ಪಾಲಿಹೌಸ್‌ನಲ್ಲೂ ಬೆಳೆದ್ರು ವೀಳ್ಯದೆಲೆ

ಅನ್ನದಾತರ ಆದಾಯದ ಮೂರು ತಿಂಗಳ ಬೆಳೆ ; ತೆರೆದ ಕೃಷಿಗಿಂತ ಮೂರು ಪಟ್ಟು ಆದಾಯ

Team Udayavani, Oct 18, 2022, 4:49 PM IST

22

ಕುಷ್ಟಗಿ: ತಾಲೂಕಿನ ನಿಡಶೇಸಿಯ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ(ಕೆಎಸ್‌ ಎಚ್‌ಡಿಎ) ಇಸ್ರೇಲ್‌ ಮಾದರಿ ತೋಟಗಾರಿಕೆ ಕ್ಷೇತ್ರವು ಹಲವು ಯಶಸ್ವಿ ಪ್ರಯೋಗಗಳಿಗೆ ಸಾಕ್ಷಿಯಾಗಿದೆ.

ಅನ್ನದಾತರ ದೈನಂದಿನ ಆದಾಯದ ಬೆಳೆಯಾದ, ಆಯಾ ಪ್ರದೇಶಕ್ಕೆ ಸೀಮಿತವೆನಿಸಿದ ವೀಳ್ಯದೆಲೆ(ಎಲೆಬಳ್ಳಿ)ಯನ್ನು ಪಾಲಿಹೌಸ್‌ (ನೆರಳು ಪರದೆ)ನಲ್ಲಿ ಬೆಳೆದು ಸೈ ಎನಿಸಿದೆ.

ರೇಷ್ಮೆಯಂತೆ ನವಿರಾದ ಎಲೆ: ಸಾಮಾನ್ಯವಾಗಿ ಎಲೆಬಳ್ಳಿ ಬಯಲು ಪ್ರದೇಶದಲ್ಲಿ ಅಂತರ್ಜಲ ನೀರಾವರಿ ಆಧಾರಿತವಾಗಿ ಬೆಳೆಯುವುದು. ಈ ಭಾಗದ ಯರಗೇರಾ, ಮುದುಟಗಿ ಮೊದಲಾದ ಗ್ರಾಮಗಳಲ್ಲಿ ಇದನ್ನು ಪಾರಂಪರಿಕವಾಗಿ ಬೆಳೆಯಲಾಗುತ್ತಿದೆ. ನಿಡಶೇಸಿ ತೋಟಗಾರಿಕಾ ಕ್ಷೇತ್ರದ 10 ಗುಂಟೆಯ ಪಾಲಿಹೌಸ್‌ನಲ್ಲಿ 1,000 ಬಳ್ಳಿ ಬೆಳೆಸಿರುವುದು ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲವೆನ್ನಬಹುದು. ಇದು 3 ತಿಂಗಳ ಬೆಳೆಯಾಗಿದ್ದು, ಎಲೆಗಳು ಅಗಲವಾಗಿ ರೇಷ್ಮೆಯಂತೆ ನವಿರಾಗಿವೆ.

