ಯುವಕರೆ ದುಶ್ಚಟಗಳಿಂದ ದೂರಯಿರಿ: ಆನಂದಪ್ಪ ಸುರಪೂರ
Team Udayavani, Aug 1, 2022, 6:54 PM IST
ದೋಟಿಹಾಳ: ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಇಂದಿನ ದಿನಮಾನಗಳಲ್ಲಿ ಯುವಕರು ಅನುಭವಿಸುತ್ತಿರುವ ದುಶ್ಚಟಗಳಿಂದ ಅನೇಕ ಅನಾಹುತಗಾಳಾಗುತ್ತಿವೆ ಇವುಗಳನ್ನು ತಪ್ಪಿಸಲು ಯುವಕರು, ಪಾಲಕರು ಮತ್ತು ಪ್ರಜ್ಞಾವಂತ ನಾಗರಿಕರು ಮುಂದಾಗಬೇಕೆಂದು ಎಂದು ಶಾಲಾ ಸಲಹಾ ಸಮಿತಿಯ ಸದಸ್ಯ ಆನಂದಪ್ಪ ಸುರಪೂರ ಅವರು ಕರೆ ನೀಡಿದರು.
ಕೇಸೂರ ಗ್ರಾಮದ ಶ್ರೀ ವಿಜಯ ಮಹಾಂತೇಶ ಸಂಸ್ಥೆಯ ಘನ ಅಧ್ಯಕ್ಷರಾದ ಡಾ|| ಮಹಾಂತ ಶಿವಯೋಗಿಗಳವರ 92ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಗ್ರಾಮದ ಎಸ್.ವಿ.ಎಮ್ ಶಾಲಾ ಮಕ್ಕಳು ‘ವ್ಯಸನಮುಕ್ತ ದಿನಾಚರಣೆ ಜಾಥಾ’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಮನೆಯಲ್ಲಿರುವು ಕುಡುಕರನ್ನು ಮತ್ತು ಧೂಮಪಾನ ಮಾಡುವವರನ್ನು ಮಾಡಬಾರದೆಂದು ತಿಳಿಹೇಳಬೇಕು ಎಂದರು. ನಂತರ ಸುತ್ತಮುತ ಜನರಿಗೆ ದುಶ್ಚಟಗಳಿಂದ ಆಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಡಾ|| ಮಹಾಂತ ಸ್ವಾಮಿಗಳ ವೇಷತೊಟ್ಟ ದೋಟಿಹಾಳ-ಕೇಸೂರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರಿಗೆ ದುಶ್ಚಟಗಳಿಂದ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು. ನಿಮ್ಮ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕಿರಿ ಎಂದು ಮಕ್ಕಳು ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಶಾಲಾ ಸ್ಥಳಿಯ ಸದಸ್ಯರಾದ ರಾಜಶೇಖರ ವಕ್ರಾಣಿ, ಸಲಹಾ ಸಮಿತಿಯ ಸದಸ್ಯರು, ಊರಿನ ಮುಖಂಡರು, ಹಿರಿಯ ಶಿಕ್ಷಕರಾದ ಆರ್‌ಎಮ್ ಮಾನೆ, ಪಿಎ ಪಠಾಣ, ಎಸ್‌ಟಿ ಬೋಗಾಪೂರ, ವ್ಹಾಯ್‌ಬಿ ಕಟಾಂಬ್ಲಿ, ಪಿಸಿ ಮುದಗಲ್ಲ, ವಿಎಮ್ ಮಸ್ಕಿ, ಶಾಲಾ ಮುಖ್ಯಗುರುಗಳು, ಶಿಕ್ಷಕರು, ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.