ಬಿಜೆಪಿ ಲಜ್ಜೆಗೆಟ್ಟ, ಊಸರವಳ್ಳಿ ಪಕ್ಷ
Team Udayavani, Dec 15, 2017, 6:05 AM IST
ಕೊಪ್ಪಳ: ಬಿ.ಎಸ್.ಯಡಿಯೂರಪ್ಪ ಅಧಿ ಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು. ಬಿಜೆಪಿ ಲಜ್ಜೆಗೆಟ್ಟವರ ಪಕ್ಷ. ಬರೀ ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಕುಷ್ಟಗಿ ಹಾಗೂ ಕನಕಗಿರಿಯಲ್ಲಿ ಮಾತನಾಡಿದ ಅವರು, 2008-2013ರಲ್ಲಿ 110 ಸ್ಥಾನಗಳೊಂದಿಗೆ ಜನತೆ ಬಿಜೆಪಿಗೆ ಅಧಿಕಾರ ನೀಡಿದ್ದರೂ 5 ವರ್ಷದಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿ ಸರಿಯಾಗಿ ಆಡಳಿತ ನಿರ್ವಹಿಸಲಾಗಲಿಲ್ಲ. ಸಿಎಂ ಆಗಿದ್ದ ಯಡಿಯೂರಪ್ಪ ಅವರು ನೇರವಾಗಿ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದರು. ಸಿಎಂ ಆಗಿ ಜೈಲಿಗೆ ಹೋದವರು ಯಡಿಯೂರಪ್ಪ ಅವರೊಬ್ಬರೇ. ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ದನ ರೆಡ್ಡಿ, ಹಾಲಪ್ಪ, ಆನಂದ ಸಿಂಗ್, ಸುರೇಶ ಬಾಬು ಇವರೆಲ್ಲ ಜೈಲಿಗೆ ಹೋಗಿದ್ದು ಬೀಗತನಕ್ಕಾಗಿ ಎಂದು ವ್ಯಂಗ್ಯವಾಡಿದರು.
ಈಗ ಜನರು ಪರಿವರ್ತನೆಯಾಗಲಿ ಎಂದು ಪರಿವರ್ತನೆ ಯಾತ್ರೆ ಮಾಡುತ್ತಿದ್ದಾರೆ. ಮೊದಲು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಪರಿವರ್ತನೆಯಾಗಲಿ. ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿಯ ಇನ್ನೊಂದು ಹೆಸರೇ ಬೆಂಕಿ ಹಚ್ಚೋದು. ಅವರಿಗೆ 2-3 ನಾಲಿಗೆ ಇವೆ. ಊಸರವಳ್ಳಿ ಬಣ್ಣದಂತೆ ಮಾತು ಬದಲಿಸುತ್ತಿದ್ದಾರೆ ಎಂದರು.
ರೈತರ ಸಾಲ ಮನ್ನಾ ಮಾಡದಿದ್ದರೆ ಮೂಗು ಹಿಡಿದು ಸಾಲ ಮನ್ನಾ ಮಾಡಿಸುವೆ ಎಂದಿದ್ದ ಬಿಎಸ್‌ವೈ ಈಗ ಪ್ರಧಾನಿ ಮೋದಿ ಮೂಗು ಹಿಡಿದು ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿಸಲಿ. ಸಾಲ ಮನ್ನಾ ವಿಚಾರದಲ್ಲಿ ಲಾಲಿಪಪ್ ಎಂದಿದ್ದ ಜಾವಡೇಕರ್‌ಗೆ ಮಾನ, ಮರ್ಯಾದೆ ಇಲ್ಲ. ಇನ್ನು ಅನಂತಕುಮಾರ್ ಹೆಗಡೆ ಸಚಿವನಾಗೋದಕ್ಕೆ ನಾಲಾಯಕ್ ಎಂದರು.
