Education: ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು; ಕಡ್ಡಾಯ ಶಿಕ್ಷಣ ಮಾಯ..
Team Udayavani, Jan 2, 2024, 1:37 PM IST
ದೋಟಿಹಾಳ: ಸ್ವಾತಂತ್ರ‍್ಯ ಸಿಕ್ಕು 75 ವರ್ಷ ಕಳೆದರೂ ಇನ್ನೂ ರಾಜ್ಯದ ಎಷ್ಟೋ 3-6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಎಂಬುವುದೇ ಒಂದು ದುರಂತವಾಗಿದೆ. ಇದಕ್ಕೆ ತಾಜಾ ಉದಾಹರಣೆ, ಕೊಪ್ಪಳ ಜಿಲ್ಲೆಯ ಗಡಿಭಾಗದಲ್ಲಿರುವ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮ್‌ಜೀ ನಾಯಕ್ ತಾಂಡದ 3-6 ವರ್ಷದ ಒಳಗಿನ ಮಕ್ಕಳ ಸ್ಥಿತಿ.
ರಾಮಜೀ ನಾಯಕ್ ತಾಂಡದಲ್ಲಿ 3-6 ವರ್ಷದ ಒಳಗಿನ ಸುಮಾರು 18-20 ಮಕ್ಕಳು ಇದ್ದಾರೆ. ಈ ಮಕ್ಕಳಿಗೆ ಇದುವರೆಗೂ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ. ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿ ಓದುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಹಾಗೇ ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಹಾಗೂ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯವು ವೃದ್ಧಿಯಾಗಲು ಅಂಗನವಾಡಿ ಕೇಂದ್ರ ಮುಖ್ಯ.
ರಾಜ್ಯದ ಎಷ್ಟೋ ತಾಂಡಗಳ ಮಕ್ಕಳು ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಿಕ್ಷಣವು ಮಕ್ಕಳ ಶಿಕ್ಷಣದ ತಳಹದಿಯಾಗಿದೆ. ಇಲ್ಲಿಯ ಶಿಕ್ಷಣ ಮುಂದಿನ ಶಿಕ್ಷಣದ ಪ್ರತಿಯೊಂದು ಹಂತದಲ್ಲಿ ಯಶಸ್ಸನ್ನು ಅವಲಂಭಿಸಿದೆ. ಶಾಲಾ ಶಿಕ್ಷಣ ಸಿಗದ ಎಷ್ಟೋ ಮಕ್ಕಳು ಶಾಲೆಯಿಂದ ಉತ್ತಮ ಶಿಕ್ಷಣ ಕಲಿಯದೆ. ಅನುತ್ತೀರ್ಣರಾಗಿ ಶಾಲೆಯಿಂದ ಹೊರಬೀಳುವ ಅಪಾಯವಿರುತ್ತದೆ.
ಸರಕಾರ ಮಕ್ಕಳ ಹಕ್ಕುಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಮುಖಾಂತರ ಜಾಗೃತಿಗೊಳಿಸುತ್ತಿದೆ ಆದರೆ. ಇಲ್ಲಿಯ ಶಿಕ್ಷಣದಿಂದ ವಂಚಿತವಾಗುತ್ತಿರುವ ಇಂತಹ ಮಕ್ಕಳ ಬಗ್ಗೆ ಯಾರು ಗಮನಹರಿಸುತ್ತಿಲ್ಲ. ಮಕ್ಕಳ ಮೂಲಭೂತ ಹಕ್ಕು ಆದ ಶಿಕ್ಷಣ ಪಡೆಯುವ ಹಕ್ಕನ್ನು ಈ ಮಕ್ಕಳು ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ 2002ರಲ್ಲಿ ಆಸ್ತಿಕರಣ ಹಕ್ಕನ್ನು ತೆಗೆದು ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಆರ್ಟಿಕಲ್ 51-ಎ ಅಡಿಯಲ್ಲಿ ನೀಡಲಾಗಿದೆ. ಆದರೂ ಇನ್ನೂ 3-6 ವರ್ಷದ ಒಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಯಾಕೆ?
ಈ ತಾಂಡದಲ್ಲಿ ಸುಮಾರು 200ಕ್ಕೂ ಹೆಚ್ಚು ಹಾಗೂ 50 ರಿಂದ 60 ಕುಟುಂಬಗಳು ಈ ತಾಂಡದಲ್ಲಿ ವಾಸವಾಗಿದ್ದಾರೆ. ಇಲ್ಲಿ ಕೇವಲ ಮಕ್ಕಳ ಸಮಸ್ಯೆ ಅಷ್ಟೇಲ್ಲ. ಇಲ್ಲಿಯ ಗರ್ಭಿಣಿ, ತಾಯಂದಿರಿಗೆ ಅಂಗನವಾಡಿ ಕೇಂದ್ರದ ಮಾತಪೂರ್ಣ ಯೋಜನೆಯಿಂದ ಇವರು ವಂಚಿತರಾಗುತ್ತಿದ್ದಾರೆ. ಕಾರಣ ಈ ತಾಂಡ ಗರ್ಭಿಣಿ, ತಾಯಂದಿರು ಅಂಗನವಾಡಿ ಕೇಂದ್ರಕ್ಕೆ ಹೋಗಬೇಕಾದರೆ. 3-4 ಕಿಮೀ ನಡೆದುಕೊಂಡು ಕಿಲ್ಲಾರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಬರುವ ಸ್ಥಿತಿ ಇವರದ್ದಾಗಿದೆ. ತಾಂಡದಲ್ಲಿ ಒಂದು ಅಂಗನವಾಡಿ ಕೇಂದ್ರ ಇಲ್ಲದ ಕಾರಣ. ತಾಂಡದ ಮಕ್ಕಳಿಗೆ ಶಿಕ್ಷಣ ಹಾಗೂ ಗರ್ಭಿಣಿ, ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.