ಮೂರು ಪಟ್ಟು ಆದಾಯ: ತೆರೆದ ಕೃಷಿಯಲ್ಲಿ 1 ಎಕರೆಯಲ್ಲಿ ವೀಳ್ಯದೆಲೆಯ ಉತ್ಪನ್ನ 10 ಗುಂಟೆ ಪಾಲಿಹೌಸ್‌ಗೆ ಸಮವೆನಿಸಿದೆ. ತೆರೆದ ಕೃಷಿಯಲ್ಲಿ ವೀಳ್ಯದೆಲೆಗೆ ನೀಡುವ ಆಹಾರದಲ್ಲಿ ಬಳ್ಳಿಯ ಆಧಾರಕ್ಕಾಗಿ ಬೆಳೆಸುವ ನುಗ್ಗೆ, ಬೊರಲಾ, ಚಾಗಟಿಮರಗಳಿಗೆ ಶೇ.50 ಉಪಯೋಗವಾದರೆ ಉಳಿದ ಶೇ.50 ವೀಳ್ಯದೆಲೆ ಬಳ್ಳಿಗೆ ಉಪಯೋಗವಾಗುತ್ತದೆ. ಪ್ರತಿ ಬಳ್ಳಿಗೆ 500 ವೀಳ್ಯದೆಲೆ ಉತ್ಪನ್ನ ತೆರೆದ ಕೃಷಿಯಲ್ಲಿ ಸಾಧ್ಯವಿದೆ. ಅದೇ ಸಂರಕ್ಷಿತ ಪಾಲಿಹೌಸ್‌ನಲ್ಲಿ ಮೂರುಪಟ್ಟು ಸಾಧ್ಯವಿದ್ದು, ಚೆನ್ನಾಗಿ ನಿರ್ವಹಣೆ ಮಾಡಿದರೆ 2,500 ಎಲೆಗಳವರೆಗೆ ನಿರೀಕ್ಷಿಸಬಹುದು. ಪಾಲಿಹೌಸ್‌ನಲ್ಲಿ ಬೆಳೆದ ವೀಳ್ಯದೆಲೆಗೂ, ತೆರೆದ ಕೃಷಿಯಲ್ಲಿ ಬೆಳೆದ ಎಲೆಗೂ ವ್ಯತ್ಯಾಸ ಗುರುತಿಸಬಹುದಾಗಿದ್ದು, ಪ್ರತಿ ಪೆಂಡಿ 3,500 ರೂ.ಗೆ ಮಾರಾಟವಾಗಿದೆ. ಹನುಮಸಾಗರ, ಕುಷ್ಟಗಿ, ಕೊಪ್ಪಳ, ಗಜೇಂದ್ರಗಡ ಸ್ಥಳೀಯ ಮಾರುಕಟ್ಟೆಯಲ್ಲಿ 6 ಸಾವಿರ ಎಲೆ(225 ಪೆಂಡಿ) ಗೆ 1500 ರೂ. ಬೆಲೆ ಸಿಗುತ್ತದೆ. ಶಿವಮೊಗ್ಗ, ಬೆಂಗಳೂರು, ಬೆಳಗಾವಿ, ಮುಂಬೈನಲ್ಲಿ 2,500 ರೂ. ಬೆಲೆ ಸಿಗುವುದು ಖಾತ್ರಿಯಾಗಿದೆ. ಹೊರಗಡೆ ಮಾರುಕಟ್ಟೆಯಾದರೆ 2,500 ರೂ. ಆದಾಯವಿದ್ದರೆ ಸ್ಥಳೀಯ ಮಾರುಕಟ್ಟೆಯಲ್ಲಿ 1500 ರೂ. ಇದೆ. ಹೊರಗಡೆ ಮಾರು ಕಟ್ಟೆಯಾದರೆ 5.50 ಲಕ್ಷ ರೂ. ಆಗುತ್ತದೆ. ಇದರಲ್ಲಿ 1.50 ಲಕ್ಷ ರೂ. ಖರ್ಚು ತೆಗೆದರೂ 4 ಲಕ್ಷ ರೂ. ಆದಾಯ ಸಾಧ್ಯವಿದೆ. ತೆರೆದ ಕೃಷಿಯಲ್ಲಿ 3 ಲಕ್ಷ ರೂ.ವರೆಗೆ ಆದಾಯ ನಿರೀಕ್ಷಿಸಬಹುದಾಗಿದೆ.

