ಭಗೀರಥರ ತಪಸ್ಸಿನಿಂದ ಜೀವರಾಶಿಗೆ ನೀರು
ಭಗೀರಥರ ವ್ಯಕ್ತಿತ್ವ ಹಿಮಾಲಯದಷ್ಟು ಎತ್ತರ
Team Udayavani, May 9, 2022, 4:17 PM IST
ಕೊಪ್ಪಳ: ಭಗೀರಥರ ತಪಸ್ಸಿನ ಫಲವಾಗಿ ಭೂಲೋಕಕ್ಕೆ ನೀರು ದೊರೆತಿದೆ ಎಂದು ಗಿಣಿಗೇರಿಯ ಉಪನ್ಯಾಸಕ ಮಲ್ಲಪ್ಪ ತಿರುಪತೆಪ್ಪ ಹೊಸೂರು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರವಿವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸೋಲಿನಿಂದ ಧೃತಿಗೇಡದೆ, ಸತತ ಪ್ರಯತ್ನ ಮಾಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥರು. ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು. ಭಗೀರಥರ ವ್ಯಕ್ತಿತ್ವ ಹಿಮಾಲಯ ಪರ್ವತದಷ್ಟು ಎತ್ತರ. ಸಾಕ್ಷಾತ್ ದೈವಗಂಗೆಯನ್ನೇ ಶಿವನ ಜಟದಿಂದ ಭೂಮಿಗೆ ತರುವ ಮೂಲಕ ಭಗೀರಥ ಮಹರ್ಷಿಗಳು ಈ ಜಗತ್ತಿನಲ್ಲಿ ಮನುಷ್ಯನಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ ಎಂಬುದನ್ನು ತೋರಿಸಿದ್ದಾರೆ.
ಭಗೀರಥರು ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಿಸಿಕೊಂಡಿದ್ದು ಜಗತ್ತಿನಲ್ಲಿಯೇ ಮನುಷ್ಯನ ಬಹುದೊಡ್ಡ ಪ್ರಯತ್ನವಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಉಪ್ಪಾರರು ಎಂದು ಕರೆಯಲ್ಪಡುವ ಈ ಸಮುದಾಯ ಪ್ರಾಚೀನ ಕಸುಬು ಉಪ್ಪು ತಯಾರಿಸುವುದಾಗಿತ್ತು. ಆದ್ದರಿಂದ ಉಪ್ಪಾರರು ಎಂದು ಕರೆಯಲಾಗುತ್ತದೆ. ಉಪ್ಪಾರ ಸಮಾಜ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದ್ದು, ಸಮಾಜದ ಜನತೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಎಂದರು.
ಕೊಪ್ಪಳ ಎಸಿ ಬಸವಣ್ಣಪ್ಪ ಕಲಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ವಿಠ್ಠಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಗಣ್ಯರಾದ ಸಿ.ವಿ. ಚಂದ್ರಶೇಖರ್, ಸಮಾಜದ ಮುಖಂಡರಾದ ವೆಂಕಟೇಶ ಹೊಸಳ್ಳಿ, ಕನಕಪ್ಪ, ಬಸವರಾಜ ಎಂ., ನಾಗರಾಜ್ ಚಳ್ಳಾರಿ, ಹೇಮಣ್ಣ ದೇವರಮನಿ, ಮಂಜುನಾಥ ಪಾಟೀಲ್, ಮಂಜುನಾಥ ಬಗನಾಳ, ಕೊಟ್ರೇಶ ಮರಬನಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪೂರ್ವದಲ್ಲಿ ಭಗೀರಥರ ಭಾವಚಿತ್ರದ ಮೆರವಣಿಗೆಗೆ ನಗರದ ಸಿರಸಪ್ಪಯ್ಯಮಠ ಆವರಣದಿಂದ ಪ್ರಾರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಿತು. ಮೆರವಣಿಗೆಯಲ್ಲಿ ಹಲವು ಗಣ್ಯರು, ಸಮಾಜದ ಮುಖಂಡರು, ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.