ಬಸನಗೌಡ ಯತ್ನಾಳ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ: ಬಿ.ಸಿ ಪಾಟೀಲ್
Team Udayavani, Nov 1, 2020, 11:24 AM IST
ಕೊಪ್ಪಳ: ಪದೆ ಪದೆ ರಾಜ್ಯ ಸರ್ಕಾರದ ವಿರುದ್ದ ಗುಡುಗುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳುವುದೆಲ್ಲ ವೇದವಾಕ್ಯವಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಪರಿಹಾರ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಮತ್ತೆ ತಾರತಮ್ಯ ಮಾಡಿದೆ ಎನ್ನುವ ಶಾಸಕ ಯತ್ನಾಳ ಹೇಳಿಕೆಗೆ ಬಿ.ಸಿ ಪಾಟೀಲ್ ಈ ರೀತಿ ಟಾಂಗ್ ನೀಡಿದರು.
ಯತ್ನಾಳ ಹೇಳಿದಾಕ್ಷಣ ಎಲ್ಲವೂ ವೇದವಾಕ್ಯವಲ್ಲ. ನೆರೆ ಪರಿಹಾರ ವಿತರಣೆಯ ಪಟ್ಟಿಯನ್ನ ನೋಡಬೇಕು. ಎಲ್ಲಿ ಎಷ್ಟು ನೆರೆ ಹಾನಿಯಾಗಿದೆ. ಅಧಿಕಾರಿಗಳು ಎಷ್ಟು ವರದಿ ಕೊಟ್ಟಿದ್ದಾರೆ. ಸುಮ್ಮನೆ ಹೇಳೋದು ಸರಿಯಲ್ಲ ಎಂದರು.
ಶಾಸಕ ಯತ್ನಾಳ ಅವರ ಮೇಲೆ ಸಮಯ ಬಂದಾಗ ಸಂಬಂಧಿಸಿದವರು ಖಂಡಿತ ಕ್ರಮಕೈಗೊಳ್ಳುತ್ತಾರೆ ಎಂದರು.
17 ಶಾಸಕರ ಭವಿಷ್ಯ ಎಕ್ಕೂಟ್ಟೂ ಹೋಗುತ್ತೆ ಎಂದಿರುವ ಮಾಜಿ ಸಿಎಂ ಸಿದ್ದು ಅವರು, ಮೊದಲು ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದರು.
ಆರ್ ಆರ್ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರನೂ ನಾವು ಗೆಲ್ಲುತ್ತೇವೆ. ಅದ್ಭುತ ಸ್ಪಂದನೆ ಸಿಕ್ಕಿದೆ. ಇನ್ನೂ ಭತ್ತದ ಬೆಂಬಲ ಬೆಲೆ ನಿಗಧಿಯಾಗಿದೆ. ನ.1 ರಿಂದ ನ.30ರ ವರೆಗೂ ಖರೀದಿಗೆ ನೊಂದಣಿ ನಡೆಯುತ್ತದೆ. ನಂತರ ಖರೀದಿ ಆರಂಭ ಮಾಡಲಿದ್ದೇವೆ. ಮೆಕ್ಕೆಜೋಳ ಖರೀದಿ ಪಡಿತರ ವ್ಯವಸ್ಥೆಯಡಿ ಬರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೀವಿ. ಪಡಿತರ ವ್ಯವಸ್ಥೆಯಡಿ ತನ್ನಿ ಎಂದು, ಕೇಂದ್ರದಿಂದ ಎಂಎಸ್ ಪಿಯಡಿ ಖರೀದಿ ಮಾಡಿ ಎಂದರೆ ನಾವು ಖರೀದಿ ಮಾಡಲಿದ್ದೇವೆ ಎಂದರು.
ಗಂಗಾವತಿ ನಗರಸಭೆ ಸದಸ್ಯನ ಕಿಡ್ನ್ಯಾಪ್ ವಿಚಾರ ರಾಜಕೀಯದಲ್ಲಿ ಅವೆಲ್ಲವೂ ಸಹಜ, ಕಿಡ್ನ್ಯಾಪ್ ಆಗ್ತಾರೆ. ಮತ್ತೆ ಬರ್ತಾರೆ. ಗಂಗಾವತಿ ಪ್ರಕರಣದಲ್ಲಿ ಪೊಲೀಸ್ ತನಿಖೆಯಲ್ಲಿ ಅದು ಗೊತ್ತಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.