ಜಿಲ್ಲಾದ್ಯಂತ ಕೋವಿಡ್ ಲಸಿಕಾ ಜಾಗೃತಿ
Team Udayavani, Mar 17, 2021, 4:50 PM IST
ಕೊಪ್ಪಳ: ಬೆಟಗೇರಿ ಗ್ರಾಮದಲ್ಲಿ ವೃದ್ಧರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಡಂಗೂರ ಬಾರಿಸಿದ ಗ್ರಾಮ ಸೇವಕ.
ಕೊಪ್ಪಳ: ಕೋವಿಡ್ ಮಹಾಮಾರಿ ನಿಯಂತ್ರಿಸಲು ಸರ್ಕಾರ ಕಟಿಬದ್ಧವಾಗಿದ್ದು, 2ನೇ ಹಂತದಲ್ಲಿಲಸಿಕಾ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಳ್ಳಿ ಹಳ್ಳಿಯಲ್ಲೂ ಡಂಗೂರ ಹೊಡೆಸಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುತ್ತಿದೆ.
ಜಿಲ್ಲೆಯಲ್ಲಿ ಒಂದೆಡೆ ಕೋವಿಡ್ ಆತಂಕ ಮರೆಯಾಗುತ್ತಿದ್ದರೆ ಇನ್ನೊಂದೆಡೆ ಎರಡನೇ ಅಲೆಎದುರಾಗುವ ಸಣ್ಣ ಆತಂಕ ಕಾಣಿಸಿಕೊಳ್ಳುತ್ತಿದೆ.ಈ ಮಧ್ಯೆಯೂ ಜಿಲ್ಲಾದ್ಯಂತ ಮೊದಲ ಹಂತದಲ್ಲಿ11 ಸಾವಿರ ಜನರಿಗೆ ಕೋವಿಡ್ ಲಸಿಕೆ ಹಾಕಿಸಲು ಯೋಜನೆ ರೂಪಿಸಿ ಶೇ. 80ರಷ್ಟು ಜನರಿಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದೆ.
ಆದರೆ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು 2ನೇ ಹಂತದ ಅಭಿಯಾನ ಆರಂಭವಾಗಿದ್ದು, ಜಿಲ್ಲಾಡಳಿತವು ಈ ಕುರಿತಂತೆ ಅಧಿಕಾರಿಗಳ ಸಭೆನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆ ಬಗ್ಗೆಜನರಲ್ಲಿ ಇರುವ ಭಯ ಹೋಗಲಾಡಿಸುವಂತೆಸೂಚನೆ ನೀಡಿದೆ. ಹಾಗಾಗಿ ಪ್ರತಿ ಹಳ್ಳಿಯಲ್ಲೂವೃದ್ಧರು ಲಸಿಕೆ ಪಡೆಯುವಂತೆ ಮಾಡಲು ಆಶಾ,ಅಂಗನವಾಡಿ ಕಾರ್ಯಕರ್ತೆಯರ ಮೂಲಕಜಾಗೃತಿ ಮೂಡಿಸುವ ಜೊತೆಗೆ ಡಂಗೂರ ಸಾರಿ ಎಚ್ಚರಿಸ ಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಗ್ರಾಪಂವ್ಯಾಪ್ತಿಯ ನೀರಗಂಟಿಗಳು, ಸ್ವಯಂ ಸೇವಕರುಹಳ್ಳಿಗಳಲ್ಲಿ ಡಂಗೂರ ಸಾರಿ, ವೃದ್ಧರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತಮ್ಮಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಳಿಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ತಿಳಿಸುತ್ತಿದ್ದಾರೆ.
