ಪ್ರಭಾರ ಪ್ರಾಚಾರ್ಯರ ಅಧಿಕಾರದ ಗೊಂದಲ: ಮಹಾವಿದ್ಯಾಲಯಕ್ಕೆ MLA ಗಾಲಿ ಜನಾರ್ದನರೆಡ್ಡಿ ಭೇಟಿ
ಸೂಚನೆ ನೀಡಿದರೂ ಪ್ರಭಾರ ವಹಿಸಿದ್ದಕ್ಕೆ ಗರಂ ಆದ ಶಾಸಕ ಗಾಲಿ ರೆಡ್ಡಿ
Team Udayavani, Aug 16, 2023, 3:55 PM IST
ಗಂಗಾವತಿ: ನಗರದ ಪ್ರತಿಷ್ಠಿತ ಕೊಲ್ಲಿ ನಾಗೇಶ್ವರ ರಾವ್ ಸರ್ಕಾರಿ ಮಹಾವಿದ್ಯಾಲಯದಲ್ಲಿ ಪ್ರಭಾರ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳುವ ಕುರಿತು ಏರ್ಪಟ್ಟಿರುವ ಗೊಂದಲ ಕುರಿತಂತೆ ಉದಯವಾಣಿ ವೆಬ್ ನ್ಯೂಸ್ ನಲ್ಲಿ ವಿಸ್ತ್ರತ ವರದಿ ಪ್ರಕಟಣೆಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಆ.16ರ ಬುಧವಾರ ಕಾಲೇಜಿಗೆ ಭೇಟಿ ನೀಡಿ ಎಲ್ಲಾ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ಸಭೆ ಕರೆದು ನಿಯಮ ಉಲ್ಲಂಘನೆ ಮತ್ತು ತಮ್ಮ ಸೂಚನೆಯನ್ನು ಮೀರಿ ಪ್ರಭಾರ ವಹಿಸಿಕೊಂಡಿರುವ ಡಾ. ಜಾಜಿ ದೇವೇಂದ್ರಪ್ಪ ಕೂಡಲೇ ಹುದ್ದೆಯಿಂದ ನಿರ್ಗಮಿಸಬೇಕು ಎಂದರು.
ಮೊದಲಿನಂತೆ ಪ್ರೋ. ಜಗದೇವಿ ಕೆಲಶೆಟ್ಟಿ ತಾತ್ಕಾಲಿಕ ಪ್ರಭಾರ ಪ್ರಾಚಾರ್ಯರ ಹುದ್ದೆಯಲ್ಲಿ ಮುಂದುವರೆಯಬೇಕು. ಶೀಘ್ರವೇ ನಿಯಮಾನುಸಾರ ಅನ್ಯರಿಗೆ ಪ್ರಾಚಾರ್ಯ ಹುದ್ದೆ ವಹಿಸಲಾಗುತ್ತದೆ ಎಂದು ಸೂಚನೆ ನೀಡಿದರು.
ಕಾಲೇಜಿನಲ್ಲಿ ಖಾಯಂ ಪ್ರಾಚಾರ್ಯರು ಒಂದು ವೇಳೆ ವರ್ಗವಾದರೆ ಅಥವಾ ಅನಾರೋಗ್ಯವಿದ್ದರೆ ಅವರು ಆಯುಕ್ತರು, ನಿರ್ದೇಶಕರಿಗೆ ಪತ್ರ ಬರೆದು ಪ್ರಭಾರ ವಹಿಸುವ ಕುರಿತು ಅನುಮತಿ ಕೇಳಿ ಇಲಾಖೆ ಸೂಚನೆ ಮೇರೆಗೆ ಬೇರೆಯವರಿಗೆ ಪ್ರಭಾವ ವಹಿಸಬೇಕು ಎಂದರು.
ಆದರೆ ಇಲ್ಲಿ ಪ್ರಭಾರ ಪ್ರಾಚಾರ್ಯರು ಮತ್ತೊಬ್ಬರಿಗೆ ಪ್ರಭಾವ ವಹಿಸುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಆಯುಕ್ತರು, ನಿರ್ದೇಶಕರಿಗೆ ಪತ್ರ ಬರೆದು ಅನುಮತಿ ಪಡೆದು ಕಾಲೇಜು ಅಭಿವೃದ್ಧಿ ಕಮಿಟಿ ಅಧ್ಯಕ್ಷರಾಗಿರುವ ಶಾಸಕರ ಗಮನಕ್ಕೆ ತಂದು, ಶಾಸಕರ ಸೂಚನೆ ಮೇರೆಗೆ ಇತರರಿಗೆ ಪ್ರಭಾರ ಕೊಡಬೇಕು ಎಂದ ಅವರು, ಆದರೆ ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಪ್ರಭಾರ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.
