ನಗರಸಭಾ ಅಧ್ಯಕ್ಷರ ವಿರುದ್ಧ ಆಡಳಿತಾರೂಢ ಸದಸ್ಯರಿಂದ ಅವಿಶ್ವಾಸ ಗೊತ್ತುವಳಿ ಪತ್ರ
ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್- ಬಿಜೆಪಿ ರಾಜಕೀಯ ತಂತ್ರ; ಸ್ವಯಂ ಆಗಿ ರಾಜೀನಾಮೆ ನೀಡಲು ಅಧ್ಯಕ್ಷರ ನಿರ್ಧಾರ
Team Udayavani, Mar 9, 2022, 2:18 PM IST
ವಿಶೇಷ ವರದಿ-ಗಂಗಾವತಿ: ನಗರಸಭೆಯ ಅಧ್ಯಕ್ಷೆ ಮಾಲಾಶ್ರೀ ಸಂದೀಪ್ ವಿರುದ್ದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದಿದ್ದು ಅಧ್ಯಕ್ಷರ ವಿರುದ್ಧ 18 ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಜಿಲ್ಲಾಧಿಕಾರಿ ಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಗರಸಭೆಯ 35 ಸ್ಥಾನಗಳಲ್ಲಿ 17 ಕಾಂಗ್ರೆಸ್, ಬಿಜೆಪಿ 14 ಜೆಡಿಎಸ್ 02 ಹಾಗೂ ಪಕ್ಷೇತರ 02 ಸದಸ್ಯರಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಆಡಳಿತ ಮಂಡಳಿಗೆ ಜೆಡಿಎಸ್ ಬಿಜೆಪಿ ತಲಾ ಒರ್ವ ಸದಸ್ಯರ ಬೆಂಬಲವಿದ್ದು ಅವಿಶ್ವಾಸ ಗೊತ್ತುವಳಿಗೆ 17 ಕಾಂಗ್ರೆಸ್ ಹಾಗೂ ಒರ್ವ ಜೆಡಿಎಸ್ ಸದಸ್ಯ ಸಹಿ ಹಾಕಿ ಜಿಲ್ಲಾಧಿಕಾರಿಗಳಿಗೆ ಬೇಗನೆ ಅವಿಶ್ವಾಸಗೊತ್ತುವಳಿ ಸಭೆ ನಡೆಸುವಂತೆ ಮನವಿ ಮಾಡಲಾಗಿದೆ.
ಕಾಂಗ್ರೆಸ್‌ನಿಂದ ವಿಜೇತರಾಗಿರುವ ಮಾಲಾಶ್ರೀ ಸಂದೀಪ್ ಇವರು ಕಳೆದ 15 ತಿಂಗಳಿಂದ ಆಡಳಿತ ನಡೆಸುತ್ತಿದ್ದು ಆಡಳಿತಾರೂಢ ಸದಸ್ಯರ ಮನವಿಗೆ ಸ್ಪಂದನೆ ಮಾಡುತ್ತಿಲ್ಲ. ಆದ್ದರಿಂದ ಅವಿಶ್ವಾಸಗೊತ್ತುವಳಿ ಮೂಲಕ ಕೆಳಗಿಳಿಸಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ(ಹೈಕಮಾಂಡ್) ಸೂಚನೆ ನೀಡಿದ್ದರಿಂದ 18 ಸದಸ್ಯರ ಸಹಿಯನ್ನೊಳಗೊಂಡ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿ ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗದಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ಇಲ್ಲ. ಇದುವರೆಗೂ ಪಕ್ಷದ ಹೈಕಮಾಂಡ್ ಹಾಗೂ ಸದಸ್ಯರ ಅಪೇಕ್ಷೆಯಂತೆ ಆಡಳಿತ ನಡೆಸುತ್ತಿದ್ದು ಈ ಮಧ್ಯೆ ತಮ್ಮ ವಿರುದ್ಧ ಅವಿಶ್ವಾಸಗೊತ್ತುವಳಿ ಯಾಕೆ ಮಂಡನೆಯಾಗಿದೆ ಗೊತ್ತಾಗುತ್ತಿಲ್ಲ. ತನ್ನನನ್ನು ಕರೆದು ರಾಜೀನಾಮೆ ನೀಡುವಂತೆ ಹೇಳಿದ್ದರೆ ಮನಪೂರ್ವಕವಾಗಿ ರಾಜೀನಾಮೆ ಸಲ್ಲಿಸುತ್ತಿದೆ ಎಂದು ಅಧ್ಯಕ್ಷೆ ಮಾಲಾಶ್ರೀ ತಿಳಿಸಿದ್ದಾರೆ.