ನಾನು ದಲಿತಪರ:
ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡ್ತೀವಿ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅವರು ಅಧಿ ಕಾರಕ್ಕೆ ಬರಲ್ಲ. ಇನ್ನು ಎಲ್ಲಿಂದ ಸ್ಥಾನ ಕೊಡ್ತಾರೆ. ಹಾಗಾದ್ರೆ ಜೆಡಿಎಸ್ ದಲಿತರಿಗೆ ಸಿಎಂ ಸ್ಥಾನ ಕೊಡ್ತೀವಿ ಎಂದು ಏಕೆ ಘೋಷಣೆ ಮಾಡುತ್ತಿಲ್ಲ. ದೇವೇಗೌಡರಿಗೆ ದಲಿತರ ಬಗ್ಗೆ ಎಷ್ಟು ಕಾಳಜಿಯಿದೆ ಎಂದು ನನಗೆ ಗೊತ್ತು. ತಮ್ಮ ಕೊನೆಯಾಸೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಎಂದು ದೇವೇಗೌಡರೇ ಹೇಳಿದ್ದಾರೆ’ ಎಂದರು.
“ದಲಿತರು ಸಿಎಂ ಆಗುವುದು ನನ್ನಾಸೆ. ನಾನು ಶೇ.100ರಷ್ಟು ದಲಿತರ ಪರ. ದಲಿತರ ಮನೆಗೆ ಉಪಾಹಾರಕ್ಕೆ ತೆರಳಿದ್ದ ಯಡಿಯೂರಪ್ಪಗೆ ಅಷ್ಟೊಂದು ಅಭಿಮಾನ ಇದ್ದರೆ ದಲಿತರೊಂದಿಗೆ ಬೀಗತನ ಮಾಡಲಿ’ ಎಂದು ಸವಾಲು ಹಾಕಿದರು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶೀಘ್ರ ಶಿಫಾರಸು
ಕೊಪ್ಪಳ: “ವೀರಶೈವ-ಲಿಂಗಾಯತ ಧರ್ಮದ ವಿಚಾರದಲ್ಲಿ ನಾನು ಯಾವುದೇ ಧರ್ಮ, ಜಾತಿಯನ್ನು ಒಡೆಯುವ ಕೆಲಸ ಮಾಡಿಲ್ಲ. ಲಿಂಗಾಯತರೇ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಇಬ್ಬರೂ ಒಟ್ಟಿಗೆ ಬನ್ನಿ ಎಂದಿದ್ದೆ. ಮೂರು ತಿಂಗಳಾದರೂ ಅವರು ಒಟ್ಟಾಗಿ ಬರಲಿಲ್ಲ. ಹೀಗಾಗಿ, ಶೀಘ್ರದಲ್ಲೇ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಈಗಾಗಲೆ ಮಾತೆ ಮಹಾದೇವಿ ಸೇರಿ ನನಗೆ ಪ್ರತ್ಯೇಕವಾಗಿ 5-6 ಮಂದಿ ಮನವಿ ಸಲ್ಲಿಸಿದ್ದಾರೆ. ಅದೆಲ್ಲವನ್ನೂ ಪರಿಶೀಲಿಸಿ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಧರ್ಮ ಒಡೆಯುವ ವಿಚಾರದಲ್ಲಿ ನಾನು ಬಸವರಾಜ ರಾಯರಡ್ಡಿ, ಎಂ.ಬಿ.ಪಾಟೀಲ ಸೇರಿ ಯಾವುದೇ ಸಚಿವರನ್ನು ನೇಮಕ ಮಾಡಿಲ್ಲ’ ಎಂದರು.
ರಾಹುಲ್ ಗಾಂಧಿ ಹತ್ಯೆ ಎಂದ ಸಿಎಂ !
ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ಭರದಲ್ಲಿ ರಾಹುಲ್ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ನಾನು ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು’ ಎಂದು ಹೇಳಿ ಪೇಚಿಗೆ ಸಿಲುಕಿದರು.
ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಸಾವರಿಸಿಕೊಂಡ ಸಿಎಂ, ಇಲ್ಲಾ ಇಲ್ಲಾ ರಾಹುಲ್ ಗಾಂ ಧಿ ಅಲ್ಲ, ರಾಜೀವ್ ಗಾಂಧಿ ಹತ್ಯೆ ನಡೆದ ಸಂದರ್ಭದಲ್ಲಿ ನಾನು ಸೋತೆ ಎಂದು ತಿದ್ದಿಕೊಂಡರು. ನಾನು 1991ರ ಅವ ಧಿಯಲ್ಲಿ ಕೊಪ್ಪಳ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೆ. ಆ ವೇಳೆ ಕೇವಲ 11 ಸಾವಿರ ಮತಗಳ ಅಂತರದಿಂದ ನಾನು ಸೋಲಬೇಕಾಯಿತು. ರಾಜೀವ್‌ಗಾಂಧಿ ಹತ್ಯೆಗಿಂತ ಮೊದಲೇ ಚುನಾವಣೆ ನಡೆದಿದ್ದರೆ ನಾನು ಕೊಪ್ಪಳದಲ್ಲಿ ಗೆಲ್ಲುತ್ತಿದ್ದೆ ಎಂದರು.
ಸಿಎಂಗೆ ಹಾರ ಹಾಕಲು ಅವಕಾಶ
ನೀಡದ್ದಕ್ಕೆ ಕಲ್ಲು, ಕುರ್ಚಿ ತೂರಾಟ
ಕುಷ್ಟಗಿ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿಗೆ ಹೂಹಾರ ಹಾಕಲು ಪೊಲೀಸರು ಬಿಡದ ಕಾರಣ
ಅಸಮಾಧಾನಗೊಂಡ ಮುಖಂಡ, ಅಭಿಮಾನಿಗಳು ಪೊಲೀಸರ ಮೇಲೆ ಕಲ್ಲು, ಕುರ್ಚಿ ತೂರಾಟ ನಡೆಸಿದರು. ಸಿಎಂ
ಭಾಷಣದಲ್ಲಿ ಮುಖಂಡರ ಬೆವರಿಳಿಸಿದರು.
ಇಲ್ಲಿನ ಟಿಎಪಿಸಿಎಂಎಸ್ ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ದಿಲೀಪಕುಮಾರ್ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಲು ಮುಂದಾದರು. ಆದರೆ ಪೊಲೀಸರು ಭದ್ರತೆ ದೃಷ್ಟಿಯಿಂದ ಅವರನ್ನು ವೇದಿಕೆಗೆ ಬಿಡಲಿಲ್ಲ. ಇದರಿಂದ ಕೆರಳಿದ ದಿಲೀಪಕುಮಾರ ಅಭಿಮಾನಿಗಳು ಎಸ್ಪಿಯ ಮಾತನ್ನು ಲೆಕ್ಕಿಸದೆ ವೇದಿಕೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದರು. ಇದರ ವಿರುದಟಛಿವಾಗಿ ಕಾರ್ಯಕರ್ತರು ಪ್ರತಿಭಟಿಸಿ, ತಳ್ಳಾಟ ನೂಕಾಟ ನಡೆಸಿದರು.
ಪೊಲೀಸರು ಅವರನ್ನು ಮತ್ತೂಮ್ಮೆ ಚದುರಿಸಿದರು. ಕೋಪಗೊಂಡ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ಕುರ್ಚಿಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಪರಿಸ್ಥಿತಿ ಸುಧಾರಿಸಿದರು.
ಈ ಮಧ್ಯೆ ಗಲಾಟೆ ಸದ್ದಿಗೆ ಸಿಎಂ ಸುಮ್ಮನಿರಿ ಎಂದು ಆದೇಶಿಸಿದರೂ, ಗದ್ದಲ ಹೆಚ್ಚಾದಾಗ, “ಈ ರೀತಿಯ ವರಸೆ ಬಿಡಬೇಕು. ಗದ್ದಲ ಮಾಡಿ, ಜನ ಸೇರಿಸಿ ಟಿಕೆಟ್ ನಿರೀಕ್ಷಿಸದಿರಿ. ಎಷ್ಟೇ ಪ್ರಭಾವ ಇದ್ದರೂ, ಎಷ್ಟೇ ಜನರನ್ನು ಕರೆದುಕೊಂಡು ಬಂದರೂ ಅಷ್ಟೇ. ಟಿಕೆಟ್ ಸಿಗದವರು ಗಲಾಟೆ ಮಾಡಿಸ್ತಾರೆ. ಟಿಕೆಟ್ ಖಚಿತವಾಗಿರುವವರು ಸುಮ್ಮನೆ ಇರ್ತಾರೆ ಎಂದು ಬೆವರಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.