ಎಲ್‌ಐಸಿ ಷೇರು ಮಾರಾಟಕ್ಕೆ ಖಂಡನೆ
Team Udayavani, Feb 5, 2020, 4:00 PM IST
ಗಂಗಾವತಿ: ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಎಲ್‌ಐಸಿ ಷೇರು ಮಾರಾಟವನ್ನು ವಿಮಾನೌಕರರು ಮತ್ತು ಪ್ರತಿನಿಧಿಗಳ ಸಂಘದವರು ಖಂಡಿಸಿ ಮಂಗಳವಾರ ದೇಶವ್ಯಾಪಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಎಲ್‌ಐಸಿ ಕಚೇರಿ ಎದುರು ವಿಮಾನೌಕರರು ಮತ್ತು ಪ್ರತಿನಿಧಿಗಳ ಸಂಘದವರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ವಿಮಾ ಹಿರಿಯ ಅಧಿಕಾರಿಗಳ ಸಂಘದ ಮುಖಂಡರಾದ ಗಂಗಾಧರಸ್ವಾಮಿ ಮತ್ತು ಸುರೇಶ ಮಾತನಾಡಿ, 6 ದಶಕಗಳಿಂದ ದೇಶದಲ್ಲಿ ಎಲ್‌ಐಸಿ ದೇಶದ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ದೇಶದ ಸದೃಢ ಆರ್ಥಿಕ ಶಕ್ತಿಯಾಗಿ ದೇಶದ ಮೂಲಸೌಕರ್ಯ ಕಲ್ಪಿಸಲು ನೆರವಾಗಿದೆ.ಪಂಚವಾರ್ಷಿಕ ಯೋಜನೆಯಲ್ಲಿ ಎಲ್ ಐಸಿಯಲ್ಲಿ ಸಂಗ್ರಹವಾದ ಜನರ ಹಣವನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವರ್ಷ ಕೇಂದ್ರ ಸರಕಾರ ಕೋಟ್ಯಾಂತರ ರೂ.ಗಳನ್ನು ಲಾಭಾಂಶ ನೀಡುವ ಎಲ್‌ಐಸಿ ದೇಶವನ್ನು ಎಲ್ಲಾ ಸಂದರ್ಭಗಳಲ್ಲಿ ಆರ್ಥಿಕವಾಗಿ ಸಂರಕ್ಷಣೆ ಮಾಡಿದೆ. ಈಗ ಸರಕಾರ ತನ್ನ ಪಾಲಿನ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಎಲ್‌ಐಸಿಯನ್ನು ಖಾಸಗೀಕರಣ ಮಾಡುವ ಪ್ರಥಮ ಹೆಜ್ಜೆ ಇಡುತ್ತಿರುವುದು ಖಂಡನೀಯವಾಗಿದೆ.
ಸ್ವಾತಂತ್ರ್ಯ ನಂತರ ಬ್ಯಾಂಕಿಂಗ್ ಸೇರಿ ಸಾರ್ವಜನಿಕ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಿ ಲಾಭಾಂಶವನ್ನು ದೇಶದ ಜನರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಇದೀಗ ಖಾಸಗೀಕರಣದ ನೆಪದಲ್ಲಿ ಲಾಭದಲ್ಲಿರುವ ಬ್ಯಾಂಕಿಂಗ್ ಹಾಗೂ ವಿಮಾ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಅವೈಜ್ಞಾನಿಕವಾಗಿದೆ. ಎಲ್ ಐಸಿ ದೇಶದ ಸುಮಾರು 30 ಕೋಟಿ ಜನರಿಗೆ ವಿಮಾ ಸುರಕ್ಷತೆ ನೀಡಿದೆ. 15 ಲಕ್ಷಕ್ಕೂ ಅಧಿಕ ಪ್ರತಿನಿಧಿಗಳ ಬದುಕು ನಡೆಸಲು ಕಾರಣವಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಕೈಬಿಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಮಾ ನೌಕರರ ಸಂಘದ ಗಂಗಾಧರಸ್ವಾಮಿ, ಸುರೇಶ, ರಾಮಣ್ಣ, ಕುರಿರಾಮಣ್ಣ, ಗೋಪಾಲಕೃಷ್ಣ, ಹನುಮಂತಪ್ಪ, ನರೇಶ, ಶ್ರೀಲತಾ, ವೀಣಾ, ಅಂಜಿನಮ್ಮ, ನರಸಿಂಹ, ರಮೇಶ ಭಟ್, ಕಿಶನ್, ರಾಜು, ವಿಶ್ವಪ್ರಸಾದ, ಪ್ರತಿನಿಧಿ ಸಂಘದ ಕೆ.ನಿಂಗಜ್ಜ, ವಲಿಮೋಹಿಯುದ್ದೀನ್, ಖಾಜವಲಿ, ರಾಘವೇಂದ್ರ ದೇಸಾಯಿ, ನಿಜಲಿಂಗಪ್ಪ, ಬಸವರಾಜ ಸಜ್ಜನ್, ಎಚ್. ಈಶ್ವರ, ಬಸವಣ್ಣಯ್ಯ, ಕಲ್ಯಾಣಬಸಪ್ಪ ಸೇರಿ ಪ್ರತಿನಿಧಿಗಳು ಹಾಗೂ ಗ್ರಾಹಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.