ನದಿ ಜೋಡಣೆಗೆ ಕೇಂದ್ರ ಸಿದ್ಧ
Team Udayavani, Jun 3, 2019, 3:20 PM IST
ಕುಕನೂರು: ಯಡಿಯಾಪುರ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು.
ಕುಕನೂರು: ದೇಶದ ರೈತರಿಗೆ ಅನುಕೂಲವಾಗಲು ಮಳೆ ಆಶ್ರಿತ ಭೂಮಿಯನ್ನು ನೀರಾವರಿಯನ್ನಾಗಿಸಲು ಕೇಂದ್ರ ಬಿಜೆಪಿ ಸರ್ಕಾರ ಆರು ಲಕ್ಷ ಕೋಟಿ ಅನುದಾನವನ್ನು ದೇಶದ ನದಿ ಜೋಡಣೆಗೆ ನೀಡಲು ಸಿದ್ಧವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ರವಿವಾರ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಆಡಳಿತದಿಂದ ವಿಶ್ವವೇ ಭಾತರದ ಕಡೆ ತಿರುಗಿ ನೋಡುತ್ತಿದೆ. ಪ್ರಧಾನಿ ಇನ್ಮುಂದೆ ಕೂಡ ರೈತರು, ಯೋಧರು, ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವ ಕನಸು ಹೊಂದಿದ್ದಾರೆ ಎಂದರು.
ರೈತನ ಮಗ ಪರಶುರಾಮ ಮಾಗೇರಿ ಸತತ ಐದನೇ ಬಾರಿಗೆ ಸಾಮೂಹಿಕ ಮಾಡುತ್ತಿರುವುದು ಸಣ್ಣ ವಿಷಯವಲ್ಲ. ವರ್ಷಪೂರ್ತಿ ದುಡಿದ ವರಮಾನ ಎಲ್ಲಾ ಸಮಾಜದ ಹಿತಕ್ಕಾಗಿ ಖರ್ಚು ಮಾಡುವುದು ಹೆಮ್ಮೆಯ ಸಂಗತಿ. ಪರಶುರಾಮನ ಸಹೋದರಿ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದು ಯುವತಿಯರಿಗೆ ಪ್ರೇರಣೆಯಾಗಿದ್ದಾಳೆ ಎಂದರು. ಸಾನ್ನಿಧ್ಯ ವಹಿಸಿದ್ದ ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ ತಂದೆ, ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು. ನಂತರ ಪರಶುರಾಮ ಮಗಳ ನಾಮಕರಣ ನೆರವೇರಿತು. ಕುದರಿಮೋತಿಯ ನಿರಂಜನ ವಿಜಯಮಾಂತೇಶ ಸ್ವಾಮಿಗಳು. ಕುಷ್ಟಗಿಯ ವೀರಸಂಗಮೇಶ್ವರ ಶ್ರೀಗಳು. ಯಲಬುರ್ಗಾ ಶ್ರಿಧರ ಮುರಡಿ ಶ್ರೀಗಳು, ಕುಕನೂರಿನ ಪ್ರಭುಲಿಂಗ ದೇವರು, ಗಂಗಾವತಿ ಶಾಸಕ ಪರಣ್ಣ ಮನವಳ್ಳಿ, ರಾಮಣ್ಣ ಹೊಸಮನಿ, ಗಂಗಮ್ಮ ಗುಳಗಣ್ಣವರ್, ಕಳಕಪ್ಪ ಕಂಬಳಿ, ವೀರನಗೌಡ ಬಳೂಟಗಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.