ಭಿಕ್ಷುಕರ ಕಾಟಕ್ಕೆ ರೋಸಿ ಹೋದ ಪ್ರವಾಸಿಗರು
ಅನ್ಯ ಊರುಗಳಿಂದ ಭಿಕ್ಷಾಟನೆಗಾಗಿ ಮಕ್ಕಳನ್ನು ತರುವ ಮಹಿಳೆಯರು ;ಪ್ರವಾಸಿಗರಿಗೆ ಮುಜುಗರವಾಗುವ ವರ್ತನೆ
Team Udayavani, Jul 25, 2022, 5:11 PM IST
ಗಂಗಾವತಿ: ತಾಲೂಕಿನ ಪ್ರಸಿದ್ಧ ಪ್ರವಾಸಿ ಯಾತ್ರಾ ಸ್ಥಳಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ಭಿಕ್ಷಾಟನೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಭಿಕ್ಷಾಟನೆಯನ್ನು ತಡೆಯುವಲ್ಲಿ ಮುಂದಾಗುತ್ತಿಲ್ಲ.
ಕಿಷ್ಕಿಂದಾ ಅಂಜನಾದ್ರಿ, ಪಂಪಾ ಸರೋವರ, ಆದಿಶಕ್ತಿ ದೇಗುಲಗಳಿಗೆ ಬರುವ ಪ್ರವಾಸಿಗರನ್ನು ಅಡ್ಡಗಟ್ಟಿ ಪ್ರವಾಸಿಗರಿಗೆ ಮುಜುಗರವಾಗುವ ರೀತಿಯಲ್ಲಿ ಹಣ ಕೊಡುವಂತೆ ಭಿಕ್ಷುಕರು ಪೀಡಿಸುತ್ತಿದ್ದರೂ ಅಲ್ಲಿರುವ ದೇಗುಲಗಳ ಸಿಬ್ಬಂದಿ ಕ್ರಮಕೈಗೊಳ್ಳುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಭಿಕ್ಷಾಟನೆ ತಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭಿಕ್ಷಾಟನೆ ನಿಷೇಧವಿದ್ದರೂ ಶನಿವಾರ, ರವಿವಾರ ಮತ್ತು ಮಂಗಳವಾರ ಹುಣ್ಣಿಮೆ, ಅಮವಾಸ್ಯೆಯಂದು ನೂರಾರು ಭಿಕ್ಷುಕರು ಜಿಲ್ಲೆ ಮತ್ತು ಹೊಸಪೇಟೆ, ಕಂಪ್ಲಿ ಭಾಗದಿಂದ ಕಿಷ್ಕಿಂದಾ, ಅಂಜನಾದ್ರಿ ಬೆಟ್ಟ ಪ್ರದೇಶ ಹಾಗೂ ಸುತ್ತಲಿನ ಸ್ಥಳಗಳಿಗೆ ಬೆಳಗ್ಗೆ ಆಗಮಿಸಿ ಇಡೀ ದಿನ ಭಿಕ್ಷಾಟನೆ ನಡೆಸಿ ಸಂಜೆಗೆ 500ರಿಂದ 1000 ರೂ. ವರೆಗೆ ಹಣ ಸಂಗ್ರಹಿಸಿಕೊಂಡು ಹೋಗುತ್ತಿದ್ದು, ಭಿಕ್ಷಾಟನೆ ವೇಳೆ ಮಹಿಳೆಯರು ಮಕ್ಕಳನ್ನು ಎತ್ತಿಕೊಂಡು ಹಣ ನೀಡುವಂತೆ ಕೇಳುತ್ತಾರೆ. ಹಣ ಕೊಡದಿದ್ದರೆ ಕೊಡುವ ತನಕವೂ ಬಿಡದೇ ಪ್ರವಾಸಿಗರ ಹಿಂದೆ ದುಂಬಾಲು ಬೀಳುತ್ತಾರೆ.
