ಪುಸ್ತಕಗಳು ವ್ಯಕ್ತಿಯ ಬದುಕಿನ ದಾರಿದೀಪ

ಜಿ.ಎಸ್‌. ಗೋನಾಳರ ಎರಡು ಪುಸ್ತಕ ಬಿಡುಗಡೆ

Team Udayavani, Apr 25, 2022, 11:52 AM IST

10

ಕೊಪ್ಪಳ: ಪುಸ್ತಕಗಳು ಮನುಷ್ಯನ ಬದುಕಿನ ದಾರಿದೀಪಗಳಾಗಿವೆ. ಸಮಾಜದ ಅಂಕುಡೊಂಕು ತಿದ್ದುವ, ಸಮಾಜ ಸರಿದಾರಿಗೆ ನಡೆಸುವ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗಿದೆ ಎಂದು ಸರ್ಕಾರಿ ಅಭಿಯೋಜಕ ಬಿ.ಎಸ್‌.ಪಾಟೀಲ್‌ ಅವರು ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ವಿಶಾಲ ಪ್ರಕಾಶನ ಮಾದಿನೂರು, ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಸಂಸ್ಥೆ, ಸಿರಿಗನ್ನಡ ಸಾಹಿತ್ಯ ಸಾಂಸ್ಕೃತಿಕ ಕಲೆಗಳ ಅಭಿವೃದ್ಧಿ ಟ್ರಸ್ಟ್‌ ಸಹಯೋಗದಲ್ಲಿ ನಡೆದ ಜಿ.ಎಸ್‌. ಗೋನಾಳರ ಜೀವನದ ಸಂಗ್ರಾಮದಲ್ಲಿ ಯಶಸ್ಸಿನ ಗುಟ್ಟುಗಳು ಹಾಗೂ ಸಮೃದ್ಧಿ ಜೀವನದ ದಾರಿ ದೀಪಗಳ ಪುಸ್ತಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರವಣಿಗೆಗೆ ಬದಲಾವಣೆ ಶಕ್ತಿ ಎನ್ನುವುದು ನಂಬಲೇಬೇಕಾದ ಸತ್ಯವಾಗಿದೆ. ನಮ್ಮ ಆಲೋಚನೆಗಳು ಸಕರಾತ್ಮಕವಾಗಿರಲಿ, ಯಾವುದೇ ಕಾರಣಕ್ಕೂ ಸಮಾಜ ಒಡೆಯುವ ಕಾರ್ಯ ನಡೆಯದಿರಲಿ. ಇಂತಹ ವಿನಾಶಕಾರಿ ಶಕ್ತಿಯ ವಿರುದ್ಧ ಜಾಗೃತಗೊಳ್ಳುವ ಸಮನ್ವಯತೆಗೆ ಕ್ರಿಯಾಶೀಲ ಸಾಹಿತ್ಯದ ಕೊಡುಗೆ ಅಪಾರವಾದದ್ದು, ಗೋನಾಳರ ಬದುಕು ಮತ್ತು ಬರಹಗಳು ವೈಚಾರಿಕತೆ, ಚಿಂತನ ಮಂಥನಗಳು ನಾಡಿನ ಯುವಜನಾಂಗಕ್ಕೆ ಸ್ಫೂರ್ತಿಯಾಗಲಿವೆ ಎಂದರು.

ಸಾಹಿತಿ ಡಾ| ರಾಜೇಂದ್ರ ಗಡಾದ ಮಾತನಾಡಿ, ಗೋನಾಳ ಅವರ ಬದುಕು ಮತ್ತು ಬರಹ ಎರಡು ಆದರ್ಶಪ್ರಾಯವಾದವುಗಳು. ಓದುವ ಸಂಸ್ಕೃತಿ ಮಾಯವಾಗಿರುವ ಈ ಕಾಲದಲ್ಲಿ ಉತ್ತಮ ಪುಸ್ತಕಗಳು ದೊರೆತಾಗ ಓದುವ ಮೂಲಕ ನೈತಿಕತೆ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ದೈನಂದಿನ ಬದುಕು ಅತ್ಯಂತ ಸಂಕೀರ್ಣವಾಗುತ್ತಿರುವ ಹಾಗೂ ಬದುಕನ್ನು ಧಿಕ್ಕರಿಸುತ್ತಿರುವ ಸಂದರ್ಭದಲ್ಲಿ ಪರಿಪೂರ್ಣ ಬದಕನ್ನು ಹಸನುಗೊಳಿಸುವುದು ಹೇಗೆ ಎಂಬುದನ್ನು ಜಿ.ಎಸ್‌. ಗೋನಾಳ ಹೇಳಲೇತ್ನಿಸಿದ್ದಾರೆ.

