ಗಮನ ಸೆಳೆಯುತ್ತಿದೆ ಪ್ಲಾಸ್ಟಿಕ್ ಸೇತುವೆ
Team Udayavani, Mar 14, 2020, 3:07 PM IST
ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವುದು ಇನ್ಮುಂದೆ ಸರಳವಾಗುವುದು. ನವವೃಂದಾವನ ಗಡ್ಡಿಗೆ ಹೋಗಲು ವ್ಯಾಸರಾಯ(ರಾಜ) ಮಠದ ವತಿಯಿಂದ ತಾತ್ಕಲಿಕವಾಗಿ 200 ಮೀಟರ್ ಉದ್ದದ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿದ್ದು ಗಮನ ಸೆಳೆಯುತ್ತಿದ್ದೆ. ಹೊಸಪೇಟೆ ತಾಲೂಕಿನ ವೆಂಕಟಾಪೂರ ಸೀಮೆಯ ದಂಡೆ ಮತ್ತು ನವವೃಂದಾವನ ಗಡ್ಡಿ ಮಧ್ಯೆ ತೇಲುವ ತಾತ್ಕಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಿಸಲಾಗಿದೆ.
ಗುರುವಾರದಿಂದ ಆರಂಭವಾಗಿರುವ ವ್ಯಾಸರಾಯ(ರಾಜ)ರ ಆರಾಧನಾ ಕಾರ್ಯಕ್ರಮದಲ್ಲಿ ವ್ಯಾಸರಾಯರ ಮಠದ ಪೂಜ್ಯರು ಪಾಲ್ಗೊಂಡು ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನಕೂಲವಾಗುವಂತೆ ಮಠದ ವತಿಯಿಂದ ತೇಲುವ ತಾತ್ಕಲಿಕ ಸೇತುವೆಯನ್ನು ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿಯವರು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ನೀರಿನಲ್ಲಿ ತೇಲುತ್ತದೆ. ನವವೃಂದಾವನ ಗಡ್ಡಿ ಮತ್ತು ವೆಂಕಟಾಪೂರ ಸೀಮೆಯ ದಂಡೆಯಿಂದ ಸುಮಾರು 200 ಮೀಟರ್ ಅಂತರವಿದ್ದು, ಇಲ್ಲಿ ತುಂಗಭದ್ರಾ ನದಿ ನೀರು ಒಂದು ಮಡುವಿನಲ್ಲಿ ನಿಲ್ಲುತ್ತದೆ. ನಿಂತ ನೀರಿನಲ್ಲಿ ತೇಲುವ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಸೇತುವೆ ನಿರ್ಮಾಣಗೊಂಡಿದೆ.
2+2 ಅಳತೆಯ 10 ಕೆಜಿ ಭಾರದ ಪ್ಲಾಸ್ಟಿಕ್ ಡಬ್ಬಿಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಲಾಕ್ ಮಾಡಲಾಗುತ್ತದೆ. ಎರಡು ದಂಡೆಯಿಂದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಸೇತುವೆ ನಿರ್ಮಿಸಲಾಗುತ್ತದೆ. ಈ ಸೇತುವೆಯನ್ನು ನಿಂತ ನೀರಿನಲ್ಲಿ ಮಾತ್ರ ಜನರು ಸಂಚರಿಸಲು ಬಳಕೆ ಮಾಡಬಹುದು. ಭಾರವಾದ ವಸ್ತುಗಳನ್ನು ತೆಗೆದುಕೊಂಡ ಹೋದರೆ ಮುಳುಗುವ ಅವಕಾಶಗಳಿರುತ್ತವೆ. ಆರಾಧನಾ ಸಂದರ್ಭದಲ್ಲಿ ಮಾತ್ರ ತೇಲುವ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿ ನಂತರ ತೆಗೆಯಲಾಗುತ್ತದೆ. ತಾತ್ಕಲಿಕ ಸೇತುವೆ ನಿರ್ಮಾಣದಿಂದ ಆರಾಧನೆಗೆ ಆಗಮಿಸುವ ಭಕ್ತರಿಗೆ ಮತ್ತು ಪೂಜ್ಯರಿಗೆ ಅನುಕೂಲವಾಗಿದೆ.
ವೆಂಕಟಾಪೂರ ಕಡೆಯಿಂದ ನವವೃಂದಾವನ ಗಡ್ಡಿಗೆ ಆಗಮಿಸಲು ತುಂಗಭದ್ರಾ ನದಿಯ ನಿಂತ ನೀರಿನಲ್ಲಿ ಎಲ್ಲ ಸುರಕ್ಷತಾ ಕ್ರಮಗಳಿಗೆ ಅನುಗುಣವಾಗಿ ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿ ತೇಲುವ ತಾತ್ಕಲಿಕ ಸೇತುವೆ ನಿರ್ಮಿಸಿದೆ. ತಜ್ಞರ ತಾಂತ್ರಿಕತೆಗೆ ಅನುಗುಣವಾಗಿ ತೆಲುವ ಸೇತುವೆ ತುಂಗಭದ್ರಾ ನದಿಯಲ್ಲಿ ನಿರ್ಮಿಸಲಾಗಿದೆ. ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವವರಿಗೆ ಇದರಿಂದ ಅನುಕೂಲವಾಗಿದೆ. ಆನೆಗೊಂದಿ ಭಾಗದಲ್ಲಿ ಇಂತಹ ತೇಲುವ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಆನೆಗೊಂದಿ ಕಡೆ ತುಂಗಭದ್ರಾ ನದಿಯಲ್ಲಿ ಕಲ್ಲು ಬಂಡೆ ಹಾಗೂ ನೀರಿನ ಹರಿವು ರಭಸವಾಗಿರುವುದರಿಂದ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. -ಸುಮಂತ ಕುಲಕರ್ಣಿ, ವ್ಯವಸ್ಥಾಪಕರು ಶ್ರೀರಾಘವೇಂದ್ರಸ್ವಾಮಿ ಮಠ ಆನೆಗೊಂದಿ
-ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.