ಲಸಿಕೆ ಬಗ್ಗೆ ಯಾವುದೇ ಆತಂಕ ಪಡೆಯುವ ಅಗತ್ಯವಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಸೇರಿ ಗಣ್ಯಾತೀತರು ಲಸಿಕೆ ಹಾಕಿಸಿಕೊಂಡಿದ್ದಾರೆ. ಭಯವಿಲ್ಲದೇ ಲಸಿಕೆ ಪಡೆದು ಕೊರೊನಾ ದೂರಮಾಡಿ ಎಂದು ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
60 ವರ್ಷ ಮೇಲ್ಪಟವರು ತಪ್ಪ ದೇ ಲಸಿಕೆ ಪಡೆಯಿರಿ :
ಕುಷ್ಟಗಿ: ಗ್ರಾಮೀಣ ಪ್ರದೇಶ 60 ವರ್ಷ ಮೇಲ್ಪಟ್ಟವರನ್ನು ಕೋವಿಶಿಲ್ಡ್‌ಲಸಿಕೆ ಹಾಕಲು ಹತ್ತಿರದ ಸರ್ಕಾರಿಆಸ್ಪತ್ರೆಗೆ ಕರೆ ತರಲು ಶಾಲಾ ಬಸ್‌ಬಳಸಿಕೊಳ್ಳುವ ಚಿಂತನೆ ನಡೆಸಲಾಗಿದೆಎಂದು ತಹಶೀಲ್ದಾರ್ ಎಂ. ಸಿದ್ದೇಶ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕುಆಸ್ಪತ್ರೆ ಸೇರಿದಂತೆ ತಾಲೂಕಿನ 11ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಲಸಿಕೆ ಹಾಕಲಾಗುತ್ತಿದೆ. 60ವರ್ಷ ಮೇಲ್ಪಟ್ಟ 18 ಸಾವಿರ ಜನರಿದ್ದು,ಸದ್ಯ 1 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ನಿಗದಿತ ಗುರಿ ತಲುಪುವ ಉದ್ದೇಶದ ಹಿನ್ನೆಲೆಯಲ್ಲಿಗ್ರಾಮೀಣ ಪ್ರದೇಶದಲ್ಲಿ 60 ವರ್ಷದ ಮೇಲ್ಪಟ್ಟವರನ್ನು ಹತ್ತಿರದಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆತಂದು ಲಸಿಕೆ ನೀಡು ಅರ್ಧ ಗಂಟೆನಿಗಾ ಘಟಕದಲ್ಲಿರಿಸಲಾಗುವುದು. ನಂತರ ಅವರ ಗ್ರಾಮಕ್ಕೆಕರೆದೊಯ್ಯುವ ವ್ಯವಸ್ಥೆಮಾಡಲಾಗುವುದು ಎಂದರು.
ನೋಡಲ್ ಅಧಿಕಾರಿ ಡಾ| ಮಹೇಶ ಮಾತನಾಡಿ, ಮಹಾರಾಷ್ಟ್ರದಲ್ಲಿಕೋವಿಡ್-19 ಎರಡನೇ ಅಲೆ ತೀವ್ರ ಗೊಳ್ಳುತ್ತಿದೆ. ಇದರಿಂದ ರಕ್ಷಣೆಪಡೆಯಲು ಕೋವಿಶಿಲ್ಡ್ ಲಸಿಕೆ ನಮ್ಮಲ್ಲಿರುವ ಅಸ್ತ್ರ. 60 ವರ್ಷ ಮೇಲ್ಟಟ್ಟ ಹಾಗ ಬಿಪಿ, ಸಕ್ಕರೆ ಕಾಯಿಲೆಯಿಂದ ಬಳಲುವ 45ರಿಂದ 60 ವರ್ಷದವರಿಗೆ ಹಾಗೂ 60 ಮೇಲ್ಟಟ್ಟ ವೃದ್ಧರನ್ನು ಸುರಕ್ಷಿತವಾಗಿಡಲು ಲಸಿಕೆ ಹಾಕಲಾಗುತ್ತಿದೆ.
ಕಳೆದ ಜನವರಿ 16ರಿಂದ ಲಸಿಕೆ ಹಾಕಲಾಗುತ್ತಿದೆ. ಆರಂಭದಲ್ಲಿ ಕೋವಿಡ್ ವಾರಿಯರ್ಸ್, ಫ್ರಂಟ್ ಲೈನ್ ವರ್ಕರ್ಸ್‌ಗೆ ಮಾತ್ರ ಲಸಿಕೆ ಹಾಕಲಾಗಿದೆ. ಇದೀಗ ಮೂರನೇಹಂತದ ವ್ಯವಸ್ಥೆಯಲ್ಲಿ ಕೊಪ್ಪಳಜಿಲ್ಲೆಯಲ್ಲಿ 1,03,580 ಗುರಿ ಇದೆ.ಇದರಲ್ಲಿ ನಿಗದಿತ ಗುರಿ ಸಾಧಿ ಸಲಾಗಿಲ್ಲ.ರಾಜ್ಯಮಟ್ಟದಲ್ಲೂ ಈ ಸಾಧನೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುಜನರನ್ನು ಸಂಪರ್ಕಿಸಿ ಆದಷ್ಟು ಬೇಗನೆವೃದ್ಧರು, ಸಹ ಅಸ್ವಸ್ಥ ರೋಗಿಗಳಿಗೆ,ಎಲ್ಲರಿಗೂ ಲಸಿಕೆ ಹಾಕಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.