ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಬೈಕ್ ಬಾಡಿಗೆ ನಿರ್ಬಂಧ
Team Udayavani, Oct 16, 2019, 6:26 PM IST
ಗಂಗಾವತಿ: ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಆನೆಗೊಂದಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಬೈಕ್ ಬಾಡಿಗೆ ಡುವುದಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ.
ಇಲ್ಲಿಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರು ಹಲವು ದಿನಗಳ ಕಾಲ ಇಲ್ಲಿ ರೆಸಾರ್ಟ್ ಹೊಟೇಲುಗಳಲ್ಲಿ ಉಳಿದುಕೊಂಡು ಸುತ್ತಲಿರುವ ಪಂಪಾಸರೋವರ, ಹನುಮನಹಳ್ಳಿ, ಋಷಿಮುಖ ಮುಖಪರ್ವತ, ಶಬರಿ ಗುಹೆ, ವಾಲೀಕಿಲ್ಲಾ ಆದಿಶಕ್ತಿ ಸಾಣಾಪೂರ ಕೆರೆ (ಲೇಖ್) ಸೇರಿ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಬೆಳ್ಳಿಗ್ಗೆ ಮತ್ತು ಸಂಜೆ ಸೂರ್ಯೋದಯ ಮತ್ತು ಸೂರ್ಯಾಸ್ತ ದೃಶ್ಯ ವೀಕ್ಷಣೆ ಮಾಡುತ್ತಾರೆ.
ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಆನೆಗೊಂದಿ ಸೇರಿ ಇಲ್ಲಿಯ ಗ್ರಾಮಗಳು ಏಳು ಗುಡ್ಡದ ಪ್ರದೇಶದಲ್ಲಿ ಬರುವುದರಿಂದ ಪ್ರವಾಸಿಗರು ಸ್ಥಳೀಯರ ಬೈಕ್ ಬಾಡಿಗೆ ಪಡೆದು ಇಡೀ ಪ್ರದೇಶವನ್ನು ಸುತ್ತುತ್ತಾರೆ. ಇದೀಗ ಪೊಲಿಸ್ ಇಲಾಖೆ ಪ್ರವಾಸಿಗರಿಗೆ ಬಾಡಿಗೆ ಬೈಕ್ ಕೊಡದಂತೆ ತಾಕೀತು ಮಾಡಿದ್ದು ಬೈಕ್ ಬಾಡಿಗೆ ನೀಡಿ ಉದ್ಯೋಗ ಮಾಡಿಕೊಂಡಿದ್ದವರಿಗೆ ತೊಂದರೆಯಾಗಿದೆ.
ಹಳದಿ ಬಣ್ಣ ನಾಮಫಲಕವಿದ್ದರೆ ಓಕೆ:
ರಾಜ್ಯದಲ್ಲಿ ಕೆಲ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಹಳದಿ ಬಣ್ಣದ ನಾಮಫಲಕ ಹೊಂದಿದ ಬೈಕ್ ಗಳನ್ನು ಪ್ರವಾಸಿಗರಿಗೆ ಬಾಡಿಗೆ ನೀಡಲಾಗುತ್ತಿದ್ದು ಇದೇ ಮಾದರಿಯಲ್ಲಿ ಆನೆಗೊಂದಿ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಬಾಡಿಗೆ ಬೈಕ್ ನೀಡುವವರು ಸಾರಿಗೆ ಇಲಾಖೆಯ ನಿಯಮದಂತೆ ಹಳದಿ ನಾಮಫಲಕ ನಿಯಮ ಪಾಲನೆ ಮಾಡಬೇಕಿದೆ.
ಶೀಘ್ರ ಸಭೆ:
ಪ್ರವಾಸಿತಾಣವಾಗಿರುವ ಆನೆಗೊಂದಿ ವಿರೂಪಾಪೂರಗಡ್ಡಿ ಸಾಣಾಪೂರ ಪ್ರದೇಶದಲ್ಲಿ ಸಾರಿಗೆ ಇಲಾಖೆ ವತಿಯಿಂದ ಬೈಕ್ ಬಾಡಿಗೆ ಕೊಡುವವರ ಸಭೆ ನಡೆಸಿ ಏಕಗವಾಕ್ಷ ಮೂಲಕ ಬೈಕ್ ಗಳಿಗೆ ಹಳದಿ ನಾಮಫಲಕ ನಿಯಮದಂತೆ ಪರವಾನಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಸಾರಿಗೆ ಪ್ರಾದೇಶಿಕ ಅಧಿಕಾರಿ ಎನ್.ಶೇಖರ್ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.