ಲೇಖಕರ ವ್ಯಾಪಕ ಅಧ್ಯಯನ, ಅನುಭವಗಳ ಫಲರೂಪವಾಗಿ ಮೂಡಿ ಬಂದಿರುವ ಇಲ್ಲಿನ ವಿಚಾರಗಳು, ಚಿಂತನಗಳು ಸಾಹಿತ್ಯಕ್ಕೆ ಉಲ್ಲಾಸದ ಕೊಡುಗೆಗಳಾಗಿವೆ ಎಂದರು.

ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಬದುಕು ನೈಸರ್ಗಿಕವಾಗಿರಲಿ, ಅನೈಸರ್ಗಿಕ ಬದುಕಿನ ವಿಧಾನದಿಂದ ನಮ್ಮ ನೆಮ್ಮದಿ ಹಾಗೂ ಜೀವನಶೈಲಿ ಹಾಳಾಗಿದ್ದು, ಬದುಕಿನ ಸತ್ಯದ ಇತಿಮಿತಿಯನ್ನರಿತು ಬದುಕುವ ವಿಧಾನವನ್ನು ಜಿ.ಎಸ್‌. ಗೋನಾಳರವರು ತಮ್ಮ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ. ಈ ಪುಸ್ತಕದಲ್ಲಿ ಸರಳ ಜೀವನಕ್ಕೆ ಬೇಕಾದ ಮೌಲ್ಯಗಳ ಪ್ರತಿಪಾದನೆಯ ಕುರಿತು ಸುಂದರವಾಗಿ ಓದುಗರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಮೌಲ್ಯಗಳನ್ನು ಪ್ರತಿಪಾದಿಸುವ ಜೀವನದ ಅವಶ್ಯಕ ಸೂತ್ರಗಳನ್ನು ಮನದಟ್ಟಾಗಿ, ಮನಸ್ಸಿಗೆ ಬೇರೂರುವ ಹಾಗೆ ಬರೆದಿದ್ದು, ಈ ಪುಸ್ತಕದ ಲೇಖನಗಳು ಶಾಲಾ-ಕಾಲೇಜು ಪಠ್ಯಪುಸ್ತಕಗಳಿಗೆ ಪಾಠವಾಗುವ ಪ್ರೌಢಿಮೆಯನ್ನು ಹೊಂದಿವೆ ಎಂದರು.

ಹೆಬ್ಟಾಳ ಸಂಸ್ಥಾನ ಮಠದ ಶ್ರೀನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಯತ್ನಟ್ಟಿಯ ರುದ್ರಮುನಿ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ ಮಾತನಾಡಿದರು.

ಹಿರಿಯ ಸಾಹಿತಿ ಡಾ| ಮಹಾಂತೇಶ ಮಲ್ಲನಗೌಡರ, ಹಿರಿಯ ಪತ್ರಕರ್ತ ಎಂ. ಸಾದಿಕ್‌ ಅಲಿ, ಕದಳಿ ವೇದಿಕೆ ಸಂಚಾಲಕಿ ನಿರ್ಮಲಾ ಬಳ್ಳೊಳ್ಳಿ, ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ, ರತ್ನಾ ಗೋನಾಳ ಸೇರಿದಂತೆ ಮತ್ತಿತರರಿದ್ದರು.

ಉಮೇಶ ಸುರ್ವೆ ಸ್ವಾಗತಿಸಿದರು. ಪ್ರಾಸ್ತಾವಿಕ ಜಿ.ಎಸ್‌. ಗೋನಾಳ ಮಾತನಾಡಿದರು. ಶಿಕ್ಷಕಿ ಬಾಲ ನಾಗಮ್ಮ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಚಿತ್ರಗಾರ ವಂದಿಸಿದರು. ಹೆಬ್ಟಾಳ ಶ್ರೀಗಳಿಗೆ ಮತ್ತುಯತ್ನಟ್ಟಿ ಮಠದ ರುದ್ರಮುನಿಸ್ವಾಮಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ಸಾಧಕರಿಗೆ ಕನ್ನಡ ಕಸ್ತೂರಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟಾಪ್ ನ್ಯೂಸ್

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.