Koppala: ಅಂಧ ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ
Team Udayavani, Dec 6, 2023, 2:43 PM IST
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಇತ್ತೀಚೆಗೆ ರಾತ್ರಿ ಅಂಧ ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಯಧೋಧಾ ವಂಟಗೋಡಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಗಂಗಾವತಿಯಲ್ಲಿ ನ.25 ರಂದು ಬೆಳಗಿನ ಜಾವ ತನ್ನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೃದ್ದ ಮುಸ್ಲಿಂ ವ್ಯಕ್ತಿ ದೂರು ನೀಡಿದ್ದರು. ಇದೊಂದು ಸೂಕ್ಷ್ಮ ವಿಷಯವಾದ ಹಿನ್ನೆಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ವೇಳೆ ಸಾಗರ್ ಹಾಗೂ ನರಸಪ್ಪ ಎನ್ನುವ ಇಬ್ಬರು ವ್ಯಕ್ತಿಗಳು ವೃದ್ದನ ಮೇಲೆ ಹಲ್ಲೆ ಮಾಡಿದ್ದು ತಿಳಿದು ಬಂದಿದೆ ಎಂದು ಹೇಳಿದರು.
ವೃದ್ದ ಹೊಸಪೇಟೆಯಿಂದ ಗಂಗಾವತಿ ನಗರಕ್ಕೆ ಬೆಳಗಿನ ಜಾವ ಆಗಮಿಸಿ ಆರೋಪಿತರ ಬಳಿ ಡ್ರಾಪ್ ಕೇಳಿದ್ದಾನೆ. ಡ್ರಾಪ್ ಮಾಡುವ ವೇಳೆ ಓರ್ವ ಆರೋಪಿ ನರಸಪ್ಪ ವೃದ್ದನ ಟೋಪಿ ಮುಟ್ಟಿದ್ದಾನೆ. ಈ ವೇಳೆ ವೃದ್ದನೂ ಅವರಿಗೆ ಬಿರುಸಾಗಿ ಮಾತನಾಡಿದ್ದಾನೆ. ಇಬ್ಬರು ಆರೋಪಿಗಳು ಆ ವೇಳೆ ಮದ್ಯ ಸೇವನೆ ಮಾಡಿದ್ದರಿಂದ ಕುಪಿತಗೊಂಡು ಸಿದ್ದಿಕೇರಿ ಸಮೀಪದ ರೈಲ್ವೆ ಸೇತುವೆ ಕೆಳಗೆ ವೃದ್ದನಿಗೆ ಹಲ್ಲೆ ಮಾಡಿ ಅಲ್ಲೆ ಬಿಟ್ಟು ಹೋಗಿದ್ದಾರೆ. ವೃದ್ದ ನರಳುತ್ತಾ ಬಿದ್ದಿದ್ದಾನೆ. ಆ ವೇಳೆ ಸ್ಥಳೀಯವಾಗಿ ಕುರಿ ಕಾಯುವ ಜನರು ವೃದ್ದನನ್ನು ರಕ್ಷಣೆ ಮಾಡಿದ್ದಾರೆ ಎಂದರು.
ಈ ಪ್ರಕರಣ ಪತ್ತೆಗೆ ನಮಗೆ ಸವಾಲಿನ ವಿಷಯವಾಗಿತ್ತು. ಸಾಗರ್ ಎನ್ನುವ ಓರ್ವ ವ್ಯಕ್ತಿ ಇಂಜಿನಿಯರಿಂಗ್ ಮುಗಿದಿದ್ದು ಸದ್ಯ ಗಂಗಾವತಿಯಲ್ಲಿದ್ದನು. ಪ್ರಕರಣದಲ್ಲಿ ಯಾವುದೇ ಕೋಮು ವಿಷಯವಿಲ್ಲ. ವೃದ್ದನ ಗಡ್ಡಕ್ಕೆ ಬೆಂಕಿ ಹಚ್ಚಿದ ಯಾವುದೇ ದಾಖಲೆ ಇಲ್ಲ. ಗಂಗಾವತಿಯಲ್ಲಿ ಎರಡೂ ಕಡೆ ಜನತೆ ನಮಗೆ ತನಿಖೆಯ ವೇಳೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.