ಅಪರಾಧ ಮಾಡುವವರೇ ಶಾಸಕರು, ಸಂಸದರು ಆಗ್ತಿದ್ದಾರೆ: ಬಸವರಾಜ ರಾಯರೆಡ್ಡಿ
Team Udayavani, Feb 20, 2020, 3:22 PM IST
ಕೊಪ್ಪಳ: ಬಿಜೆಪಿ ಇತ್ತೀಚೆಗೆ ನೀತಿ ಬಿಟ್ಟು ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಗುಡುಗಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಸಂವಿಧಾನದ ಪ್ರಕಾರ ದೇಶದ ವಿರುದ್ದ ಹೇಳಿಕೆ ಕೊಟ್ಟರೆ ದೇಶದ್ರೋಹದ ಕೇಸ್ ಹಾಕಬಹುದು. ಆದರೆ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಮಾಡಿದರೆ ದೇಶ ದ್ರೋಹದ ಕೇಸ್ ಹಾಕುತ್ತಿದ್ದಾರೆ ಎಂದರು.
ಸಿರಾಜ್ ಬಿಸರಳ್ಳಿ ಅವರು ಕವಿತೆ ವಾಚನ ಮಾಡಿದ ಕಾರಣಕ್ಕೆ ಆತನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ. ಬಿಎಸ್ ವೈಗೆ ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಕೇಸ್ ವಾಪಾಸ್ ಪಡೆಯಬೇಕು. ಪೊಲೀಸರೂ ವಿಚಾರ ಮಾಡಿ ಪ್ರಕರಣ ದಾಖಲಿಸಬೇಕು.ಇತ್ತೀಚಿನ ರಾಜಕಾರಣದಲ್ಲಿ ಅಪರಾಧ ಮಾಡುವವರೇ ಶಾಸಕರು, ಸಂಸದರು ಆಗ್ತಿದ್ದಾರೆ. ಇದು ಎಲ್ಲ ಪಕ್ಷಕ್ಕೂ ಅನ್ವಯ ಆಗುತ್ತೆ. ಆದರೆ ಬಿಜೆಪಿಯಲ್ಲಿ ಅದು ಹೆಚ್ಚಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.