ಬೆಳೆಗೆ ಕರಡಿ ಕಾಟ; ರೈತರ ಪರದಾಟ
•ಅಲ್ಪಸ್ವಲ್ಪ ನೀರಲ್ಲೇ ಕಲ್ಲಂಗಡಿ ಬೆಳೆದ ರೈತರು•ಚಾಮಲಾಪುರ ಸುತ್ತಮುತ್ತ ಕರಡಿಗಳದ್ದೆ ಹಾವಳಿ
Team Udayavani, Jun 8, 2019, 10:34 AM IST
ಕೊಪ್ಪಳ: ಚಾಮಲಾಪುರ ಗ್ರಾಮದ ಹೊಲದಲ್ಲಿ ರೈತರು ಹಾಗೂ ಯುವಕರು ಕರಡಿ ಉಪಟಳ ತಡೆಯಲು ಬ್ಯಾಟರಿ, ಬಡಿಗೆ ಹಿಡಿದು ರಾತ್ರಿ ಗಸ್ತು ತಿರುಗುತ್ತಿರುವುದು.
ಕೊಪ್ಪಳ: ಜಿಲ್ಲೆಯಲ್ಲಿ ಮೊದಲೇ ಬರದ ಭೀಕರತೆ ಹೆಚ್ಚಾಗುತ್ತಿದೆ. ಅಲ್ಲಲ್ಲಿ ನೀರಾವರಿ ಪ್ರದೇಶದಲ್ಲಿನ ಬೆಳೆಯನ್ನಾದರೂ ಉಳಿಸಿಕೊಂಡು ಉಪ ಜೀವನ ನಡೆಸಬೇಕು ಎನ್ನುವ ರೈತರನ್ನು ವನ್ಯ ಮೃಗಗಳ ಹಾವಳಿ ಕಂಗೆಡಸಿದೆ. ಒಂದೆಡೆ ಜಿಂಕೆ. ಕೃಷ್ಣ ಮೃಗಗಳ ಕಾಟವಿದ್ದರೆ, ಇನ್ನೊಂದೆಡೆ ಕರಡಿಗಳ ಹಾವಳಿ ಮಿತಿ ಮೀರಿದೆ. ರಾತ್ರಿ ಬೆಳೆ ರಕ್ಷಣೆಗೆ ರೈತರು ಕಟ್ಟಿಗೆ ಹಿಡಿದು ಓಡಾಡುವಂತಹ ಸ್ಥಿತಿ ಎದುರಾಗಿದೆ.
ಹೌದು. ತಾಲೂಕಿನ ಇರಕಲ್ಗಡಾ ಹೋಬಳಿ ವ್ಯಾಪ್ತಿಯ ಚಾಮಲಾಪುರ, ಚಿಲಕಮುಕ್ಕಿ, ಕೊಡದಾಳ, ಗೋಸಲದೊಡ್ಡಿ, ಮೆತಗಲ್, ಹಿರೇಸೂಳಿಕೇರಿ, ಚಿಕ್ಕಸೂಳಿಕೇರಿ, ಹೊಸೂರು ಸೇರಿದಂತೆ ಇತರೆ ಭಾಗದಲ್ಲಿ ಹಲವು ವರ್ಷಗಳಿಂದ ಕರಡಿ ಉಪಟಳ ಹೆಚ್ಚಾಗಿದೆ. ಇದರಿಂದ ರೈತರು ಹಗಲು-ರಾತ್ರಿ ನಿದ್ದೆ ಮಾಡದಂತ ಸ್ಥಿತಿ ಎದುರಾಗಿದೆ.
ಮೊದಲೇ ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿದ್ದು, ಬೋರ್‌ವೆಲ್ ನೀರು ಬತ್ತಿ ಹೋಗುತ್ತಿವೆ. ಇದರಿಂದ ರೈತರಿಗೆ ದಿಕ್ಕೆ ತಿಳಿಯದಂತಾಗಿದ್ದು, ಅಲ್ಪ ನೀರಿನಲ್ಲಿಯೇ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಕಲ್ಲಂಗಡಿ ಸೇರಿದಂತೆ ಇತರೆ ಬೆಳೆ ಬೆಳೆದ ರೈತರು ಹಗಲು, ರಾತ್ರಿ ಹದ್ದಿನಂತೆ ಕಾಯಬೇಕಾಗಿದೆ. ಸಮೀಪದಲ್ಲೇ ಇರುವ ಕರೆಕಲ್ ಎನ್ನುವ ಗುಡ್ಡದಲ್ಲಿ ಕರಡಿಗಳಿವೆ. ಈ ಮೊದಲು ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಬರದ ಪರಿಸ್ಥಿತಿಯಿಂದ ಗುಡ್ಡದಲ್ಲಿ ನೀರಿನ ಅಭಾವ ಹಾಗೂ ಆಹಾರಕ್ಕಾಗಿ ಎಲ್ಲೆಡೆ ಅಲೆದಾಡುತ್ತಿದ್ದು, ರೈತರ ಜಮೀನಿನಲ್ಲಿ ಸುತ್ತಾಡಿ ಅನ್ನದಾತನಲ್ಲಿ ಆತಂಕ ಮೂಡಿಸುತ್ತಿವೆ.