ತಾವು ಬಂದು ಸಭೆ ನಡೆಸುವ ತನಕ ತಡೆಯುವಂತೆ ಪ್ರೋ.ಜಗದೇವಿ ಕಲಶೆಟ್ಟಿ ಅವರಿಗೆ ಸೂಚನೆ ನೀಡಿದರೂ ಡಾ.ಜಾಜಿ ದೇವೆಂದ್ರಪ್ಪ ಅವರಿಗೆ ಪ್ರಭಾರ ವಹಿಸಿದ್ದು ಸರಿಯಲ್ಲ. ಆದ್ದರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣ ಉತ್ತಮವಾಗಿದ್ದರೆ ಮಾತ್ರ ಕಾಲೇಜಿನ ಗುಣಮಟ್ಟ ಮತ್ತು ಫಲಿತಾಂಶ ಚೆನ್ನಾಗಿ ಬರುತ್ತದೆ. ಆದ್ದರಿಂದ ಸದ್ಯ ಪ್ರೋ. ಜಗದೇವಿ, ಕಲಶೆಟ್ಟಿಯವರು ಪುನ: ಪ್ರಭಾರ ಪ್ರಾಚಾರ್ಯ ಮುಂದುವರೆಯಲಿದ್ದು, ಶೀಘ್ರವೇ ಮತ್ತೊಮ್ಮೆ ಸಭೆ ನಡೆಸಿ ನಿಯಮ ಅನುಸಾರ ಅರ್ಹರಿರುವ ಬೇರೆಯವರಿಗೆ ಪ್ರಭಾರ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆತಿಥಿ ಉಪನ್ಯಾಸಕರು ತಮಗೆ ಸೇವಾ ಭದ್ರತೆ ಕೊಡುವಂತೆ ಹಾಗೂ ಸರ್ಕಾರದಿಂದ ಎಂ.ಎ. ಇಂಗ್ಲಿಷ್ ಕೋರ್ಸ್ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕ ಗಾಲಿ ಜನಾರ್ದನರೆಡ್ಡಿ ಶೀಘ್ರದಲ್ಲಿ ಗಂಗಾವತಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಲ್ಲಿದ್ದು, ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆದಿದ್ದು ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಕೊಲ್ಲಿ ನಾಗೇಶ್ವರ ರಾವ್ ಸರಕಾರಿ ಮಹಾವಿದ್ಯಾಲಯ ಬೃಹತ್ ಕಾಲೇಜು ಆಗಿದ್ದು ಇಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮತ್ತು ಕಾಲೇಜಿನ ಅಭಿವೃದ್ಧಿಗೆ ಭೂ ದಾನಿಗಳ ಸಹಕಾರದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಪ್ರಾಧ್ಯಾಪಕರಾದ ಕರಿಗೂಳಿ ಹಾಗೂ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಪ್ರಭಾರ ಪ್ರಾಚಾರ್ಯರ ಹುದ್ದೆ ಸಂಬಂಧಪಟ್ಟಂತೆ ಗೊಂದಲವಿದ್ದು, ನಿಯಮಾನುಸಾರ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ. ಸಿಡಿಸಿ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಿರುವುದು ಸರಿಯಿದ್ದು, ಪ್ರಭಾರ ವಹಿಸುವ ವಿಚಾರದಲ್ಲಿ ಈ ಹಿಂದಿನ ಪ್ರಾಚಾರ್ಯರು ಎಲ್ಲಾ ಪ್ರಾಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಡಿಸಿ ಅಧ್ಯಕ್ಷರ ಸೂಚನೆಯಂತೆ ನಡೆದುಕೊಳ್ಳಬೇಕಿತ್ತು. ಅವಸರದ ಪರಿಣಾಮ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ ಎಂದರು.
ಭೂದಾನಿಗಳ ಆಕ್ರೋಶ: ನಾಗೇಶ ರಾವ್ ಸರಕಾರಿ ಮಹಾವಿದ್ಯಾಲಯಕ್ಕೆ 5 ಎಕರೆ ಭೂಮಿ ದಾನ ನೀಡಿದ್ದಕೊಲ್ಲಿ ನಾಗೇಶರಾವ್ ಕುಟುಂಬದ ರಾಧ ಕೊಲ್ಲಿ, ಮಲ್ಲಿಕಾರ್ಜುನ ಕೊಲ್ಲಿ ಕಾಲೇಜಿಗೆ ಭೇಟಿ ನೀಡಿ ಸಿಡಿಸಿ ಅಧ್ಯಕ್ಷರು ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಅವರನ್ನು ಸನ್ಮಾನಿಸಿ ಕಾಲೇಜಿನ ಪ್ರಾಚಾರ್ಯರೂ ಸೇರಿ ಸಿಡಿಸಿಯವರು ಭೂದಾನಿಗಳಿಗೆ ಸರಿಯಾದ ಗೌರವ ಕೊಡಲ್ಲ. ಕಾಲೇಜ್ ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ನಮ್ಮ ಕುಟುಂಬ ಕಾಲೇಜಿಗೆ ಭೂಮಿ ಕೊಟ್ಟಿದ್ದು ಸಾರ್ಥಕವಾಗುತ್ತಿಲ್ಲ ಎಂಬ ಭಾವ ಬರುತ್ತಿದೆ. ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ಕೆ.ಆರ್.ಪಿ ಪಕ್ಷದ ಕಾರ್ಯಕರ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.