ಕಳೆದ ಭಾರಿ ನಗರಸಭೆಯ ಗದ್ದುಗೆ ಹಿಡಿಯಲು ಯತ್ನಿಸಿ ವಿಫಲವಾಗಿದ್ದ ಬಿಜೆಪಿ. ಕಾಂಗ್ರೆಸ್ ಪಕ್ಷ ಸದಸ್ಯರ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಯಶಸ್ವಿಗೊಳಿಸಿ ಕಾಂಗ್ರೆಸ್ ನ ಕೆಲ ಸದಸ್ಯರನ್ನು ಬಿಜೆಪಿ ಸೆಳೆದು ಅಧಿಕಾರ ಹಿಡಿಯಲು ಯತ್ನ ನಡೆಸಿದ್ದು ಈಗಾಗಲೇ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಅವರ ಜತೆ ಜೆಡಿಎಸ್, ಪಕ್ಷೇತರ, ಅತೃಪ್ತ ಕಾಂಗ್ರೆಸ್ ಕೆಲವರು ಮತ್ತು ಬಿಜೆಪಿ ಸದಸ್ಯರು ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪುನಃ ಹೈಕಮಾಂಡ್‌ಗೆ ಹತ್ತಿರದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದು ಕಳೆದ 20 ವರ್ಷಗಳಿಂದ ನಗರಸಭೆಯ ಹಿಡಿತ ಕೈ ತಪ್ಪದಂತೆ ಯೋಜನೆ ರೂಪಿಸಿದ್ದು ಸ್ವತಹ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಖಾಡಕ್ಕೆ ಇಳಿದಿದ್ದು ಮೇಲಿಂದ ಮೇಲೆ ಸಭೆ ನಡೆಸಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಅಥವಾ ಮಾಜಿ ಎಂಎಲ್ಸಿ ಎಚ್.ಆರ್. ರಚಿಸುವ ನಾಗರೀಕ ವೇದಿಕೆ ಕಡೆ ವಾಲದಂತೆ ಕಾರ್ಯತಂತ್ರ ಹೆಣೆದಿದ್ದಾರೆ.
ಹೈಕಮಾಂಡ್ ಆದೇಶದಂತೆ ನಗರಸಭೆ ಅಧ್ಯಕ್ಷೆ ಮಾಲಾಶ್ರೀ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದೆ. ಪ್ರತಿಯೊಂದು ವರ್ಗದವರಿಗೆ ಆಧ್ಯತೆ ನೀಡುವ ಉದ್ದೇಶವಿರಬಹುದು. ಸದ್ಯ ಹೈಕಮಾಂಡ್ ನ ಸೂಚನೆ ಪಾಲನೆ ಮಾಡಲಾಗಿದೆ. ಮುಂದಿನ ಬೆಳವಣಿಗೆ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಒಂದು ಭಾರಿ ಬಿಜೆಪಿಯವರು ಅಧಿಕಾರ ಪಡೆಯಲು ಯತ್ನಿಸಿ ಕೈ ಸುಟ್ಟುಕೊಂಡಿದ್ದಾರೆ. ಬಿಜೆಪಿಯವರು ನಗರದ ಪ್ರಭಾವಿಗಳ ಮನೆಯಲ್ಲಿ ಸಭೆ ನಡೆಸಿದ ಮಾತ್ರಕ್ಕೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಪುನಃ ಅಧಿಕಾರ ಹಿಡಿಯುವಷ್ಟು ಬಹುಮತವಿದೆ. ಜಾತ್ಯತೀತ ನಿಲುಗಳ ಬಗ್ಗೆ ಮಾತನಾಡುವ ನಗರದ ಹಿರಿಯ ಮುಖಂಡರು ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿಗೆ ಬೆಂಬಲಿಸಿದರೆ ಮುಂದೆ ಇದಕ್ಕೆ ಪ್ರತಿಫಲ ಪಡೆಯಲು ಸಿದ್ದರಾಗಿರಬೇಕು.
