ಅಪ್ಪು ಪ್ಲೀಸ್… ಒಮ್ಮೆ ಭೇಟಿಯಾಗಿ: ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧ ಸಹೋದರಿಯರು !
Team Udayavani, Oct 18, 2020, 3:55 PM IST
ಗಂಗಾವತಿ: ಕನ್ನಡ ಚಿತ್ರರಂಗದ ಮೇರು ಕಲಾವಿದ ದಿ. ಡಾ. ರಾಜಕುಮಾರ್ ಅಭಿಮಾನಿಗಳ ಹೃದಯ ಗೆದ್ದ ಕಲಾವಿದರಾಗಿದ್ದು, ಕನ್ನಡನಾಡಿನಲ್ಲಿ ಡಾ.ರಾಜ್ ಕುಟುಂಬದವರು ಎಲ್ಲೇ ಹೋದರೂ ಸಾವಿರಾರು ಜನ ಅಭಿಮಾನಿಗಳು ಸೇರುತ್ತಾರೆ.
ತಾಲೂಕಿನ ಮಲ್ಲಾಪೂರ ಗ್ರಾಮದ ನಾಲ್ವರು ಅಂಧ ಡಾ.ರಾಜ್ ಕುಟುಂಬದ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಂಡು ಮಾತನಾಡಿಸುವ ಅಭಿಲಾಷೆಯಿಂದ ಪುನೀತ್ ರಾಜಕುಮಾರ್ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಮಲ್ಲಾಪೂರದ ಹತ್ತಿರದ ವಾಣೀಭದ್ರೇಶ್ವರ ಬೆಟ್ಟದಲ್ಲಿ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಚೇತನ ನಿರ್ದೇಶನದ ಜೇಮ್ಸ್ ಸಿನೆಮಾ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಮಲ್ಲಾಪೂರ ಗ್ರಾಮದಲ್ಲಿರುವ ಬೆಳ್ಳೇಶ್ವರಿ, ಪ್ರಮೀಳಾ, ಶಾಂತಮ್ಮ ಮತ್ತು ರೇಣುಕಾ ಎಂಬ ನಾಲ್ವರು ಅಂಧ ಸಹೋದರಿಯರು ಶೂಟಿಂಗ್ ಸ್ಥಳಕ್ಕೆ ಹೋದರೂ ಅಪ್ಪುವನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅಂಧ ಅಭಿಮಾನಿಗಳು ನಿರಾಸೆಯಿಂದ ವಾಪಾಸ್ಸಾಗಿದ್ದರು.
ಇದನ್ನೂ ಓದಿ: ಪ್ರವಾಹ ಸಂತೃಸ್ಥರಿಗೆ ಊಟ ನೀಡಲು ಹಣವಿಲ್ಲ,ಇದು ಸರಕಾರದ ವೈಫಲ್ಯ: ಸತೀಶ್ ಜಾರಕಿಹೊಳಿ
ಈ ಹಿಂದೆ ಪುನೀತ್ ರಾಜಕುಮಾರ್ ಖಾಸಗಿ ವಾಹಿನಿಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿದ್ದಾಗ, ಅಂಧೆಯಾಗಿರುವ ಬೆಳ್ಳೇಶ್ವರಿ ಕಾರ್ಯಕ್ರಮಕ್ಕೆ ತೆರಳಲು ಸಿದ್ದತೆ ನಡೆಸಿದರೂ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಉಳಿದ ಮೂರು ಜನ ಸಹೋದರಿಯರು ಕೂಡ ನಿರಾಸೆ ಅನುಭವಿಸಿದ್ದರು. ಇದೀಗ ಮಲ್ಲಾಪೂರ ಗ್ರಾಮದ ಹತ್ತಿರ ಶೂಟಿಂಗ್ ನಡೆಯುತ್ತಿದ್ದು ಈಗಲಾದರೂ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿಸುವ ಕನಸು ನನಸಾಗುವ ನಿರೀಕ್ಷೆಯಲ್ಲಿ ಕಣ್ಣಿಲ್ಲದ ನಾಲ್ವರು ಸಹೋದರಿಯರಿದ್ದಾರೆ.
ಇದನ್ನೂ ಓದಿ: ಭಾರತಕ್ಕಿಂತ ಪಾಕಿಸ್ಥಾನವೇ ಉತ್ತಮವಾಗಿ ಕೋವಿಡ್ ನಿಯಂತ್ರಣ ಮಾಡಿದೆ: ಶಶಿ ತರೂರ್
ಕನಸು ನನಸಾಗಬೇಕು: ಡಾ.ರಾಜ್ ಕುಮಾರ್ ಕನ್ನಡ ಆಸ್ತಿಯಾಗಿದ್ದಾರೆ. ಡಾ.ರಾಜ್ ಕುಟುಂಬದವರನ್ನು ಹತ್ತಿರದಿಂದ ಮಾತನಾಡಿಸುವ ನಮ್ಮ ಕನಸನ್ನು ಪುನೀತ್ ರಾಜ್ ಕುಮಾರ್ ಈಡೇರಿಸುವ ಭರವಸೆಯಿದೆ. ನಾಲ್ವರು ಸಹೋದರಿಯರು ಹುಟ್ಟಿನಿಂದ ಕುರುಡರಾಗಿದ್ದು ಡಾ.ರಾಜಕುಮಾರ ಅಭಿಮಾನಿಗಳಾಗಿದ್ದೇವೆ. ಟಿವಿಯಲ್ಲಿ ಪ್ರಸಾರವಾಗುವ ಡಾ.ರಾಜಕುಮಾರ್ ಹಾಗೂ ಕುಟುಂಬದವರ ಸಿನೆಮಾ ನೋಡಲು ಎಲ್ಲರಿಗೂ ಇಷ್ಟವಾಗಿದೆ ಅವರ ಆಗಮನದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಅಂಧರ ಕುಟುಂಬದ ಹಿರಿಯ ಸಹೋದರಿ ರೇಣುಕಾ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.