ಗಂಗಾವತಿ: ಹಿರೇಜಂತಕಲ್ ಮಸೀದಿಯಲ್ಲಿ ಸೌಹಾರ್ದತೆಯ ಯುಗಾದಿ ಆಚರಣೆ
Team Udayavani, Apr 3, 2022, 2:14 PM IST
ಗಂಗಾವತಿ: ಯುಗಾದಿ ಪ್ರಯುಕ್ತ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಕಾರ್ಯಕರ್ತರು ನಗರದ ಹಿರೇಜಂತಕಲ್ ನಲ್ಲಿರಿವು ಜಾಮಿಯಾ ಮಸೀದಿಯಲ್ಲಿ ಬೇವು ಬೆಲ್ಲದ ಪಾನಕ ವಿತರಿಸಿದರು.
ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಂಬರೀಶ್ ಕಡಗದ ಮಾತನಾಡಿ ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ, ಇಲ್ಲಿ ಸೂಫಿ ಸಂತರು ಶರಣರು, ಕನಕದಾಸರು ಬಸವಣ್ಣ,ವಚನಕಾರರು ಅನೇಕ ಸಂದೇಶವನ್ನು ಕೊಟ್ಟು ಹೋಗಿದ್ದಾರೆ ಇಂತಹ ತ್ಯಾಗಮಯ ರಾಷ್ಟ್ರದಲ್ಲಿ ನಾವು ನಾವು ಕಚ್ಚಾಡುವುದು ಸರಿಯಲ್ಲ ಎಲ್ಲರೂ ಒಂದಾಗಿ ಇರಬೇಕಾದ ಸಂದರ್ಭದಲ್ಲಿ ಕೆಲ ಕೋಮುವಾದಿ ಶಕ್ತಿಗಳಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಆ ಕೋಮವಾದ ವಿರೋಧ ಮಾಡುವುದರ ಮೂಲಕ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಾಗಿ ಐಕ್ಯತೆಯಿಂದ ಈ ನೆಲದಲ್ಲಿ ಬದುಕಿ ಬಾಳಬೇಕಾಗಿದೆ, ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಇಂದು ಕೆಲ ಕೋಮುವಾದಿಗಳಿಂದ ಅಶಾಂತಿ ಸೃಷ್ಟಿಯಾಗಿದೆ ಇದನ್ನು ನಾವೆಲ್ಲರೂ ಖಂಡಿಸಬೇಕಾಗಿದೆ, ನಮ್ಮ ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿ ಶರಣಬಸಪ್ಪ ರಥೋತ್ಸವಕ್ಕೆ ಬಂದ ನವಾಜ್ ದುರ್ಗದಿಂದ ಇಂದಿಗೂ ಗಂಧ ಬರುತ್ತದೆ ಈ ರೀತಿ ಅನೇಕ ಅನೇಕ ಭಾವೈಕ್ಯತೆಯ ಸಂದೇಶಗಳನ್ನು ನಮ್ಮ ನಾಡಿನಲ್ಲಿ ಕಾಣುತ್ತೇವೆ ಆದರೆ ಇದರ ಮಧ್ಯೆ ಇಂದು ಕೆಲವು ಕೋಮುವಾದಿಗಳ ಶಕ್ತಿಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಇದನ್ನು ನಾವೆಲ್ಲರೂ ಸೇರಿ ಕೋಮುವಾದಿಗಳನ್ನು ವಿರೋಧ ಮಾಡುವುದರ ಮೂಲಕ ಮೂಲಕ ಐಕ್ಯತೆಯಿಂದ ಒಟ್ಟಾಗಿ ಬಾಳಬೇಕಾಗಿದೆ ಎಂದರು.
ಎಸ್ ಎಫ್ ಐ ತಾಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ್ ಮಸೀದಿಯ ಸೈಯದ್ ಹುಸೇನ್ ಸಾಬ್ ಖಾದರ್ ಸಾಬ್ ಖಾಜಾವಲಿ ಸೇರಿದಂತೆ ಅನೇಕರಿದ್ದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.