-ಶಾಮೀದ್ ಮನಿಯಾರ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು.
ಕಳೆದ ಒಂದುವರೆ ವರ್ಷದಿಂದ ನಗರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಾಂಗ್ರೆಸ್ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಆಡಳೀತಾರೂಢ ಸದಸ್ಯರೇ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಬಿಜೆಪಿಯವರು ಸಹ ಅವಿಶ್ವಾಸಗೊತ್ತುವಳಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಗುತ್ತದೆ. ಕಳೆದ ಭಾರಿ ತಮ್ಮ ತಾಯಿ ಜಯಶ್ರೀ ಸಿದ್ದಾಪೂರ ಅವರನ್ನು ಬಿಜೆಪಿ ಸದಸ್ಯರು ಶಾಸಕರು ಸಂಸದರು ಪಕ್ಷದ ಮುಖಂಡರು ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದು ಈ ಭಾರಿ ಬಿಜೆಪಿಗೆ ಅಧಿಕಾರ ಸಿಗುವ ಸಾಧ್ಯತೆ ಇದೆ.
-ರಾಚಪ್ಪ ಸಿದ್ದಾಪೂರ ಬಿಜೆಪಿ ಮುಖಂಡರು ನಗರಸಭೆ ಮಾಜಿ ಸದಸ್ಯರು.
ಕಳೆದ ಒಂದುವರೆ ವರ್ಷದಿಂದ ನಗರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಸದ್ಯ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ನವರು ಅವಿಶ್ವಾಸಗೊತ್ತುವಳಿ ಮಂಡನೆ ಮಾಡಿದ್ದಾರೆ. ಸಾಧಕ ಬಾಧಕ ಪರಿಶೀಲಿಸಿ ನಾಗರೀಕ ವೇದಿಕೆ ರಚನೆ ಮಾಡಿಕೊಂಡು ಪಕ್ಷಾತೀತವಾಗಿ ಆಡಳಿತ ನಡೆಸುವವರಿಗೆ ಜೆಡಿಎಸ್ ಒರ್ವ ಸದಸ್ಯ ಪಕ್ಷೇತರರು ಬಿಜೆಪಿಯವರು ಮತ್ತು ಅತೃಪ್ತ ಕಾಂಗ್ರೆಸ್ ಸದಸ್ಯರ ಬೆಂಬಲದೊಅದಿಗೆ ಸಹಕಾರ ನೀಡಲಾಗುತ್ತದೆ. ಈಗಾಗಲೇ ನಗರಸಭೆಯ ಕೆಲ ಸದಸ್ಯರು ತಮ್ಮ ಭೇಟಿಯಾಗಿ ಮಾತನಾಡಿದ್ದಾರೆ.
-ಎಚ್.ಆರ್.ಶ್ರೀನಾಥ ಮಾಜಿ ಎಂಎಲ್ಸಿ
ಈಗಾಗಲೇ ತಮ್ಮ ವಿರುದ್ಧ ಸ್ವಪಕ್ಷೀಯರು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ. ಹೈಕಮಾಂಡ್ ಹೇಳಿದ್ದರೆ ತಾವೇ ಸ್ವತಹ ರಾಜೀನಾಮೆ ಸಲ್ಲಿಸುತ್ತಿದ್ದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರನ್ನು ಭೇಟಿಯಾಗಿ ಮುಂದಿನ ನಿರ್ಧಾರ ಮಾಡಲಾಗುತ್ತದೆ.
-ಮಾಲಾಶ್ರೀ ಸಂದೀಪ್ ಅಧ್ಯಕ್ಷರು ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.