ಸರಕಾರ ಗರ್ಭಿಣಿ, ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ನೀಡಲು ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ ಪ್ರತಿ ನಿತ್ಯ ಗರ್ಭಿಣಿ, ತಾಯಂದಿರಿಗೆ ಪೌಷ್ಟಿಕ ಆಹಾರ ನೀಡುವ ಮಾತಪೂರ್ಣ ಯೋಜನೆ ಜಾರಿಗೆ ತಂದ್ದಿದೆ. ಆದರೇ ಇಲ್ಲಿಯ ಗರ್ಭಿಣಿ, ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ಸಿಗದೇ. ದೂರದ ಕಿಲ್ಲಾರಹಟ್ಟಿ ಅಂಗನವಾಡಿ ಕೇಂದ್ರದವರು ತಿಂಗಳಿಗೊಮ್ಮೆ ಆಹಾರ ಪದಾರ್ಥವನ್ನು ನೀಡಿ ಕಳಿಸುತ್ತಿದ್ದಾರೆ.
ರಾಮ್‌ಜೀ ನಾಯಕ ತಾಂಡ 3-6 ವರ್ಷದ ಒಳಗಿನ ಮಕ್ಕಳು ನಮ್ಮ ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿವೆ. ಆದರೇ ಈ ಮಕ್ಕಳು ಕೇಂದ್ರಕ್ಕೆ ಬರುವದಿಲ್ಲ. ಪ್ರತಿ ವರ್ಷ 4-5 ಮಂದಿ ಗರ್ಭಿಣಿ ಬಾಣತಿಯರು ಸಿಗುತ್ತಾರೆ ಹೀಗಾಗಿ ತಾಂಡದಲ್ಲಿ ಒಂದು ಅಂಗನವಾಡಿ ಕೇಂದ್ರ ಆರಂಭ ಮಾಡಿದರೆ ಮಕ್ಕಳಿಗೂ ಹಾಗೂ ಗರ್ಭಿಣಿ ತಾಯಂದಿರಿಗೂ ಅನುಕೂಲವಾಗುತ್ತದೆ ಎಂದು ಕಿಲ್ಲಾರಹಟ್ಟಿ ಕೇಂದ್ರ ಕಾರ್ಯಕರ್ತೆ ಅವರು ಹೇಳಿದರು.
ಶಿಕ್ಷಣ ಪ್ರತಿ ಮಗುವಿನ ಹಕ್ಕು, 14ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದು ಸರಕಾರ ಹೇಳಿಕೊಳ್ಳುತ್ತವೆ. ಆದರೆ ಇದುವರಿಗೂ ಈ ತಾಂಡದ ಎಷ್ಟೋ 3-6ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಯಾಕೆ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.
3-6ವರ್ಷದ ಪ್ರತಿ ಮಕ್ಕಳು ಶಾಲಾ ಪೂರ್ವ ಶಿಕ್ಷಣ ಪಡೆಯಬೇಕು. ಈ ರಾಮ್‌ಜೀ ನಾಯಕ್ ತಾಂಡದ 3-6 ವರ್ಷದ ಮಕ್ಕಳ ಶಿಕ್ಷಣ ಸಮಸ್ಯೆ ಬಗ್ಗೆ ಕೂಡಲೇ ಸರ್ವೆ ಮಾಡಿ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುತ್ತೇವೆ. –ರೋಹಿಣಿ,ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ಕೊಪ್ಪಳ.
ರಾಮ್‌ಜೀ ನಾಯಕ್ ತಾಂಡದ ಇಲಾಖೆಯ ಒಬ್ಬ ಅಧಿಕಾರಿಯನ್ನು ಕಳಿಸುತ್ತೇವೆ. ಇಲ್ಲಿಯ ಮಕ್ಕಳ ಸಮಸ್ಯೆ ಬಗ್ಗೆ ವರದಿ ಪಡೆದುಕೊಂಡು ಶಿಕ್ಷಣದಿಂದ ವಂಚಿತರಾಗುತ್ತಿರು 3-6ವರ್ಷದ ಮಕ್ಕಳ ಸಮಸ್ಯೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ. – ತಿಮ್ಮಣ್ಣ ಶಿರಸಿಗಿ, ಡಿಡಿ ಕೊಪ್ಪಳ.
– ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.