ಬೆಳೆ ರಕ್ಷಣೆಗಾಗಿ ಗಸ್ತು: ಇಲ್ಲಿನ ರೈತರು ಬೆಳೆ ರಕ್ಷಣೆಗಾಗಿ ನಿತ್ಯ ರಾತ್ರಿ ಹೊಲಗಳಲ್ಲಿ ಗಸ್ತು ತಿರುಗಲೇ ಬೇಕಾಗಿದೆ. ಸ್ವಲ್ಪ ನಿರ್ಲಕ್ಷ ್ಯ ವಹಿಸಿದರೂ ಬೆಳೆ ಹಾಳಾಗುತ್ತದೆ. ಕರಡಿ ಗುಂಪು ಬೆಳೆ ತಿನ್ನಲ್ಲ. ಆದರೆ ಹೊಲದಲ್ಲಿ ಸುತ್ತಾಡಿ ಹಾಳು ಮಾಡುತ್ತವೆ. ಎಲ್ಲೆಂದರಲ್ಲಿ ಬೆಳೆ ಚೆಲ್ಲಾಪಿಲ್ಲಿ ಮಾಡುತ್ತವೆ ಎನ್ನುವ ವೇದನೆ ರೈತರಲ್ಲಿ ಕಾಡುತ್ತಿದೆ. ಕರಡಿಗಳ ಉಪಟಳಕ್ಕೆ ಸಾಕು ಸಾಕಾಗಿ ಹೋಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚೆಗೆ ಜಾನುವಾರು ಹಾಗೂ ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ ಎನ್ನುತ್ತಿದೆ ಇಲ್ಲಿನ ರೈತ ಸಮೂಹ.
ಕೈಯಲ್ಲಿ ಬಡಿಗೆ, ಬ್ಯಾಟರಿ: ಹೊಲಗಳಿಗೆ ರಾತ್ರಿ ಹೊತ್ತು ಒಬ್ಬರೆ ಹೋಗುವಂತಿಲ್ಲ. ಕೈಯಲ್ಲಿ ಬಡಿಗೆ, ಬ್ಯಾಟರಿ ಹಿಡಿದು ನಾಲ್ಕೈದು ಜನರು ಸೇರಿ ಗುಂಪು ಗುಂಪಾಗಿ ಹೋಗಬೇಕು. ಜೊತೆಗೆ ಬೆಂಕಿ ಪೊಟ್ಟಣವೂ ಇರಬೇಕು. ನಮ್ಮ ಗುಂಪು ನೋಡಿದರೆ ಕರಡಿ ಹಿಂಡು ದೂರ ಓಡಿ ಹೋಗುತ್ತವೆ. ಒಬ್ಬರೆ ಇದ್ದರೆ ನಮ್ಮ ಮೇಲೆಯೇ ದಾಳಿ ಮಾಡುವುದು ಗ್ಯಾರಂಟಿ. ಹಲಗು-ರಾತ್ರಿ ಹೊಲದಲ್ಲಿ ಕಾಲ ಕಳೆಯಬೇಕಿದೆ ಎನ್ನುತ್ತಿದ್ದಾರೆ ರೈತರು.
ಒಂದೆಡೆ ಜಿಂಕೆ, ಇನ್ನೊಂದಡೆ ಕರಡಿ: ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯಲ್ಲಿ ಪ್ರತಿ ವರ್ಷವೂ ಜಿಂಕೆ ಹಾವಳಿ ಹೆಚ್ಚಾಗಿದ್ದರೆ, ಇರಕಲ್ಗಡಾ ಹೋಬಳಿ ಭಾಗದಲ್ಲಿ ಕರಡಿ ಕಾಟ ವೀಪರಿತವಾಗಿದೆ. ಇತ್ತೀಚೆಗೆ ಕರಡಿಗಳು ಜಾನುವಾರು ಸೇರಿದಂತೆ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿವೆ. ಈ ಹಿಂದೆ ಹಲವು ಜನರು ಕರಡಿ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆಗಳೂ ಇವೆ. ಇನ್ನೂ ಗಂಗಾವತಿ ಭಾಗದಲ್ಲಿ ಚಿರತೆಗಳ ಕಾಟವೂ ಅಧಿಕವಿದೆ. ಬೆಳೆ ರಕ್ಷಣೆಗಾಗಿ ಹೊಲದಲ್ಲಿ ಹೋರಾಟ ಮಾಡುವ ಅನ್ನದಾತನಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಕರಡಿಗಳ ಸೆರೆ ಹಿಡಿದು ರೈತರು, ಜಾನುವಾರು ಹಾಗೂ ರಕ್ಷಣೆ ಮಾಡಬೇಕಿದೆ.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.