ದೇವಾಲಯಗಳಿಗೆ ದತ್ತಿ ಇಲಾಖೆ ಆಡಳಿತಾಧಿಕಾರಿ ನೇಮಕ
Team Udayavani, Mar 16, 2019, 10:44 AM IST
ಗಂಗಾವತಿ: ಐತಿಹಾಸಿಕ ಪಂಪಾ ಸರೋವರದ ವಿಜಯಲಕ್ಷ್ಮೀ ದೇವಾಲಯ ಮತ್ತು ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಹಲವು ದಶಕಗಳಿಂದ ದೇವಾಲಯಗಳಿಗೆ ಆನೆಗೊಂದಿ ರಾಜವಂಶಸ್ಥ ರಾಮದೇವರಾಯಲು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ವಯೋ ಸಹಜದಿಂದಾಗಿ ತಮ್ಮ ಮಗ ಹರಿಹರದೇವರಾಯಲು ಅವರನ್ನು ದೇವಾಲಯಗಳಿಗೆ ಅಧ್ಯಕ್ಷರನ್ನಾಗಿ ಮಾಡಿ ಸಮಿತಿ ಪುನಾರಚನೆ ಮಾಡುವಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಮಾಹಿತಿ ನೀಡುವಂತೆ ಗಂಗಾವತಿ ತಹಶೀಲ್ದಾರ್ ಅವರಿಗೆ ಆದೇಶ ಮಾಡಿದ್ದರು.
ಪಂಪಾ ಸರೋವರ ಮತ್ತು ಶ್ರೀರಂಗನಾಥ ಸ್ವಾಮಿ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ವ್ಯಾಪ್ತಿಯಲ್ಲಿರುವ ಕುರಿತು ತಹಶೀಲ್ದಾರ್‌ರು ಜಿಲ್ಲಾಧಿ ಕಾರಿಗೆ ವರದಿ ನೀಡಿದ್ದರು. ಇದನ್ನು ಪರಿಶೀಲಿಸಿ ಪಂಪಾ ಸರೋವರದ ಶ್ರೀವಿಜಯಲಕ್ಷ್ಮೀ ದೇವಾಲಯ ಮತ್ತು ಆನೆಗೊಂದಿಯ ಶ್ರೀರಂಗನಾಥಸ್ವಾಮಿ ದೇವಾಲಯಗಳಿಗೆ ಜಿಲ್ಲಾಧಿಕಾರಿಗಳು ಆನೆಗೊಂದಿಯ ಗ್ರಾಮಲೆಕ್ಕಾಧಿಕಾರಿಯನ್ನು
ಕಾರ್ಯ ನಿರ್ವಾಹಣಾಧಿಕಾರಿಯಾಗಿ, ಕಂದಾಯ ನಿರೀಕ್ಷಕರನ್ನು ಆಡಳಿತಾಧಿಕಾರಿಯಾಗಿ ನೇಮಿಸುವಂತೆ ಆದೇಶ ನೀಡಿದ್ದಾರೆ.
ಸ್ಥಳೀಯರ ಆಕ್ರೋಶ: ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳ ಸಮಿತಿ ಅಧ್ಯಕ್ಷರಾಗಿದ್ದ ರಾಜವಂಶಸ್ಥರನ್ನು ತೆಗೆದು ಹಾಕಿ ಧಾರ್ಮಿಕದತ್ತಿ ಇಲಾಖೆ ನಿಯಮಗಳ ನೆಪದಲ್ಲಿ ಕಾರ್ಯನಿರ್ವಾಹಕರು ಮತ್ತು ಆಡಳಿತಾ ಧಿಕಾರಿಗಳನ್ನು ನೇಮಿಸಿದ್ದಕ್ಕೆ ಆನೆಗೊಂದಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಶ್ರೀರಂಗನಾಥ ದೇವಾಲಯದಲ್ಲಿ ಸಭೆ ನಡೆಸಿ ಕೂಡಲೇ ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದು ಮೊದಲಿನಂತೆ ಸಮಿತಿಗೆ ರಾಜವಂಶಸ್ಥರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ, ಶ್ರೀರಂಗನಾಥಸ್ವಾಮಿ ಜಾತ್ರೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.
ಶಾಸಕರ ಭೇಟಿ: ಶಾಸಕ ಪರಣ್ಣ ಮುನವಳ್ಳಿ ಅವರನ್ನು ಆನೆಗೊಂದಿ ರಾಜವಂಶಸ್ಥರು ಹಾಗೂ ಸ್ಥಳೀಯರು ಭೇಟಿಯಾಗಿ ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳ ಸಮಿತಿಯಿಂದ ರಾಜವಂಶಸ್ಥರನ್ನು ತೆಗದು ಹಾಕಿರುವುದು ರಾಜವಂಶಸ್ಥರಿಗೆ ಅವಮಾನ ಮಾಡಿದಂತೆ. ಕೂಡಲೇ ಸರಕಾರದ ಮಟ್ಟದಲ್ಲಿ ಮಾತನಾಡುವಂತೆ ಮನವಿ ಮಾಡಿದರು.
ಪಂಪಾಸರೋವರ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಜಿಲ್ಲಾ ಧಿಕಾರಿಗಳು ಕೇಳಿದ ಮಾಹಿತಿಯಂತೆ ವರದಿ ನೀಡಲಾಗಿದೆ. ರಾಜವಂಶಸ್ಥರನ್ನು ಸಮಿತಿಯಿಂದ ತೆಗೆದು ಹಾಕುವಂತೆ ವರದಿ ನೀಡಿಲ್ಲ. ಸರಕಾರದ ನಿಯಮಗಳಂತೆ ಇದುವರೆಗೂ ಇದ್ದ ಸ್ಥಿತಿ ಕುರಿತು ಜಿಲ್ಲಾ ಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಶೀಘ್ರವೇ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರನ್ನು ಕಾರ್ಯನಿರ್ವಾಹಕ ಹಾಗೂ ಆಡಳಿತಾಧಿಕಾರಿಯಾಗಲಿದ್ದಾರೆ.
ವೀರೇಶ ಬಿರಾದಾರ್,
ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.