ವಾರ್ಷಿಕ 18 ಲಕ್ಷ ಎಲೆ: ಪಾಲಿಹೌಸ್‌ ನಲ್ಲಿ ಬಿದಿರು ಕೋಲಿಗೆ ವೀಳ್ಯದೆಲೆಯ ಬಳ್ಳಿ ಹಬ್ಬಿಸಲಾಗಿದ್ದು, ಆಧಾರಕ್ಕೆ ಗಿಡ ಬೆಳೆಸಿಲ್ಲ. ಪ್ರತಿ ಬಳ್ಳಿಗೆ 1500 ವೀಳ್ಯದೆಲೆ ನಿರೀಕ್ಷಿಸಬಹುದಾಗಿದೆ. ಒಮ್ಮೆ ನಾಟಿ ಮಾಡಿದರೆ ಕನಿಷ್ಟ 40 ವರ್ಷ ಅದಕ್ಕಿಂತ ಹೆಚ್ಚು ಇಳುವರಿ ಬರುತ್ತದೆ. 10 ಗುಂಟೆಯಲ್ಲಿ 1 ಸಾವಿರ ಬಳ್ಳಿಗಳಿಂದ ವರ್ಷಕ್ಕೆ 18 ಲಕ್ಷ ಎಲೆ ನಿರೀಕ್ಷಿಸಬಹುದಾಗಿದೆ. ಪೆಂಡಿ (ಬಂಡಲ್‌) ಲೆಕ್ಕದಲ್ಲಿ 3ಸಾವಿರ ಪೆಂಡಿಯಂತಾದರೆ ಹೆಚ್ಚು ಕಡಿಮೆ 600 ಪೆಂಡಿ ಬರುತ್ತದೆ 1 ಪೆಂಡಿಗೆ 850 ರೂ.ದಿಂದ 1500 ರೂ. ದರ ಇದೆ. ಚಳಗಾಲ, ಬೇಸಿಗೆಯಲ್ಲಿ 1500 ರೂ. ಮಳೆಗಾಲದಲ್ಲಿ 850 ಬೆಲೆ ಇರುತ್ತದೆ. ಪಾಲಿಹೌಸ್‌ ನಲ್ಲಿ ಬೆಳೆದ ವೀಳ್ಯದೆಲೆ ಗುಣಮಟ್ಟ, ಶೈನಿಂಗ್‌, ಎಲೆಗಳ ಗಾತ್ರ ತೆರೆದ ಕೃಷಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ನಿಡಶೇಸಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ವಿನಾಯಕರಡ್ಡಿ ಬಿ. ಮಾಲಿಪಾಟೀಲ.

ಸಹಾಯಕ ಅಧಿಕಾರಿಗಳಾದ ಆಂಜನೇಯ ದಾಸರ್‌, ಶಿವಪ್ಪ ಶಾಂತಗೇರಿ, ಪ್ರಗತಿಪರ ಎಲೆಬಳ್ಳಿ ಕೃಷಿಕ ನಿಂಗಪ್ಪ ಕಾರಿ, ಪ್ರಗತಿಪರ ಬೆಳೆಗಾರ ರಮೇಶ ಕೊನೆಸಾಗರ ಹಾಜರಿದ್ದರು.

ಸಂಪೂರ್ಣ ಸಾವಯವ ಕೃಷಿ ಆಧಾರಿತ ಬೆಳೆಯಾಗಿದ್ದು, ಯಾವುದೇ ರಾಸಾಯನಿಕ ಸೋಕಿಸುವಂತಿಲ್ಲ. ಈ ಪಾಲಿಹೌಸ್‌ನ ಬೆಳೆಗೆ ಸೆಗಣಿ ಗೊಬ್ಬರ ಹಾಗೂ ಪ್ರಾಯೋಗಿಕವಾಗಿ ಎರೆ ಜಲ ಬಳಸಿರುವುದು ಎಲೆಗಳು ಉತ್ಕೃಷ್ಟವಾಗಿವೆ. ಮುಂದಿನ ಹಂತದಲ್ಲಿ ಕಲ್ಕತ್ತಾ, ಕರಿ ಎಲೆ ಬೆಳೆಸಲಾಗುವುದು. ಪಾಲಿಹೌಸ್‌ ಗೆ ಸರ್ಕಾರದಿಂದ ಶೇ. 50 ಸಹಾಯಧನ ಲಭ್ಯವಿದೆ. –ವಿನಾಯಕರಡ್ಡಿ ಬಿ. ಮಾಲಿಪಾಟೀಲ, ಸಹಾಯಕ ನಿರ್ದೇಶಕರು, ಇಸ್ರೇಲ್‌ ಮಾದರಿ ತೋಟಗಾರಿಕೆ ಕ್ಷೇತ್ರ ನಿಡಶೇಸಿ.

„ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್‌ ವೆಲ್

ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್‌ ವೆಲ್

ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ

ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.