಿದ್ದಾರೆ .ಈ ಮಧ್ಯೆ ಅಪ್ಪು ಅಭಿಮಾನಿಗಳು ಅವರಂತೆ ಚಾರೀಟಿ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ .ಗಂಗಾವತಿ ನಗರದ ಹಿರಿಯ ರಂಗಭೂಮಿ ಕಲಾವಿದ ಅಮರೇಶಪ್ಪ ಇಂಗಳಗಿ ಅವರ ಮೊಮ್ಮಗ ಚಂದನ್ ಮಲ್ಲಿಕಾರ್ಜುನ
ಇಂಗಳಗಿ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ.ಗಂಗಾವತಿ ಹಂಪಿ ಸುತ್ತ ಪುನೀತ್ ಅವರ ಸಿನಿಮಾ ಶೂಟಿಂಗ್ ಇದ್ದರೆ ಅವರ ಪಾಲಕರನ್ನು ಒತ್ತಾಯಿಸಿ ಶೂಟಿಂಗ್ ನೋಡಲು ಚಂದನ್ ಇಂಗಳಿಗಿ ತಪ್ಪದೇ ಹೋಗುತ್ತಿದ್ದ ಇತ್ತೀಚೆಗೆ ಗಂಗಾವತಿ ಹತ್ತಿರ ಜೇಮ್ಸ್ ಸಿನೆಮಾ ಚಿತ್ರೀಕರಣ ಸಂದರ್ಭದಲ್ಲಿ ಪಾಲಕರನ್ನು ಕಾಡಿಬೇಡಿ ಚಂದನ್ ಇಂಗಳಗಿ ಶೂಟಿಂಗ್ ನೋಡಲು ಹೋಗಿದ್ದ ಆ ಸಂದರ್ಭದಲ್ಲಿ ಪುನೀತ್ ಅವರನ್ನ ದೂರದಿಂದಲೇ ಕೈ ಮಾಡಿ ಖುಷಿ ಪಟ್ಟ ಇದನ್ನು ಗಮನಿಸಿದ ಪುನೀತ್ ರಾಜ್ ಕುಮಾರ್ ಚೆಂಡನ್ನು ಹತ್ತಿರ ಕರೆದುಕೊಂಡು ಕುಶಲೋಪರಿಯನ್ನು ವಿಚಾರಿಸಿ ಹೆಸರು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು .
ಅಪ್ಪುವನ್ನು ಕಳೆದುಕೊಂಡ ನಾಡಿನ ಜನ ಪರಿತಪಿಸುವಂತೆ ಚಂದ ಕೂಡ ಅಪ್ಪು ನಿಧನದ ನಂತರ ಮಂಕಾಗಿದ್ದಾನೆ .2ದಿನ ಊಟ ನಿದ್ರೆ ಬಿಟ್ಟು ಅಪ್ಪು ಅವರೊಂದಿಗೆ ತೆಗೆಸಿಕೊಂಡ ಫೋಟೋ ಜತೆಗೆ ಮಲಗಿದ್ದಾನೆ . ದೀಪಾವಳಿ ಹಬ್ಬದಲ್ಲಿ ಹೊಸ ಬಟ್ಟೆ ಧರಿಸದೆ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಯುತ್ತಾ ಕಣ್ಣೀರಿಟ್ಟಿದ್ದಾನೆ .ಇದೀಗ ಪುನೀತ್ ರಾಜ್ ಕುಮಾರ್ ಅವರಂತೆ ತನ್ನ ಕಣ್ಣನ್ನು ದಾನ ಮಾಡಲು ಅವರ ತಂದೆ ಮತ್ತು ಮನೆಯ ಕುಟುಂಬದ ಹಿರಿಯರಿಗೆ ಮನೆಯು ಮಾಡಿ ಕಣ್ಣನ್ನ ದಾನವಾಗಿ ಕೊಟ್ಟು ತನ್ನಂತೆ ಎಲ್ಲಾ ಅಪ್ಪುವಿನ ಅಭಿಮಾನಿಗಳು ಸಹ ಕಣ್ಣನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಕತ್ತಲನ್ನು ದೂರ ಮಾಡುವಂತೆ ತಮ್ಮ ಮನವಿ ಮಾಡಿದ್ದಾನೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.