ಗೌರಿ-ಗಣೇಶ ಹಬ್ಬ ಶಾಂತಿಯುತವಾಗಿ ಆಚರಿಸಿ: ರೇಣುಕಾ
Team Udayavani, Aug 27, 2019, 1:17 PM IST
ಕೊಪ್ಪಳ: ಗೌರಿ ಗಣೇಶ ಹಬ್ಬದ ನಿಮಿತ್ತ ನಗರದ ಎಸ್‌ಪಿ ಕಚೇರಿಯಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಎಸ್‌ಪಿ ರೇಣುಕಾ ಸುಕುಮಾರ ಮಾತನಾಡಿದರು.
ಕೊಪ್ಪಳ: ಗೌರಿ-ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥಿಕವಾಗಿ ಆಚರಣೆ ಮಾಡಬೇಕು ಎಂದು ಎಸ್‌ಪಿ ರೇಣುಕಾ ಸುಕುಮಾರ ಹೇಳಿದರು.
ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ತಮ್ಮ ಮನೆಗಳಿಗೆ ಖುಷಿಯಿಂದ ತೆರಳಿದರೆ ಅದೇ ನಮಗೆ ಖುಷಿಯ ವಿಚಾರವಾಗಲಿದೆ. ನೀವು ಸಂತೋಷವಾಗಿದ್ದರೆ ನಾವು ಸಂತೋಷದಿಂದ ಹಬ್ಬ ಆಚರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಯಾವುದೇ ಅವಘಡ ಹಾಗೂ ಅಪಾಯ ಎದುರಾದರೆ ಜಿಲ್ಲೆಗೆ ಕೆಟ್ಟ ಹೆಸರು. ಅದು ಸದಾ ನೆನಪಿನಲ್ಲಿ ಉಳಿಯುತ್ತದೆ. ಅದಕ್ಕೆ ಅವಕಾಶ ಕೊಡದೇ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಬೇಕು. ನಿಮ್ಮ ಒಳಿತಿಗೆ ಸರ್ಕಾರವು ಹಲವು ಕಾನೂನುಗಳನ್ನು ಜಾರಿ ತಂದಿದೆ. ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕು. ಕಾನೂನು ಪಾಲನೆ ಮಾಡಬೇಕು ಎಂದರು.
ಜನಸಂಖ್ಯೆ ಹೆಚ್ಚಿಸಿದಂತೆ ಪೊಲೀಸರನ್ನು ಹೆಚ್ಚಿಸಲು ಆಗುವುದಿಲ್ಲ. ಇರುವ ಪೊಲೀಸ್ ಭದ್ರತೆಯಲ್ಲೇ ಜನತೆಗೆ ರಕ್ಷಣೆ ಕೊಡಬೇಕು. ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಿ ಕೊನೆ ವರೆಗೂ ಸುರಕ್ಷಿತವಾಗಿ ವಿಸರ್ಜನೆ ಮಾಡಬೇಕು. ಮದ್ಯ ಸೇವಿಸಿ ಹಬ್ಬ ಆಚರಣೆ ಮಾಡುವುದು ತರವಲ್ಲ. ಅಶ್ಲೀಲವಾದ ನೃತ್ಯ ಮಾಡಬೇಡಿ. ಆ ರೀತಿ ವರ್ತನೆ ತೋರಿದರೆ ಯಾವುದೇ ಮಹಿಳೆ ಮೆರವಣಿಗೆ ವೀಕ್ಷಣೆಗೆ ಬರಲ್ಲ. 21ನೇ ದಿನಕ್ಕೆ ಗಣೇಶ ಮೂರ್ತಿ ವಿಸರ್ಜನೆಗೆ ಕೊನೆಯ ದಿನವಾಗಿದೆ. ಯಾರು ಮೊದಲು ಕಾನೂನು ಪಾಲನೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಾರೋ ಅವರಿಗೆ ಬಹುಮಾನ ನೀಡುತ್ತೇವೆ ಎಂದರು. ಎಸಿ ಸಿ.ಡಿ. ಗೀತಾ ಮಾತನಾಡಿದರು. ಡಿವೈಎಸ್‌ಪಿ ವೆಂಕಟಪ್ಪ ನಾಯಕ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.