ದೃಷ್ಟಿ ತೆಗೆದರು…ತಮಟೆ ಬಾರಿಸಿದರು…!
Team Udayavani, Apr 3, 2020, 1:28 PM IST
ಕೊಪ್ಪಳ: ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆ ಲಾಕ್‌ಡೌನ್ ಆಗಿದೆ. ದಯವಿಟ್ಟು ಯಾರೂ ಹೊರೆಗೆಸುತ್ತಾಡಬೇಡಿ ಎಂದು ಕೊಪ್ಪಳದ ಪೊಲೀಸ್ ತುಕಡಿ, ರಸ್ತೆಯಲ್ಲಿ ಅನಗತ್ಯವಾಗಿ ಬೈಕ್‌ನಲ್ಲಿ ಸುತ್ತಾಡುವವರಿಗೆ ತೆಂಗಿನಕಾಯಿಂದ ದೃಷಿ ತೆಗೆದು, ಹಲಗಿ ಬಾರಿಸುವ ಮೂಲಕ ಜಾಗೃತಿ ಮೂಡಿಸಿದರು.
ಜನರು ರಸ್ತೆಗಿಳಿಯದಂತೆ ತಡೆಯಲು ಪೊಲೀಸರು ಪ್ರತಿದಿನ ಒಂದಿಲ್ಲೊಂದು ವಿಭಿನ್ನ ಹಾಗೂ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಗುರುವಾರ ಕೊಪ್ಪಳದಲ್ಲಿ ಡಿಎಸ್‌ಪಿ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಬೈಕ್ ಸವಾರರಿಗೆ ಕಾಯಿ ಹಿಡಿದು ಅವರ ದೃಷ್ಟಿ ತೆಗೆದಂತೆ ಮಾಡಿ, ನಾಲ್ಕು ಸುತ್ತು ತಿರುವಿ ನೆಲಕ್ಕೆ ಕಾಯಿ ಹೊಡೆದು ಅವರನ್ನು ಮುಂದೆ ಹೋಗುವಂತೆ ಕಳುಹಿಸಿಕೊಟ್ಟು ಮುಜುಗುರಕ್ಕೆ ಒಳಗಾಗುವಂತೆ ಮಾಡಿದರು.
ಈ ಹಿಂದೆ ಮಹಿಳಾ ಪೊಲೀಸ್ ಪಡೆ ಲಾಠಿ ರುಚಿ ತೋರಿಸಿತ್ತು. ಲಾಠಿ ಏಟು ಬಿಳುತ್ತಿದ್ದಂತೆ ಹಲವರು ಬೈಕ್ ನಲ್ಲಿ ರಸ್ತೆಗೆ ಇಳಿಯಲೇ ಇಲ್ಲ. ನಂತರ ಬಸ್ಕಿ ಹೊಡೆಸುವುದು, ರಸ್ತೆಯಲ್ಲಿನ ಕಸ ಗೂಡಿಸುವ, ಠಾಣೆಯನ್ನು ಸ್ವತ್ಛ ಮಾಡಿಸುವುದು ಅಲ್ಲದೇ, ಮಹಿಳಾ ಪೊಲೀಸರು ಬೈಕ್ ಸವಾರರಿಗೆ ತಿಲಕವಿಟ್ಟು ಮಂಗಳಾರತಿ ಮಾಡಿ ಮುಜುಗುರಕ್ಕೆ ಒಳಗಾಗುವಂತೆ ಮಾಡಿದ್ದರು.
ಗ್ರಾಮೀಣ ಠಾಣೆ ಸಿಪಿಐ ರವಿ ಉಕ್ಕುಂದ, ನಗರ ಠಾಣೆ ಪಿಐ ಮೌನೇಶ್ವರ ಪಾಟೀಲ್ ಸೇರಿ ಪೇದೆಗಳು ರಸ್ತೆಯಲ್ಲಿ ಸುತ್ತಾಡುವ ಬೈಕ್ ಸವಾರರನ್ನು ತಡೆದು ಕಾಯಿ ಇಳೆತೆಗೆದು ಒಡೆಯುತ್ತಿದ್ದರು. ಸಾಮಾನ್ಯವಾಗಿ ಈ ಪದ್ಧತಿ ಗ್ರಾಮೀಣ ಭಾಗದಲ್ಲಿ ಹೆಚ್ಚಿರುತ್ತದೆ. ಹಬ್ಬ, ಹರಿದಿನಗಳಲ್ಲಿ ದೃಷ್ಟಿ ತೆಗೆಯಲು ಕಾಯಿ ಒಡೆಯುತ್ತಾರೆ.
ಹಲಗಿ ಬಾರಿಸಿ ಜಾಗೃತಿ: ಅಶೋಕ ವೃತ್ತದಿಂದ ಗಡಿಯಾರ ಕಂಬದವರೆಗೂ ಹಲಗಿ ಬಾರಿಸುವ ಮೂಲಕ ಕೋವಿಡ್ 19 ನಿಯಂತ್ರಣಕ್ಕೆ ಎಲ್ಲರ ಸಹಕಾರವೂ ಅಷ್ಟೆ ಮುಖ್ಯವಾಗಿದೆ. ದಯವಿಟ್ಟು ಏ. 14ರವರೆಗೂ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಇರಿ. ರೋಗ ದೂರ ಮಾಡಿ ಎಂದು ಪೊಲೀಸರು ಸೇರಿದಂತೆ ಯುವಕರು ಹಲಿಗೆ ಬಾರಿಸುವ ಮೂಲಕ ಜಾಗೃತಿ ಮೂಡಿಸಿದರು.
79 ಜನರ ಮೇಲೆ ನಿಗಾ: ಜಿಲ್ಲಾಡಳಿತವು 79 ಜನರ ಮೇಲೆ ನಿಗಾ ಇರಿಸಿದೆ. 79 ಜನರು 14 ದಿನ ಪೂರೈಸಿದ್ದು, 52 ಜನರು 14 ದಿನ ಐಸೋಲೇಟೆಡ್ ಪೂರೈಸಿದ್ದಾರೆ. 34 ಜನರು 28 ದಿನಗಳ ಕಾಲ ಐಸೋಲೇಟೆಡ್ ಪೂರೈಸಿದ್ದಾರೆ. ಮೂರು ಜನರ ಗಂಟಲು ದ್ರವ್ಯವನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದು, ಮೂರು ನೆಗಟಿವ್ ವರದಿ ಎಂದು ಬಂದಿವೆ. ಇನ್ನೂ 27 ಜನರ ಮೇಲೆ ಮನೆಯಲ್ಲೇ ನಿಗಾ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.