ಕರೆನ್ಸಿ ಚಸ್ಟ್ ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಖಂಡನೆ
Team Udayavani, Dec 12, 2019, 3:39 PM IST
ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್) ಸೇವೆ ಇದೇ ಡಿ. 31ರಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಉದ್ದಿಮೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಎಸ್‌ಬಿಐ ಶಾಖೆಯಲ್ಲಿದ್ದ ಕರೆನ್ಸಿ ಘಟಕಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಹಣ ಪೂರೈಕೆಯ ವ್ಯವಸ್ಥೆ ಇತ್ತು. ಆದರೆ ಈ ಸೇವೆ ಇದೇ ಡಿ. 31ಕ್ಕೆ ಬಂದ್ ಆಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬ್ಯಾಂಕಿನಿಂದ ಸ್ಥಳೀಯ ಅಂಚೆ ಕಚೇರಿ, ತಾವರಗೇರಾ, ಹನುಮಸಾಗರ, ಹೂಲಗೇರಾ ಮೊದಲಾದ ಎಸ್‌ಬಿಐ ಶಾಖೆಗಳಿಗೆ, ಸಹಕಾರ ಬ್ಯಾಂಕ್ ಸೇರಿದಂತೆ ಇತರೇ ಬ್ಯಾಂಕ್ ಹಣ ಸರಬರಾಜು ವ್ಯವಸ್ಥೆ ಇತ್ತು. ಇದರಿಂದ ಸಕಾಲದಲ್ಲಿ ಹಣ ಲಭ್ಯತೆ ಇರುತ್ತಿದ್ದು, ಯಾವಾಗಲೂ 10 ಕೋಟಿಗೂ ಅಧಿಕ ಹಣ ಮೀಸಲಿರುತ್ತಿತ್ತು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕೂಡಲೇ ಸಿಗುತ್ತಿತ್ತು. ಕರೆನ್ಸಿ
ಚಸ್ಟ್ ಸೇವೆ ಡಿ. 31ರಿಂದ ಸ್ಥಗಿತಗೊಂಡರೆ ಯಲಬುರ್ಗಾ ಎಸ್‌ಬಿಐ ಶಾಖೆಯಿಂದ ತರಿಸಿಕೊಳ್ಳಬೇಕಿದ್ದು, ಅಲ್ಲಿಯವರೆಗೂ ಕಾಯಬೇಕು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕ್ರೋಢಿಕೃತವಾಗುವರೆಗೂ ಕಾಯಬೇಕು. ಇಲ್ಲವೇ ದೊಡ್ಡ ಮೊತ್ತ ಹಣ ಅಗತ್ಯವಾದರೆ ಮುಂಚೆಯೇ ಶಾಖೆಗೆ ತಿಳಿಸುವ ಪರಿಸ್ಥಿತಿ ಬರಲಿದೆ.
ಮಾಹಿತಿ ಪ್ರಕಾರ ಆರ್‌ಬಿಐ ನಿರ್ದೇಶನದ ಮೇರೆಗೆ ಕರೆನ್ಸಿ ಚಸ್ಟ ಸೇವೆ ಸ್ಥಗಿತಕ್ಕೆ ಎಲ್ಲವೂ ಆನ್‌ಲೈನ್‌ನಲ್ಲಿ ವ್ಯವಹರಿಸಲು ಪೂರಕ ವ್ಯವಸ್ಥೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಒಪ್ಪುವುದಿಲ್ಲ. ಈ ಸೇವೆಯನ್ನು ಯಾವೂದೇ ಕಾರಣಕ್ಕೂ ಸ್ಥಗಿತಗೊಳಿಸದಿರಲಿ, ಇದೇ ಡಿ. 13ರಂದು ಬ್ಯಾಂಕ್ ಎಜಿಎಂ ಮೂಲಕ ಡಿಜಿಎಂಗೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೇ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೂ ಸಲ್ಲಿಸಲಾಗುವುದು ಎಂದು ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ್ ಗಾಣಗೇರ ತಿಳಿಸಿದರು. ಬ್ಯಾಂಕಿನಲ್ಲಿ ಗ್ರಾಹಕರಿಗೆ ಸೇವೆ ತೃಪ್ತಿಕರವಾಗಿಲ್ಲ. ತಾಸುಗಟ್ಟಲೇ ನಿಲ್ಲಬೇಕು ಇದನ್ನು ಸರಿಪಡಿಸದೇ ಬ್ಯಾಂಕಿನ ಕರೆನ್ಸಿ ಚಸ್ಟ್ ಸೇವೆ ಸ್ಥಗಿತಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.