ಪ್ರವಾಸಿ ತಾಣಗಳಲ್ಲಿ ಇತ್ತೀಚೆಗೆ ಭಿಕ್ಷಾಟನೆ ದಂಧೆ ಹೆಚ್ಚಾಗಿದ್ದು, ಭಿಕ್ಷೆ ಬೇಡುವವರನ್ನು ಸಂರಕ್ಷಣೆ ಮಾಡುವ ಕೇಂದ್ರ ಬಳ್ಳಾರಿಯಲ್ಲಿದ್ದು, ಇಂತಹ ಕೇಂದ್ರ ಕೊಪ್ಪಳ ಅಥವಾ ಗಂಗಾವತಿಯಲ್ಲೂ ರಾಜ್ಯ ಸರಕಾರ ಆರಂಭ ಮಾಡುವ ಮೂಲಕ ಭಿಕ್ಷೆ ಬೇಡುವವರನ್ನು ಸಂರಕ್ಷಣೆ ಮಾಡಿ ಆಶ್ರಯ ಕೇಂದ್ರದಲ್ಲಿರಿಸಿ ಅವರಿಗೆ ಊಟ, ವಸತಿ ಹಾಗೂ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಬೇಕಿದೆ.
ಸರಕಾರ ಭಿಕ್ಷಾಟನೆಯನ್ನು ನಿಷೇಧ ಮಾಡಿದ್ದರೂ ಕಿಷ್ಕಿಂದಾ ಅಂಜನಾದ್ರಿಯ ಸುತ್ತಲಿನ ಪ್ರವಾಸಿ ತಾಣಗಳಲ್ಲಿ ವ್ಯಾಪಕವಾದ ಭಿಕ್ಷಾಟನೆ ನಡೆಯುತ್ತಿದೆ. ಚಿಕ್ಕಮಕ್ಕಳನ್ನು ಕರೆದುಕೊಂಡು ಮಹಿಳೆಯರು ಇಲ್ಲಿಗೆ ಆಗಮಿಸಿ ಪ್ರವಾಸಿಗರ ಹತ್ತಿರ ಭಿಕ್ಷೆಗಾಗಿ ಪೀಡಿಸುತ್ತಾರೆ. ಇದರಿಂದ ಪ್ರವಾಸಿಗರಿಗೆ ಮುಜುಗರವಾಗುತ್ತಿದೆ. ಈ ಬಗ್ಗೆ ದೇವಾಲಯಗಳ ಆಡಳಿತಾಧಿಕಾರಿಗಳು ಕೂಡಲೇ ಕ್ರಮ ವಹಿಸುವ ಮೂಲಕ ಭಿಕ್ಷಾಟನೆ ತಪ್ಪಿಸಬೇಕಿದೆ. –ದೇವೆಂದ್ರ ಚಿಕ್ಕರಾಂಪುರ
ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಭಿಕ್ಷಾಟನೆ ಕುರಿತು ದೂರುಗಳಿದ್ದು, ಇಲ್ಲಿಗೆ ದೇಶ, ವಿದೇಶದ ಪ್ರವಾಸಿಗರು ಆಗಮಿಸುವ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುವವರು ಹಣ ನೀಡುವಂತೆ ಪೀಡಿಸುವ ಮೂಲಕ ಮುಜುಗರ ಉಂಟು ಮಾಡುವ ಸಂಭವವಿದೆ. ದೇವಾಲಯಗಳ ಸಿಬ್ಬಂದಿಗೆ ಭಿಕ್ಷಾಟನೆ ತಡೆಯುವಂತೆ ಸೂಚನೆ ನೀಡಲಾಗಿದೆ. ಭಿಕ್ಷುಕರು ಮತ್ತು ನಿರ್ಗತಿಕರ ಕೇಂದ್ರಕ್ಕೂ ಮಾಹಿತಿ ನೀಡಿ ಇಲ್ಲಿರುವ ಭಿಕ್ಷುಕರು, ನಿರ್ಗತಿಕರನ್ನು ಸಂರಕ್ಷಣೆ ಮಾಡುವಂತೆ ಕೋರಲಾಗುತ್ತದೆ. –ಬಸವಣ್ಣೆಪ್ಪ ಕಲಶೆಟ್ಟಿ, ಸಹಾಯಕ ಆಯುಕ್ತರು, ಕೊಪ್ಪಳ
-ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.